ಕೋಣ ಕೊಂದ ತೋಟದ ಮಾಲೀಕ ಸೇರಿ ಏಳು ಮಂದಿ ಸೆರೆ ; ಬೀಡಾಡಿ ಕೋಣದ ಉಪಟಳ ತಾಳಲಾರದೆ ಹತ್ಯೆ !

30-08-21 02:20 pm       Mangaluru Correspondent   ಕ್ರೈಂ

ಕೋಣವನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಉಳ್ಳಾಲ ಪೊಲೀಸರು ತೋಟದ ಮಾಲೀಕ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ‌

ಮಂಗಳೂರು, ಆಗಸ್ಟ್ 30: ಕೋಟೆಕಾರು ಸಮೀಪದ ಮಾಡೂರಿನಲ್ಲಿ ಕೋಣವನ್ನು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಉಳ್ಳಾಲ ಪೊಲೀಸರು ತೋಟದ ಮಾಲೀಕ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ‌

ನಿನ್ನೆ ಸಂಜೆ ಬೀಡಾಡಿ ಕೋಣವೊಂದನ್ನು ಮಾಡೂರಿನ ಬಲ್ಯ ಎಂಬಲ್ಲಿ ಗುಂಡಿಕ್ಕಿ ಬಳಿಕ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳದಲ್ಲಿ ಬಜರಂಗದಳ ಕಾರ್ಯಕರ್ತರು ಸೇರಿದ್ದು ಕೋಣವನ್ನು ಕೊಂದಿರುವ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. 

ಪರಿಶೀಲನೆ ನಡೆಸಿದಾಗ, ಕೋಣದ ಉಪಟಳ ತಾಳಲಾರದೆ ತೋಟದ ಮಾಲೀಕನೇ ಕೆಲವು ಯುವಕರೊಂದಿಗೆ ಸೇರಿ ಕೊಲೆ ಮಾಡಿಸಿದ್ದು ಬೆಳಕಿಗೆ ಬಂದಿತ್ತು. ಕೋಣವನ್ನು ಹತ್ಯೆಗೈದು ಬಳಿಕ ಮಾಂಸ ಮಾಡಿ ಒಯ್ಯಲು ಪ್ಲಾನ್ ಮಾಡಲಾಗಿತ್ತು. ಆದರೆ, ಗುಡ್ಡದಲ್ಲಿ ಗುಂಡು ಸಿಡಿದ ಸದ್ದು ಕೇಳಿ ಆಸುಪಾಸಿನ ಜನರು ಸೇರಿದ್ದು ಬಜರಂಗದಳ ಕಾರ್ಯಕರ್ತರ ಗಮನಕ್ಕೆ ತಂದಿದ್ದರು. 

ಪೊಲೀಸರು, ತೋಟದ ಮಾಲೀಕ ಜಯರಾಮ ರೈ (58), ಆತನಿಗೆ ಸಹಕರಿಸಿದ್ದ ಮಲ್ಲೂರು ನಿವಾಸಿ ಉಮ್ಮರ್(37) ಕೋಟೆಕಾರಿನ ಉಮ್ಮರ್ ಫಾರೂಕ್ (42), ಸೋಮೇಶ್ವರದ ನಿವಾಸಿಗಳಾದ ಮಹಮ್ಮದ್ ಹುಸೇನ್ (26), ಮಹಮ್ಮದ್ ಕಲಂದರ್ (43),  ಮಲ್ಲೂರಿನ ಮೊಹಮ್ಮದ್ ಸಿನಾನ್ (22), ಸೋಮೇಶ್ವರದ ಇಲ್ಯಾಸ್ (22) ಬಂಧಿತರು. 

ಬಂಧಿತರಿಂದ ಬೊಲೆರೋ ಪಿಕಪ್ ವಾಹನ, ಸ್ಕೂಟರ್, ಎಸ್ ಬಿಬಿಎಲ್ ಬಂದೂಕು, ಮಚ್ಚು, ಜೀವಂತ ಗುಂಡು, ಹಗ್ಗ, ಮಾಂಸ ಮಾಡಲು ಬಳಸುವ ಹಲಗೆ, ಪ್ಲಾಸ್ಟಿಕ್ ಚೀಲಗಳು ಸೇರಿ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

Read: ತೋಟಕ್ಕೆ ನುಗ್ಗಿದ್ದ ಬೀಡಾಡಿ ಕೋಣಕ್ಕೆ ಗುಂಡಿಕ್ಕಿ ಕತ್ತು ಕೊಯ್ದು ಕೊಲೆ ; ಕೋಟೆಕಾರಲ್ಲಿ ಪೈಶಾಚಿಕ ಕೃತ್ಯ !! 

Buffalo killed by slitting throat in Thokottu seven arrested by Ullal police. The animal was killed because the man was irritated by it coming into his field.