ಬ್ರೇಕಿಂಗ್ ನ್ಯೂಸ್
29-08-21 08:56 pm Mangaluru Correspondent ಕ್ರೈಂ
ಉಳ್ಳಾಲ, ಆ.29: ಅಡಿಕೆ ತೋಟದಲ್ಲಿ ಮೇಯಲು ಬರುತ್ತಿದ್ದ ಬೀಡಾಡಿ ಕೋಣವೊಂದನ್ನು ತೋಟದ ಮಾಲೀಕನೇ ಬಾಡಿಗೆ ಯುವಕರಿಂದ ಕೊಲ್ಲಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ಕೋಟೆಕಾರು ಗ್ರಾಮದ ಮಾಡೂರಿನ ಬಲ್ಯ ಎಂಬಲ್ಲಿ ಘಟನೆ ನಡೆದಿದೆ.
ಇಂದು ಸಂಜೆ ವೇಳೆಗೆ ಮಾಡೂರಿನ ಬಲ್ಯದ ನಿರ್ಜನ ಪ್ರದೇಶದ ಗುಡ್ಡದಲ್ಲಿ ಗುಂಡಿನ ಸದ್ದು ಕೇಳಿಸಿದ್ದು ಕೂಡಲೇ ಅಲ್ಲಿಗೆ ಸ್ಥಳೀಯರು ಧಾವಿಸಿದ್ದಾರೆ. ಸ್ಥಳೀಯರು ಬಂದಾಗ ನಿರ್ಜನ ಪ್ರದೇಶದ ಗುಡ್ಡದಲ್ಲಿ ಬೀಡಾಡಿ ಕೋಣವು ಕತ್ತು ಕೊಯ್ದ ಸ್ಥಿತಿಯಲ್ಲಿ ಸತ್ತು ಬಿದ್ದಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಜರಂಗದಳದ ಕಾರ್ಯಕರ್ತರು ಜಮಾಯಿಸಿದ್ದಾರೆ. ಕೋಣ ಸತ್ತು ಬಿದ್ದಿದ್ದ ಸ್ಥಳಕ್ಕೆ ಸ್ಥಳೀಯ ಜಮೀನು ಮಾಲೀಕ ಜಯರಾಮ ಶೆಟ್ಟಿ ಎಂಬವರು ಬಂದಿದ್ದು ತನ್ನ ತೋಟಕ್ಕೆ ದಾಳಿ ಮಾಡುತ್ತಿದ್ದ ಕೋಣವನ್ನ ಅನ್ಯ ಕೋಮಿನ ವ್ಯಕ್ತಿಗಳಿಂದ ಗುಂಡಿಕ್ಕಿ ಕೊಲ್ಲಿಸಿರುವುದಾಗಿ ಸ್ಥಳೀಯರಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಕೂಡಲೇ ಬಜರಂಗದಳ ಸಂಘಟನೆಯ ಪ್ರಮುಖರಾದ ಪವಿತ್ರ ಕೆರೆಬೈಲು, ಅರ್ಜುನ್ ಮಾಡೂರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಉಳ್ಳಾಲ ಪಿಐ ಸಂದೀಪ್ ಅವರು ಜಯರಾಮ್ ರೈ ಅವರನ್ನ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬಂದು ಜಯರಾಮ್ ಶೆಟ್ಟಿಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಆ ವ್ಯಕ್ತಿ ಉಲ್ಟಾ ಹೊಡೆದಿದ್ದಾರೆ. ತಾನೇನು ಕೋಣವನ್ನ ಕೊಲ್ಲಿಸಿಲ್ಲ. ಯಾರೋ ಮೂವರು ತಮ್ಮ ಕೋಣ ನಾಪತ್ತೆಯಾಗಿದೆ ಎಂದು ಬಂದಿದ್ದರು ಎಂದಿದ್ದಾರೆ. ಆದರೆ, ಹಂತಕರು ಜಯರಾಮ್ ಶೆಟ್ಟಿಯ ಮನೆಯ ಮುಂದೆಯೇ ಸ್ಕೂಟರನ್ನ ಬಿಟ್ಟು ಓಡಿದ್ದು ಸಂಶಯಕ್ಕೆ ಕಾರಣವಾಗಿದೆ.






ಸ್ಥಳೀಯರು ಗುಂಡಿನ ಶಬ್ದ ಕೇಳಿ ಸ್ಥಳದಲ್ಲಿ ಸೇರಿದ್ದರು. ಪೊಲೀಸರು ಹಂತಕರು ಯಾರೆಂದು ಜಯರಾಮ ಶೆಟ್ಟಿಯ ಮನೆಯವರ ಬಳಿ ವಿಚಾರಿಸಿದ್ದು ಕೋಣವನ್ನು ಹಿಡಿಯಲು ಬಂದಿದ್ದವರ ಮೊಬೈಲ್ ಸಂಖ್ಯೆಯನ್ನ ಪೊಲೀಸರಿಗೆ ನೀಡಿದ್ದಾರೆ. ಹಂತಕರ ಮೊಬೈಲ್ ಸಂಖ್ಯೆ ಆಧಾರದಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕೋಣವನ್ನ ಕೊಲೆಗೈದ ಮೂವರು ಯುವಕರು ತಾವು ಬಂದಿದ್ದ ಸ್ಕೂಟರನ್ನ ಜಯರಾಮ್ ಶೆಟ್ಟಿ ಮನೆ ಮುಂದೆಯೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಕೂಟರಲ್ಲಿ ಎರಡು, ಮೂರು ನಂಬರ್ ಪ್ಲೇಟ್ ದೊರಕಿದೆ. ಕೊಲೆಯಾದ ಕೋಣವನ್ನ ಮಹಜರು ನಡೆಸಲಾಗುತ್ತಿದೆ. ಕೈಗೆ ಸಿಗದೆ ಓಡಾಡುತ್ತಿದ್ದ ಬೀಡಾಡಿ ಕೋಣವನ್ನು ಸ್ಥಳೀಯರೇ ಸೇರಿ ಕೊಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಹಂತಕರನ್ನು ಕೂಡಲೇ ಪತ್ತೆಹಚ್ಚುವಂತೆ ಸ್ಥಳೀಯ ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
Buffalo killed by Gun Shot and slitting throat for entering field in Thokottu, Mangalore. The Incident took place at kotekar. The incident came to light after people heard the Gunshot sound. It is said that the field owner Jayaram Shetty was irritated by the buffalo entering his land and hence hired a guy to kill the animal.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am