ಬ್ರೇಕಿಂಗ್ ನ್ಯೂಸ್
24-10-21 11:40 am Mangalore Reporter ಕ್ರೈಂ
ಮಂಗಳೂರು, ಅ.24 : ನಗರದ ಎಂ.ಜಿ. ರಸ್ತೆಯಲ್ಲಿರುವ ವಿಲಾಸಿ ಪಬ್ ಓನಿಕ್ಸ್ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ. ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಬರ್ಕೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ನೇತೃತ್ವದಲ್ಲಿ ದಾಳಿ ನಡೆದಿದೆ.

ಪಬ್ ಅನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ತೆರೆಯಲಾಗುತ್ತಿತ್ತು. ತಡರಾತ್ರಿ ವರೆಗೂ ಜೋರಾದ ಧ್ವನಿವರ್ಧಕಗಳನ್ನು ಬಳಸಿ ಅಕ್ಕಪಕ್ಕದ ರಸ್ತೆಯ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡಲಾಗುತ್ತಿತ್ತು. ಪಬ್ ನಿಂದ ಹೊರಬರುವವರು ಅಶ್ಲೀಲವಾಗಿ ವರ್ತಿಸುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು ಎಂದು ಕಮಿಷನರ್ ಸಾಹೇಬ್ರಿಗೆ ದೂರು ಬಂದಿತ್ತೆಂದು ಪೊಲೀಸರ ಹೇಳಿಕೆ.

ಪೊಲೀಸ್ ದಾಳಿ ವೇಳೆ, ಒಳಗಡೆ ಗ್ರಾಹಕರಿದ್ದು ಯುವಕ - ಯುವತಿಯರು ಲಿಕ್ಕರ್ ಅಮಲಿನಲ್ಲಿ ತೇಲಾಡುತ್ತಿದ್ದರು. ಜೋರು ಸದ್ದಿನಲ್ಲಿ ಡಿಜೆ ಹಾಕಿ, ಮೈಮರೆತಿದ್ದರು ಎನ್ನುವುದನ್ನು ನಿರೂಪಿಸಲು ವಿಡಿಯೋ ತೆಗೆದು ಹರಿಯಬಿಟ್ಡಿದ್ದಾರೆ. ಆದರೆ, ಪಬ್ ನಲ್ಲಿ ಈ ರೀತಿ ಇರೋದು ಕಾಮನ್. ನಿಗದಿತ ಸಮಯ 11 ಗಂಟೆ ಮೀರಿಯೂ ಕಾರ್ಯಾಚರಿಸುತ್ತಿತ್ತು ಎನ್ನುವ ಕಾರಣಕ್ಕೆ ಪೊಲೀಸರು ಒಳಗೆ ತೆರಳಿ ಪರಿಶೀಲನೆ ನಡೆಸಿದ್ದಾರಂತೆ. ಆದರೆ ಅಲ್ಲಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಜೆಗೆ ಬಳಸಿದ್ದ ಕಂಪ್ಯೂಟರ್ ಇನ್ನಿತರ ಪರಿಕರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಬಕಾರಿ ಕಾಯ್ದೆ, ಕೆಪಿ ಆಕ್ಟ್ ಮತ್ತು ಎಪಿಡೆಮಿಕ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ದಾಳಿ ಹಿಂದೆ ಯಾರಿದ್ದಾರೆ ?
ಮಂಗಳೂರಿನಲ್ಲಿ ಹಲವು ಕಡೆ ಪಬ್ ಗಳಿದ್ದು ರಾತ್ರಿ 12- 1 ಗಂಟೆ ವರೆಗೂ ಕಾರ್ಯಾಚರಣೆ ಮಾಡುವುದು ಕಾಮನ್ ಆಗಿದೆ. ಗೋಲ್ಡ್ ಫಿಂಚ್ ಸೇರಿದಂತೆ ಹಲವೆಡೆ ಐಷಾರಾಮಿ ಪಬ್ ಗಳಿದ್ದು ಪೊಲೀಸರ ತಿಳುವಳಿಕೆಯಲ್ಲೇ ನಡೆದುಬಂದಿದೆ. ಐದಾರು ವರ್ಷಗಳಿಂದ ಈ ಬಗ್ಗೆ ಯಾವುದಕ್ಕೂ ದಾಳಿ ನಡೆಸದ ಪೊಲೀಸರು ಓನಿಕ್ಸ್ ಮೇಲೆ ದಿಢೀರ್ ದಾಳಿ ನಡೆಸಿದ್ದಕ್ಕೆ ಯಾರ ಒತ್ತಡ ಕೆಲಸ ಮಾಡಿದೆ ಎನ್ನುವ ಪ್ರಶ್ನೆಗಳು ಕೇಳಿಬರುತ್ತಿವೆ. ಅವಧಿ ಮೀರಿ ನಡೆಯುತ್ತಿದ್ದರೂ, ನೋಟೀಸ್ ನೀಡಿ ದಂಡ ಹಾಕಿಸಲು, 11 ಗಂಟೆಗೆ ಪೊಲೀಸರು ತೆರಳಿ ಬಂದ್ ಮಾಡಿಸಲು ಅವಕಾಶ ಇರುತ್ತದೆ. ಇದನ್ನು ಪೊಲೀಸರಿಗೆ ಹೇಳಿಕೊಡಬೇಕಿಲ್ಲ. ಆದರೆ, ಇಲ್ಲಿ ಪೊಲೀಸರು ಒಳಗೆ ತೆರಳಿ ತಪಾಸಣೆಯ ನಾಟಕ ಮಾಡಿದ್ದಲ್ಲದೆ, ಗ್ರಾಹಕರ ವಿಡಿಯೋ ಮಾಡಿ ಮಾಧ್ಯಮಕ್ಕೆ ಹರಿಯಬಿಟ್ಟಿದ್ದಾರೆ. ಹಿಂದೆ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ, ವಿಡಿಯೋ ಮಾಡಿ ಹರಿಯಬಿಟ್ಟ ರೀತಿಯಲ್ಲೇ ಪೊಲೀಸರು ವರ್ತಿಸಿದ್ದಾರೆ. ಇದಕ್ಕೆ ಆಡಳಿತ ಪಕ್ಷದ ಪ್ರಮುಖರು ಆಪ್ತರು ಮತ್ತು ಕೆಲವು ಸೂತ್ರಧಾರರ ಹುಕುಂ ವರ್ಕೌಟ್ ಆಗಿದೆ ಎನ್ನುವ ಮಾತು ಕೇಳಿಬಂದಿದೆ.

Acting on the complaint from public, the city crime brance (CCB) police on the night of Saturday October 23 raided ONYX pub located on MG Road here. It is alleged that the pub was kept open beyond the stipulated hours. High decibel sound system was used for playing music which was creating nuisance to residents living nearby.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm