ಲೈಂಗಿಕ ಕಿರುಕುಳ ; ತಲೆಮರೆಸಿಕೊಂಡ ವಕೀಲ ಕೆ.ಎಸ್.ಎನ್ ರಾಜೇಶ್ ಪತ್ತೆಗೆ ದೇಶಾದ್ಯಂತ ಲುಕೌಟ್ ನೋಟೀಸ್ !

09-11-21 10:52 am       Mangaluru Correspondent   ಕ್ರೈಂ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ವಕೀಲ ಕೆ.ಎಸ್.ಎನ್ ರಾಜೇಶ್ ಪತ್ತೆಗಾಗಿ ಮಂಗಳೂರು ಪೊಲೀಸರು ದೇಶಾದ್ಯಂತ ಲುಕೌಟ್ ನೋಟೀಸು ಜಾರಿಗೊಳಿಸಲು ಮುಂದಾಗಿದ್ದಾರೆ.

ಮಂಗಳೂರು, ನ.9: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ವಕೀಲ ಕೆ.ಎಸ್.ಎನ್ ರಾಜೇಶ್ ಪತ್ತೆಗಾಗಿ ಮಂಗಳೂರು ಪೊಲೀಸರು ದೇಶಾದ್ಯಂತ ಲುಕೌಟ್ ನೋಟೀಸು ಜಾರಿಗೊಳಿಸಲು ಮುಂದಾಗಿದ್ದಾರೆ.

ದೇಶದ ಎಲ್ಲ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಪೊಲೀಸ್ ಠಾಣೆಗಳಿಗೆ ಲುಕ್ ಔಟ್ ನೋಟೀಸ್ ಹೋಗಲಿದೆ. ಅಲ್ಲದೆ, ಈತ ಕಂಡುಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತಿಳಿಸುವಂತೆ ಹೇಳಿ ನೋಟೀಸನ್ನು ಬಸ್ ನಿಲ್ದಾಣ, ಹೊಟೇಲ್, ಪೊಲೀಸ್ ಠಾಣೆ ಆಸುಪಾಸಿನಲ್ಲಿ ಅಂಟಿಸುವ ಪ್ರಕ್ರಿಯೆ ನಡೆಯಲಿದೆ.

ವಿದೇಶಕ್ಕೆ ಪರಾರಿಯಾಗುವುದನ್ನು ತಪ್ಪಿಸಲು ಮತ್ತು ತಲೆಮರೆಸಿಕೊಂಡು ವಿವಿಧ ಕಡೆಗಳಿಗೆ ಸಂಚರಿಸುವುದನ್ನು ತಪ್ಪಿಸುವುದಕ್ಕಾಗಿ ಲುಕ್ ಔಟ್ ನೋಟೀಸ್ ಜಾರಿ ಮಾಡಲಾಗುತ್ತಿದೆ. ವಿಮಾನ ನಿಲ್ದಾಣಗಳಿಗೆ ತೆರಳಿದ ಕೂಡಲೇ ಅಲ್ಲಿನ ಭದ್ರತಾ ಅಧಿಕಾರಿಗಳು ಪತ್ತೆ ಮಾಡಲಿದ್ದಾರೆ. ಈಗಾಗಲೇ ವಕೀಲ ರಾಜೇಶ್ ಅವರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಇದಲ್ಲದೆ, ವಕೀಲನ ಪತ್ತೆಗಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಪೊಲೀಸರ ನೆರವನ್ನೂ ಮಂಗಳೂರು ಪೊಲೀಸರು ಕೇಳಿದ್ದಾರೆ. ಮಂಗಳೂರು ಪೊಲೀಸರನ್ನು ಒಳಗೊಂಡ ಆರು ತಂಡವನ್ನು ರಚಿಸಲಾಗಿದ್ದು, ವಿವಿಧ ಕಡೆಗಳಿಗೆ ತೆರಳಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಆದರೆ, ವಕೀಲ ರಾಜೇಶ್ ತಿರುಪತಿ, ಚೆನ್ನೈ, ಹೈದರಾಬಾದ್ ಹೀಗೆ ವಿವಿಧ ಕಡೆಗಳಿಗೆ ತೆರಳುತ್ತಿದ್ದು ಪೊಲೀಸರಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಲುಕೌಟ್ ನೋಟೀಸನ್ನು ಬರೆಯಲಾಗಿದ್ದು, ಅದನ್ನು ವಿವಿಧ ಠಾಣೆಗಳಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಅ.18ರಂದು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ವಕೀಲ ಕೆ.ಎಸ್.ಎನ್ ರಾಜೇಶ್ ನಾಪತ್ತೆಯಾಗಿದ್ದರು. 

ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ; ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕರ ವಿರುದ್ಧ ಎಫ್ಐಆರ್ ! 

ವಕೀಲನ ಪ್ರಕರಣ ಮುಚ್ಚಿ ಹಾಕಲು ಯತ್ನ ; ಮಹಿಳಾ ಎಸ್ಐ ಸೇರಿ  ಇಬ್ಬರು ಸಸ್ಪೆಂಡ್, ಸಂತ್ರಸ್ತ ಯುವತಿಗೆ ಬೆದರಿಸಿದ್ದ ಮಹಿಳೆ ಬಂಧನ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿ ವಕೀಲನ ಅಜ್ಞಾತ ಸ್ಥಳಕ್ಕೆ ಬಿಟ್ಟು ಬಂದಿದ್ದ ವ್ಯಕ್ತಿಯ ಬಂಧನ 

Mangalore Police issue lookout notice for Lawyer KSN Rajesh who is absconding in Sexual Harassment case. A second year law student has accused Rajesh, Special Public Prosecutor of the Lokayukta, of sexual assault in his chamber on September 25. The victim’s friend filed a complaint accusing the advocate and his friend, a woman activist, of forcing her in a city police station to sign a document denying sexual harassment of her friend. These two complaints were registered at the Women’s Police Station on October 18.