ಬ್ರೇಕಿಂಗ್ ನ್ಯೂಸ್
22-10-21 04:27 pm Mangaluru Correspondent ಕರಾವಳಿ
ಮಂಗಳೂರು, ಅ.22: ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೀಡಾದ ವಕೀಲನ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಉರ್ವಾ ಠಾಣೆಯ ಮಹಿಳಾ ಎಸ್ಐ ಮತ್ತು ಇನ್ನೊಬ್ಬ ಪೊಲೀಸ್ ಸಿಬಂದಿಯನ್ನು ನಗರ ಕಮಿಷನರ್ ಶಶಿಕುಮಾರ್ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ಉರ್ವಾ ಠಾಣೆಯ ಎಸ್ಐ ಶ್ರೀಕಲಾ ಮತ್ತು ಪ್ರಮೋದ್ ಅಮಾನತುಗೊಂಡವರು.
ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿ ಕಚೇರಿ ಹೊಂದಿರುವ ವಕೀಲ ಕೆ.ಎಸ್.ಎನ್ ರಾಜೇಶ್, ತನ್ನ ಕಚೇರಿಗೆ ಇಂಟರ್ನ್ ಶಿಪ್ ಬರುತ್ತಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪ ಕೇಳಿಬಂದಿತ್ತು. ಈ ಕುರಿತ ಆಡಿಯೋ ವೈರಲ್ ಆದಬಳಿಕ ಅ.18ರಂದು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಆರೋಪಿ ವಕೀಲ ತಲೆಮರೆಸಿಕೊಂಡಿದ್ದು, ಅದಕ್ಕೂ ಮುನ್ನ ಉರ್ವಾ ಠಾಣೆಯಲ್ಲಿ ಪೊಲೀಸರ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕಲು ನಡೆಸಿದ್ದ ಕೃತ್ಯ ಬಯಲಾಗಿದೆ.
ಕೆ.ಎಸ್.ಎನ್. ರಾಜೇಶ್ ಮಂಗಳೂರಿನಲ್ಲಿ ಪ್ರಭಾವಿ ವಕೀಲನಾಗಿದ್ದು, ಇದೇ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿ ಮತ್ತು ಆಕೆಯ ಸ್ನೇಹಿತೆಗೆ ಬೆದರಿಕೆ ಒಡ್ಡುವ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ. ಇದೇ ವೇಳೆ, ವಕೀಲನ ಆಪ್ತಳು ಎನ್ನಲಾಗಿರುವ ಮಹಿಳಾ ಜಾಗೃತಿ ವೇದಿಕೆಯ ಪವಿತ್ರಾ ಆಚಾರ್ಯ ಎಂಬವಳು, ಸಂತ್ರಸ್ತ ಯುವತಿಯ ಸ್ನೇಹಿತೆಗೆ ವಕೀಲನ ಜೊತೆ ಸೇರಿ ಬೆದರಿಕೆ ಒಡ್ಡಿದ್ದರು. ಅಲ್ಲದೆ, ಈ ಬಗ್ಗೆ ಉರ್ವಾ ಠಾಣೆಗೆ ಯುವತಿಯನ್ನು ಕರೆದೊಯ್ದು ಅಲ್ಲಿ ಕ್ಷಮಾಪಣಾ ಪತ್ರ ಬರೆಸಿಕೊಂಡಿದ್ದಲ್ಲದೆ, ಅಫಿಡವಿಟ್ ಬಗ್ಗೆ ಸಹಿ ಹಾಕಿಸಿಕೊಂಡಿದ್ದರು.
ಉರ್ವಾ ಠಾಣೆಯಲ್ಲಿ ಈ ರೀತಿ ಮಾಡಲು ಅಲ್ಲಿನ ಮಹಿಳಾ ಎಸ್ಐ ಶ್ರೀಕಲಾ ಮತ್ತು ಅಲ್ಲಿನ ಸಿಬಂದಿ ಪ್ರಮೋದ್ ಸಹಕರಿಸಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸದೆ, ಯುವತಿಗೆ ಅನ್ಯಾಯ ಆಗಿರುವುದು ತಿಳಿದಿದ್ದರೂ, ಅದನ್ನು ಮುಚ್ಚಿ ಹಾಕಲು ಆರೋಪಿ ವಕೀಲನ ಜೊತೆ ಸೇರಿ ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಇದೇ ವೇಳೆ, ಆರೋಪಿ ವಕೀಲ ಮತ್ತು ಸಂತ್ರಸ್ತ ಯುವತಿ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಆದರೆ, ಯುವತಿಯ ಸ್ನೇಹಿತೆ ಹಣಕ್ಕಾಗಿ ಬೇಡಿಕೆ ಇಟ್ಟು ಆಡಿಯೋವನ್ನು ವೈರಲ್ ಮಾಡಿದ್ದಾಳೆಂದು ವಕೀಲನ ಆರೋಪವಾಗಿತ್ತು. ಇದೇನಿದ್ದರೂ, ಮೇಲಧಿಕಾರಿಗಳಿಗೆ ತಿಳಿಸದೆ ಠಾಣೆಯಲ್ಲಿ ಪಂಚಾಯ್ತಿ ಮಾಡಿರುವುದು ತಪ್ಪಾಗಿದ್ದು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಕರ್ತವ್ಯಲೋಪ ಘಟನೆ ಬಗ್ಗೆ ಎಸಿಪಿ ಪರಮೇಶ್ವರ ಹೆಗಡೆ ಬಳಿ ಕಮಿಷನರ್ ವರದಿ ಕೇಳಲಾಗಿತ್ತು. ಎಸಿಪಿ ವರದಿ ಆಧರಿಸಿ, ಇಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸಂತ್ರಸ್ತ ಯುವತಿಯ ಸ್ನೇಹಿತೆ ಠಾಣೆಯಲ್ಲಿ ತನ್ನ ಹೇಳಿಕೆಯನ್ನು ದಾಖಲು ಮಾಡಿಕೊಳ್ಳದೇ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ, ಠಾಣೆಯಲ್ಲಿ ಕ್ಷಮಾಪಣಾ ಪತ್ರ ಮತ್ತು ಅಫಿಡವಿಟ್ ಬರೆಸಿಕೊಂಡಿದ್ದು ತಪ್ಪು ಎಂದು ಕಮಿಷನರ್ ಹೇಳಿದ್ದಾರೆ.
ವಕೀಲನ ಪರವಾಗಿ ಬೆದರಿಸಿದ್ದ ಮಹಿಳೆ ಬಂಧನ
ಇದೇ ವೇಳೆ, ಮಹಿಳಾ ಜಾಗೃತಿ ವೇದಿಕೆಯ ಪವಿತ್ರಾ ಆಚಾರ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯ ಸ್ನೇಹಿತೆಯನ್ನು ಕೌನ್ಸಿಲಿಂಗ್ ಕರೆದೊಯ್ಯುತ್ತೀನಿ ಎಂದು ಹೇಳಿ ಉರ್ವಾ ಮೈದಾನಕ್ಕೆ ಕರೆದೊಯ್ದು ಬೆದರಿಕೆ ಹಾಕಿದ್ದಳು. ವಕೀಲರು ಪ್ರಭಾವಿ ಇದ್ದಾರೆ, ನೀನು ಎದುರು ಹಾಕ್ಕೊಂಡರೆ ನಿನ್ನ ಕೇರಿಯರ್ ಹಾಳಾಗುತ್ತೆ. ಎಲ್ಲಿಯೂ ಸಪೋರ್ಟ್ ಸಿಗಲ್ಲ. ಜೀವದಲ್ಲಿ ಉಳೀತೀಯಾ ಇಲ್ವಾ ಎಂದು ಹೇಳಿ ಬೆದರಿಸಿದ್ದಳು. ಈ ಬಗ್ಗೆ ಯುವತಿ ಮಹಿಳಾ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ಸಂಬಂಧಿಸಿ ಪವಿತ್ರಾ ಆಚಾರ್ಯಳನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯ ಸ್ನೇಹಿತೆಯೂ ಈ ಹಿಂದೆ ವಕೀಲನ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದು, ಆನಂತರ ಕೆಲಸ ಬಿಟ್ಟು ಹೋಗಿದ್ದಳು ಎನ್ನಲಾಗಿದೆ.
ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ; ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕರ ವಿರುದ್ಧ ಎಫ್ಐಆರ್ !
Mangalore Sexual Assault Lawyer KSN Rajesh case Two Urwa Police Staff Suspended. Women SI Srikala and Promodh have been suspended for showing negligence in duty. A social activist who threatened the victim to not file the case against KSN Rajesh, Pavithra Achaya also has been arrested by the Police. A law student from Mangaluru has filed a complaint against special public prosecutor of Lokayukta Court that he attempted to rape her. In a complaint to women's police station at Pandeshwar, the student filed a complaint against KSN Rajesh and stated that in August, she had joined as an intern under him at Karangalpady. In the meantime, Rajesh allegedly used to force her for sex.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm