ಬ್ರೇಕಿಂಗ್ ನ್ಯೂಸ್
18-03-22 10:52 pm HK Desk news ಕ್ರೈಂ
ನವದೆಹಲಿ, ಮಾ.18: ಪ್ರಾಥಮಿಕ ಶಾಲೆಯಲ್ಲಿದ್ದಾಗ ಶಿಕ್ಷಕಿ ಅವಮಾನಿಸಿದ್ದನ್ನೇ ಸೇಡು ಇರಿಸಿಕೊಂಡಿದ್ದ ವ್ಯಕ್ತಿಯೊಬ್ಬ 30 ವರ್ಷಗಳ ನಂತರ ಆಕೆಯನ್ನು ಇರಿದು ಕೊಂದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.
1990ರಲ್ಲಿ ಶಿಕ್ಷಕಿಯಾಗಿದ್ದ ಮಾರಿಯಾ ವೆರ್ಲಿಂಡೆನ್ ಏಳು ವರ್ಷದ ಶಾಲಾ ಬಾಲಕ ಗುಂಟರ್ ಉವೆಂಟ್ಸ್ ಎಂಬಾತನ ಬಗ್ಗೆ ಮಾಡಿದ್ದ ಕಾಮೆಂಟ್‌ಗಳನ್ನು ಸೇಡು ಆಗಿ ಇರಿಸಿಕೊಂಡಿದ್ದ ಆತ ಮೂರು ದಶಕದ ಬಳಿಕ ಅದನ್ನು ತೀರಿಸಿಕೊಂಡಿದ್ದಾನೆ.
2020ರ ನವೆಂಬರ್ ನಲ್ಲಿ ಆಂಟ್‌ವರ್ಪ್ ನಗರದ ಹೆರೆಂಟಲ್ಸ್ ಎಂಬಲ್ಲಿನ ತನ್ನ ಮನೆಯಲ್ಲಿ 59 ವರ್ಷದ ವೆರ್ಲಿಂಡೆನ್ ಎಂಬ ಶಿಕ್ಷಕಿಯ ಘೋರ ಹತ್ಯೆ ನಡೆದಿತ್ತು. ಘಟನೆ ಬಗ್ಗೆ ಬೆಲ್ಜಿಯಂ ಪೊಲೀಸರು ತನಿಖೆ ನಡೆಸಿದ್ದು ನೂರಾರು ಡಿಎನ್‌ಎ ಮಾದರಿಗಳನ್ನು ಪಡೆದು ತನಿಖೆ ಕೈಗೊಂಡರೂ ಕೊಲೆಗಾರನನ್ನು ಹುಡುಕಲು ಸಾಧ್ಯವಾಗಿರಲಿಲ್ಲ. ಕೊನೆಗೆ, ಆಕೆಯ ಪತಿ ಸಾಕ್ಷಿಗಳಿಗಾಗಿ ಸಾರ್ವಜನಿಕ ಮನವಿಯನ್ನು ಮಾಡಿದ್ದರು.
ಆಕೆಯ ದೇಹದ ಮೇಲೆ 101 ಬಾರಿ ಇರಿಯಲಾಗಿದ್ದು ಭೀಭತ್ಸ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಶವದ ಪಕ್ಕದಲ್ಲಿದ್ದ ಡೈನಿಂಗ್ ಟೇಬಲ್ ಮೇಲಿದ್ದ ಹಣದ ಪರ್ಸ್ ಮುಟ್ಟದೆ ಇದ್ದದ್ದು ನೋಡಿದರೆ ಹಣಕ್ಕಾಗಿ ನಡೆದ ಕೊಲೆ ಅಲ್ಲ ಎಂಬುದು ಪೊಲೀಸರಿಗೆ ತಿಳಿದುಬಂದಿತ್ತು. 2020ರ ನವೆಂಬರ್ 20ರಂದು ಕೊಲೆ ನಡೆದಿತ್ತು. ಹದಿನಾರು ತಿಂಗಳ ನಂತರ ಇತ್ತೀಚೆಗೆ ಆರೋಪಿ ಗುಂಟರ್ ಉವೆಂಟ್ಸ್ ತನ್ನ ಸ್ನೇಹಿತರ ಬಳಿ ಕೊಲೆ ವಿಚಾರವನ್ನು ಹೇಳಿಕೊಂಡು ಸಾಧನೆ ಎಂಬಂತೆ ಬಿಂಬಿಸಿದ್ದ.
ಅತ್ಯಂತ ನಿಗೂಢವಾಗಿದ್ದ ಕೊಲೆ ಪ್ರಕರಣದ ಬಗ್ಗೆ ತಿಳಿಯುತ್ತಲೇ ಆತನ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ, ತನಿಖೆ ಕೈಗೊಂಡ ಪೊಲೀಸರು ಆರೋಪಿ ಉವೆಂಟ್ಸ್ ನನ್ನು ಬಂಧಿಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕುರುಹುಗಳೊಂದಿಗೆ ಹೋಲಿಸಲು ಉವೆಂಟ್ಸ್ ಡಿಎನ್ಎ ಮಾದರಿಯನ್ನು ಪಡೆಯಲಾಗಿದೆ.
30 Years After Humiliation at School, Ex-Pupil Admits to Stabbing Teacher 101 Times.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
15-09-26 10:31 am
HK News Staffer
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am