ಬ್ರೇಕಿಂಗ್ ನ್ಯೂಸ್
09-01-26 08:30 pm HK News Desk ದೇಶ - ವಿದೇಶ
ಟೆಹ್ರಾನ್, ಜ.9 : ಇರಾನ್ನಲ್ಲಿ ಅಮೆರಿಕ ಪ್ರೇರಿತ ಹಿಂಸಾಚಾರ, ಪ್ರತಿಭಟನೆ ಭುಗಿಲೆದ್ದಿರುವಾಗಲೇ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೈಗಳು ಇರಾನಿ ಜನರ ರಕ್ತದಿಂದ ತೋಯಿಸಿದೆ. ಇರಾನ್ ಸಾವಿರಾರು ಗೌರವಾನ್ವಿತ ಜನರ ರಕ್ತದಿಂದ ಕಟ್ಟಲ್ಪಟ್ಟಿದೆ. ಯಾವುದೇ ವಿದೇಶಿ ಶಕ್ತಿಗಳಿಗೆ ಇಸ್ಲಾಮಿಕ್ ರಿಪಬ್ಲಿಕ್ ಬಗ್ಗಲ್ಲ ಎಂದು ಪರೋಕ್ಷವಾಗಿ ಡೊನಾಲ್ಡ್ ಟ್ರಂಪ್ ಗೆ ಎಚ್ಚರಿಕೆ ನೀಡಿದ್ದಾರೆ.
ಇರಾನ್ನಲ್ಲಿ ವಿದೇಶಿ ಬೆಂಬಲಿತ ಪ್ರತಿಭಟನೆ ಅಥವಾ ಭಯೋತ್ಪಾದಕ ಏಜೆಂಟ್ಗಳನ್ನು ಸಹಿಸುವುದಿಲ್ಲ. ಕೆಲವು ಗಲಭೆಕೋರರು ಸರ್ಕಾರಿ ಆಸ್ತಿಗೆ ಹಾನಿ ಮಾಡುವ ಮೂಲಕ ಟ್ರಂಪ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಟ್ರಂಪ್ ತಮ್ಮ ದೇಶದ ಬಗ್ಗೆ ಚಿಂತಿಸಲಿ, ನಮ್ಮ ದೇಶದ ಯುವಜನರು ಇರಾನ್ ಬಗ್ಗೆ ಚಿಂತಿಸಿ. ಇರಾನ್ ವಿದೇಶಿ ಒತ್ತಡಕ್ಕೆ ಮಣಿಯುವುದಿಲ್ಲ ಎನ್ನುವುದನ್ನು ಸಾರಿ ಹೇಳುತ್ತದೆ ಎಂದು ಖಮೇನಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಇರಾನ್ ಯುವಕರು ದೇಶದ ಪರವಾಗಿ ಒಂದಾಗಿ ನಿಲ್ಲಬೇಕು. ಬಾಹ್ಯ ಒತ್ತಡಗಳಿಗೆ ಮಣಿಯದೆ ಏಕತೆಯನ್ನು ಕಾಪಾಡಿಕೊಳ್ಳಿ. ಮತ್ತು ಯಾವಾಗಲೂ ಯಾವುದೇ ಸ್ಥಿತಿ ಎದುರಿಸಲು ಸಿದ್ಧರಾಗಬೇಕು. ಏಕೆಂದರೆ ಒಗ್ಗಟ್ಟಿನ ಬಲ ಹೊಂದಿರುವ ಒಂದು ರಾಷ್ಟ್ರವು ಯಾವುದೇ ಶತ್ರು ದೇಶವನ್ನು ಸೋಲಿಸುವ ಶಕ್ತಿಯನ್ನು ಹೊಂದಿರುತ್ತದೆ ಎಂದು ಹೇಳುವ ಮೂಲಕ ಅವರು ಇರಾನಿನ ಯುವಕರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ. ಅಮೆರಿಕನ್ ಅಧ್ಯಕ್ಷರ ಕೈಗಳು 1,000ಕ್ಕೂ ಹೆಚ್ಚು ಇರಾನಿಯನ್ನರ ರಕ್ತದ ಕಲೆಗಳಿಂದ ಕೂಡಿವೆ ಎಂದು ಹೇಳುವ ಮೂಲಕ, ಕಳೆದ ಜೂನ್ ತಿಂಗಳಲ್ಲಿ ಇರಾನ್ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ. ಅಮೆರಿಕ ನಡೆಸಿದ್ದ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಇರಾನಿ ಜನರು ಸಾವಿಗೀಡಾಗಿದ್ದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಖಮೇನಿ, ಪ್ರತಿಭಟನಕಾರರು ಅಮೆರಿಕದ ಅಧ್ಯಕ್ಷರನ್ನು ಸಂತೃಪ್ತಿಗೊಳಿಸಲು ಬಯಸಿದ್ದಾರೆ. ಆತನಿಗೆ ತನ್ನ ದೇಶವನ್ನು ಹೇಗೆ ಮುನ್ನಡೆಸಬೇಕೆಂದು ತಿಳಿದಿದ್ದರೆ, ಅದೇ ಕೆಲಸವನ್ನು ಮಾಡುತ್ತಿದ್ದರು. ಅಲ್ಲಿಯೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಮೆರಿಕವನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ. ಇರಾನ್ ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ, ಹಿಂಸೆಯಿಂದಾಗಿ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ.
Amid ongoing protests in Iran, Supreme Leader Ayatollah Ali Khamenei accused US President Donald Trump of having Iranian blood on his hands and warned that Iran will not bow to foreign pressure. He called on Iranian youth to stand united against external interference and condemned what he described as US-backed unrest in the country.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am