ಬ್ರೇಕಿಂಗ್ ನ್ಯೂಸ್
10-01-26 04:29 pm Bangalore Correspondent ಕರ್ನಾಟಕ
ಬೆಂಗಳೂರು, ಜ.10 : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ನೇರವಾಗಿ ಎದುರು ಹಾಕ್ಕೊಂಡು ಜರೆಯಲಾರಂಭಿಸಿದ್ದು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಮುಂದಿನ ವಿಧಾನಸಭೆ ಚುನಾವಣೆಗೆ ರಾಜ್ಯದ ಹಲವು ಕಡೆ ಬಿಜೆಪಿ- ಜೆಡಿಎಸ್ ನಾಯಕರು ಬಹಿರಂಗ ತಯಾರಿ ಆರಂಭಿಸಿದ್ದಾರೆ. ಇದೇ ವೇಳೆ, ಕುಮಾರಸ್ವಾಮಿ ಮರಳಿ ರಾಜ್ಯ ರಾಜಕೀಯಕ್ಕೆ ಮರಳುವ ಸುಳಿವು ನೀಡುವಂತೆ ಎಐ ವಿಡಿಯೋ ರಿಲೀಸ್ ಆಗಿದೆ.
ಈಗಾಗಲೇ ಬಿಜೆಪಿಯ ಪ್ರತಾಪ್ ಸಿಂಹ, ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಕುಮಾರಸ್ವಾಮಿ ಹೆಸರು ತಮ್ಮದೇ ಧಾಟಿಯಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೀಗ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವ ಪರಿ ನೋಡಿದರೆ ವಿಪಕ್ಷ ನಾಯಕ ಸ್ಥಾನವನ್ನೇ ಕಬ್ಜಾ ಮಾಡಿರುವಂತೆ ತೋರಿದೆ. ಬಳ್ಳಾರಿ ಪ್ರಕರಣದಲ್ಲಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗಳು ರಾಜ್ಯ ಸರ್ಕಾರವನ್ನಷ್ಟೇ ಅಲುಗಾಡಿಸಿದ್ದಲ್ಲದೆ, ಕಾಂಗ್ರೆಸ್ ನಾಯಕರನ್ನೇ ಕಂಪಿಸುವಂತೆ ಮಾಡಿದೆ. ಡಿಸಿಎಂ ಡಿಕೆಶಿ ಮತ್ತು ಪರಮೇಶ್ವರ್ ಅವರನ್ನು ನೇರವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇವರಿಬ್ಬರ ಸಮರ್ಥನೆಗೂ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಇತ್ತೀಚೆಗೆ ಬಳ್ಳಾರಿ ಪ್ರಕರಣದಲ್ಲಿ ಕುಮಾರಸ್ವಾಮಿ ಎದುರು ಬಿದ್ದಿರುವುದನ್ನು ಮನಗಂಡ ಡಿಸಿಎಂ ಡಿಕೆ ಶಿವಕುಮಾರ್, ಜೆಡಿಎಸ್ - ಬಿಜೆಪಿಯೊಂದಿಗೆ ವೀಲಿನವಾಗೋದು ಬೆಟರ್, ಹಾಗೆ ವಿಲೀನ ಆದರೆ ಕರ್ನಾಟಕದಲ್ಲಿ ಎರಡೇ ಪಕ್ಷಗಳ ನಡುವೆ ನೇರ ಸ್ಪರ್ಧೆ ಏರ್ಪಡುತ್ತದಲ್ವಾ ಎಂದು ಹೇಳಿ ಎಚ್ಡಿಕೆಯನ್ನು ವ್ಯಂಗ್ಯ ಮಾಡಿದ್ದರು. ಆದರೆ ಕುಮಾರಸ್ವಾಮಿ ಆಕ್ಟಿವ್ ಆಗಿರುವುದು ನೋಡಿದರೆ ಮತ್ತೆ ರಾಜ್ಯ ರಾಜಕಾರಣದತ್ತ ಚಿತ್ತ ಹರಿಸಿರುವುದು ಸ್ಪಷ್ಟವಾಗಿದೆ. 2028 ರ ಮಹಾಕದನಕ್ಕೆ ದೆಹಲಿ ಮಟ್ಟದಲ್ಲೇ ರಣತಂತ್ರ ರೂಪಿಸಲಾಗ್ತಿದ್ದು, ಹೆಚ್ಡಿಕೆ ಎಂಟ್ರಿಗೆ ಬಿಜೆಪಿ ಹೈಕಮಾಂಡ್ ಕೂಡ ಸುಳಿವು ನೀಡಿದೆ ಎನ್ನುತ್ತಿವೆ ಪಕ್ಷದ ಆಪ್ತ ಮೂಲಗಳು. ಇದಕ್ಕೆ ಪೂರಕ ಎನ್ನುವಂತೆ, ಅವರ ಅಭಿಮಾನಿಗಳು ಎಐ ವಿಡಿಯೋ ರಿಲೀಸ್ ಮಾಡಿದ್ದಾರೆ.
ʻಟಾಕ್ಸಿಕ್ʼ ಸಿನಿಮಾ ಟೀಸರ್ ಮಾದರಿಯಲ್ಲೇ ಹೆಚ್ಡಿಕೆ ಕುರಿತು ಅಭಿಮಾನಿಗಳು ʻಡ್ಯಾಡಿ ಈಸ್ ಹೋಮ್ʼ ಹೆಸರಲ್ಲಿ ಎಐ ವಿಡಿಯೋ ಸೃಷ್ಟಿಸಿ ರಿಲೀಸ್ ಮಾಡಿದ್ದಾರೆ. ಈ ಮೂಲಕ ಮತ್ತೆ ರಾಜ್ಯ ರಾಜಕಾರಣ ಎಂಟ್ರಿಯ ಸುಳಿವು ಕೊಟ್ಟಿದ್ದು, ಜೆಡಿಎಸ್ ಹೊಸ ದಾಳ ಉರುಳಿಸಿರುವುದು ಸ್ಪಷ್ಟವಾಗಿದೆ. ಮುಂದಿನ ಚುನಾವಣೆಗೆ ಎರಡು ವರ್ಷ ಇದ್ದರೂ 2026ರ ಆರಂಭದಲ್ಲೇ ಈ ರೀತಿಯ ಬೆಳವಣಿಗೆ ಆಗಿರುವುದು ಕಾಂಗ್ರೆಸ್ ನಾಯಕತ್ವ ಬದಲಾವಣೆ ಕುರಿತ ಕೂಗು ಕೇಳಿಬಂದಿರುವುದು, ಡಿಕೆಶಿ ಸಿಎಂ ಸ್ಥಾನಕ್ಕೆ ಹೊಯ್ದಾಟ ನಡೆಸಿ ವಿಫಲವಾಗಿರುವುದರ ಬೆನ್ನಲ್ಲೇ ಆಗಿದೆ ಎನ್ನುವುದು ವಿಶೇಷ. ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿ ಎಚ್ಡಿಕೆಯನ್ನು ಮುಂದಿಟ್ಟು ಬಿಜೆಪಿ ದಾಳ ಉರುಳಿಸುತ್ತಿದೆಯಾ ಎನ್ನುವ ಸಂಶಯ ದಟ್ಟವಾಗಿದೆ.
The wait ends in 2028#HDKumaraswamy #karnataka #jds #trendingvideo #HDK #toxic #kannada pic.twitter.com/OoGhjAtRI2
— Kumaraswamy for CM (@Kumaraswamy4cm) January 9, 2026
The release of an AI-generated video titled “Daddy Is Home” has triggered fresh political speculation about Union Minister H.D. Kumaraswamy’s return to active state politics in Karnataka. Kumaraswamy’s recent sharp attacks on the Congress-led state government, including direct criticism of Deputy CM D.K. Shivakumar and Home Minister G. Parameshwara in the Ballari case, have strengthened indications of his renewed state-level ambitions.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm