ಬ್ರೇಕಿಂಗ್ ನ್ಯೂಸ್
22-03-22 06:26 pm Mangalore Correspondent ಕ್ರೈಂ
ಉಳ್ಳಾಲ, ಮಾ.22 : ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಹಿಂದು ಮಹಿಳೆಯ ಜೊತೆ ಚಾಲಕ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಮನೆಯಲ್ಲಿ ಬೇಜಾರಾದರೆ ಕರೀರಿ, ನಾನೂ ನನ್ನ ಸ್ನೇಹಿತರು ಬಂದು ನಿಮಗೆ ಖುಷಿ ನೀಡುತ್ತೇವೆಂದು ಹೇಳಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು ಆರೋಪಿಯನ್ನ ಉಳ್ಳಾಲ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಉಳ್ಳಾಲದ 48 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಆಟೋ ಚಾಲಕ, ಕುತ್ತಾರು ನಿವಾಸಿ ಸಮೀರ್ (22) ನನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮಾ.21 ರಂದು ಬೆಳಗ್ಗೆ ಏಳು ಗಂಟೆಗೆ ಕುತ್ತಾರು ಭಂಡಾರಬೈಲ್ ರಸ್ತೆಯ ಅಂಚಿನಲ್ಲಿ ಕೆಲಸಕ್ಕೆ ತೆರಳಲೆಂದು ಮಹಿಳೆ ನಿಂತಿದ್ದು ದಾರಿಯಲ್ಲಿ ಬಂದ ಆಟೋ ರಿಕ್ಷಾ ಹತ್ತಿದ್ದರು. ಆಟೋ ರಿಕ್ಷಾ ಹತ್ತಿದ ಮಹಿಳೆ ತನ್ನನ್ನ ಪಂಪ್ ವೆಲ್ ವರೆಗೆ ಬಿಡುವಂತೆ ಆಟೋ ಚಾಲಕನಲ್ಲಿ ಹೇಳಿದ್ದಾರೆ. ಇಷ್ಟು ಹೇಳಿದ್ದೇ ತಡ ಸಮೀರ್, ತನ್ನ ಮೊಬೈಲ್ ನಂಬರ್ ಮಹಿಳೆಗೆ ಕೊಟ್ಟು ಅರ್ಜೆಂಟ್ ಬಾಡಿಗೆ ಇದ್ರೆ ತಿಳಿಸಿ ಎಂದು ಮಿಸ್ ಕಾಲ್ ಕೊಡಲು ಹೇಳಿದ್ದಾನೆ. ಬಾಡಿಗೆದಾರ ಮಹಿಳೆ ಚಾಲಕನನ್ನ ನಂಬಿ ಆತನ ಮೊಬೈಲಿಗೆ ಮಿಸ್ ಕಾಲ್ ಕೊಟ್ಟಿದ್ದಾರೆ.
ಆನಂತರ ಆಟೋ ಚಾಲನೆಯಲ್ಲಿದ್ದಾಗಲೇ ಸಮೀರ್ ಮಹಿಳೆಯನ್ನ ಉದ್ದೇಶಿಸಿ ನಿಮ್ಮ ಮನೆಯಲ್ಲಿ ಯಾರ್ಯಾರು ಇದ್ದಾರೆ ಎಂದು ಮಾತಿಗೆ ಶುರು ಮಾಡಿದ್ದಾನೆ. ಮನೆಯಲ್ಲಿ ಬೇಜಾರಾದ್ರೆ ಕರೀರಿ. ನಾನು ನಿಮ್ ಜೊತೆ ಮಲಗ್ತೀನಿ. ನಿಮ್ಮ ಮೈಕಟ್ಟು ಚಂದ ಇದೆ, ನಾನು, ನನ್ನ ಸ್ನೇಹಿತರು ನಿಮ್ ಮನೆಗೆ ಬಂದು ಖುಷಿ ಕೊಡ್ತೇವೆ ಎಂದು ಹೇಳಿದ್ದಾನಂತೆ. ಅದಲ್ಲದೆ, ಆಟೋ ಕಲ್ಲಾಪು ತಲಪುತ್ತಿದ್ದಂತೆಯೇ ಸಮೀರ್ ತನ್ನ ಕೈಯನ್ನು ಹಿಂದಕ್ಕೆ ಹಾಕಿ ಮಹಿಳೆಯ ಎದೆಯನ್ನು ಸ್ಪರ್ಶಿಸಿದ್ದಾನೆ.
ಪ್ರತಿಭಟಿಸಿದ ಪ್ರಯಾಣಿಕ ಮಹಿಳೆ ಬೊಬ್ಬೆ ಹೊಡೆದಿದ್ದು ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಆರೋಪಿ ಆಟೋ ರಿಕ್ಷಾವನ್ನ ಜೋರಾಗಿ ಓಡಿಸಿದ್ದು ಪಂಪ್ ವೆಲ್ ನಲ್ಲಿ ಮಹಿಳೆ ಇಳಿದು ಬಸ್ ಹತ್ತಿ ಹೋಗಿದ್ದಾರೆ. ಆನಂತರ ಬಸ್ ನಲ್ಲಿದ್ದ ಮಹಿಳೆಯ ಮೊಬೈಲಿಗೆ ಕರೆ ಮಾಡಿದ ಸಮೀರ್ ಅಶ್ಲೀಲವಾಗಿ ಮಾತನಾಡಿದ್ದಾನೆ.
ಸಂಜೆ ಮನೆಗೆ ಹಿಂತಿರುಗಿದ ಮಹಿಳೆ ತನ್ನ ಮಗನಲ್ಲಿ ನಡೆದ ವಿಚಾರ ತಿಳಿಸಿದ್ದಾರೆ. ಮಹಿಳೆಯ ಮಗ ಮತ್ತು ಸ್ನೇಹಿತ ಸೇರಿ ಆರೋಪಿ ರಿಕ್ಷಾ ಚಾಲಕ ಸಮೀರನಿಗೆ ಕರೆ ಮಾಡಿ ವಿಚಾರಿಸಿದ್ದು ನೀವು ಏನೋ ಮಾಡ್ತೀರಾ ಎಂದು ತಿರುಗಿ ಬೈದಿದ್ದಲ್ಲದೆ, ತಾಕತ್ತಿದ್ದರೆ ಕುತ್ತಾರಿಗೆ ಬನ್ನಿ. ನಿಮ್ಗೆ ಗತಿ ಕಾಣಿಸ್ತೇನೆ ಎಂದು ಆರೋಪಿ ಸಮೀರ್ ಬೆದರಿಕೆ ಹಾಕಿದ್ದಾನೆ. ಇಷ್ಟು ಮಾತ್ರವಲ್ಲದೆ ಮೊಬೈಲ್ ಮೂಲಕ ಆರೋಪಿ ಸಮೀರನ ಅಣ್ಣ ರಮೀಝ್ ಕೂಡ ಸಂತ್ರಸ್ತ ಮಹಿಳೆಯ ಮಗನನ್ನು ಉದ್ದೇಶಿಸಿ ನನ್ನ ತಮ್ಮನ ವಿಚಾರಕ್ಕೆ ಬಂದರೆ ಕಡಿದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಸಮೀರ್ ಮತ್ತು ರಮೀಝ್ ವಿರುದ್ಧ ದೂರು ದಾಖಲಾಗಿದ್ದು ಆರೋಪಿ ಸಮೀರನನ್ನು ಪೊಲೀಸರು ಬಂಧಿಸಿದ್ದಾರೆ.
Mangalore Muslim Auto driver arrested for sexually harassing Hindu woman in Ullal. The arrested has been identified as Sameer. Sameer has been arrested by Ullal police.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm