ಬ್ರೇಕಿಂಗ್ ನ್ಯೂಸ್
23-03-22 01:02 pm Mangalore Correspondent ಕ್ರೈಂ
ಮಂಗಳೂರು, ಮಾ.22: ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಕಾಣಿಕೆ ಹುಂಡಿಯನ್ನು ಎಣಿಸುವ ನೆಪದಲ್ಲಿ ಸರಕಾರದಿಂದ ನೇಮಕಗೊಂಡ ಬಿಜೆಪಿ ಪಕ್ಷದ ಟ್ರಸ್ಟಿಯಾಗಿರುವ ಮಹಿಳೆಯೊಬ್ಬರು ಹುಂಡಿ ಹಣವನ್ನು ಎಗರಿಸಿದ ಬಗ್ಗೆ ಆರೋಪ ಕೇಳಿಬಂದಿದ್ದು, ಇದರ ಸಿಸಿಟಿವಿ ವಿಡಿಯೋ ಹೊರಬಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಕಳೆದ ಫೆ.24ರಂದು ಕದ್ರಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯ ಹಣವನ್ನು ಎಣಿಸಲಾಗಿತ್ತು. ಎಲ್ಲ ಟ್ರಸ್ಟಿಗಳು, ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಹಣ ಎಣಿಸುವುದು ವಾಡಿಕೆ. ಈ ಬಾರಿ ಹಣ ಎಣಿಸುತ್ತಿರುವಾಗಲೇ ನಿವೇದಿತಾ ಶೆಟ್ಟಿ ಎಂಬ ಮಹಿಳಾ ಟ್ರಸ್ಟಿಯೊಬ್ಬರು 500 ರೂ. ನೋಟಿನ ಕಂತೆಯನ್ನು ಎಗರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸಂಘ ಪರಿವಾರದ ಇಬ್ಬರು ಟ್ರಸ್ಟಿಗಳು ಮಹಿಳೆಯನ್ನು ಟ್ರಸ್ಟಿ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದರು. ಅಲ್ಲದೆ, ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಎಜೆ ಶೆಟ್ಟಿ ತುರ್ತು ಸಭೆ ಕರೆದು ಮಹಿಳೆಯ ಬಳಿ ಸ್ಪಷ್ಟನೆಯನ್ನೂ ಕೇಳಿದ್ದರು.
ಆದರೆ ವಾರ ಕಳೆದರೂ, ಮಹಿಳೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರಲಿಲ್ಲ. ಈ ನಡುವೆ, ಸಂಘ ಪರಿವಾರದ ಕಡೆಯಿಂದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗೆ ದೂರು ಹೋಗಿತ್ತು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ದೂರು ನೀಡಲಾಗಿತ್ತು. ಇದರಂತೆ, ಸಚಿವೆ ಜೊಲ್ಲೆಯವರ ಪಿಎ ಆಗಿರುವ ವ್ಯಕ್ತಿ ಕದ್ರಿ ದೇವಸ್ಥಾನದ ಆಡಳಿತಾಧಿಕಾರಿಗೆ ಕರೆ ಮಾಡಿ, ತನಿಖೆಗೆ ಸೂಚಿಸಿದ್ದರು. ಇಷ್ಟಾಗುತ್ತಿದ್ದಂತೆ, ಆಡಳಿತಾಧಿಕಾರಿ ತಡಬಡಾಯಿಸಿದ್ದು ವಿಷಯವನ್ನು ಇತರ ಟ್ರಸ್ಟಿಗಳಿಗೆ ತಿಳಿಸಿದ್ದಾರೆ. ಕೆಲಹೊತ್ತಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮುಜರಾಯಿ ಇಲಾಖೆಯ ಸಚಿವರ ಪಿಎಗೆ ಫೋನ್ ಕರೆ ಮಾಡಿದ್ದಾರೆ ಎನ್ನಲಾಗಿದ್ದು, ಈ ವಿಚಾರದಲ್ಲಿ ನೀವು ಕೈಹಾಕುವುದು ಬೇಡ. ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಅಷ್ಟಕ್ಕೆ ಅಲ್ಲಿಗೆ, ಟ್ರಸ್ಟಿ ರಾಜಿನಾಮೆ ನಾಟಕ ಮುಗಿದು ಹೋಗಿತ್ತು. ರಾಜ್ಯಾಧ್ಯಕ್ಷರ ಆಪ್ತನೊಬ್ಬ ಕದ್ರಿಯಲ್ಲಿ ಟ್ರಸ್ಟಿಯಾಗಿದ್ದು ಆತನೇ ಇತರ ಟ್ರಸ್ಟಿಗಳನ್ನೂ ಬಾಯಿ ಮುಚ್ಚಿಸಿದ್ದಾನೆ ಎನ್ನುವ ಮಾಹಿತಿಗಳಿವೆ. ಆರೆಸ್ಸೆಸ್ ಮತ್ತು ವಿಶ್ವ ಹಿಂದು ಪರಿಷತ್ತಿನಲ್ಲಿ ಗುರುತಿಸಲ್ಪಟ್ಟ ಪುರುಷೋತ್ತಮ್ ಜೋಗಿ ಮತ್ತು ಮನೋಹರ್ ಅವರ ಬಾಯನ್ನೂ ಮುಚ್ಚಿಸಿದ್ದು, ಈ ಬಗ್ಗೆ ಧ್ವನಿ ಎತ್ತಿದರೆ ಇಡೀ ವ್ಯವಸ್ಥಾಪನಾ ಸಮಿತಿಯನ್ನೇ ಬರ್ಖಾಸ್ತುಗೊಳಿಸಿ ಮುಂದಿನ ಬಾರಿ ನಿಮಗೆ ಸ್ಥಾನ ಸಿಗದಂತೆ ಮಾಡುತ್ತೇವೆ ಎನ್ನುವ ಬೆದರಿಕೆ ಒಡ್ಡಲಾಗಿದೆ ಎನ್ನುವ ಮಾಹಿತಿಗಳು ಹರಿದಾಡುತ್ತಿದೆ. ಆರಂಭದಲ್ಲಿ ಎರಡು ಬಾರಿ ವ್ಯವಸ್ಥಾಪನಾ ಸಮಿತಿಯ ಸಭೆ ನಡೆದಿದ್ದಾಗ, ಕಾಣಿಕೆ ಹುಂಡಿಗೆ ಕನ್ನ ಹಾಕಿದ್ದನ್ನು ಪ್ರಶ್ನೆ ಮಾಡಿ ಮಹಿಳೆಯ ರಾಜಿನಾಮೆಗೆ ಆಗ್ರಹಿಸಿದ ಈ ಇಬ್ಬರು ವ್ಯಕ್ತಿಗಳು ಮೊನ್ನೆ ಸೋಮವಾರ ಸಭೆ ನಡೆದಾಗ ಉದ್ದೇಶಪೂರ್ವಕವಾಗಿಯೇ ದೂರವುಳಿದಿದ್ದರು.
ದೇವಸ್ಥಾನದ ಕಾಣಿಕೆ ಹುಂಡಿಯಿಂದಲೇ ಕಳವಾಗಿದೆ ಎನ್ನುವ ಬಗ್ಗೆ ಪಕ್ಷದ ಟ್ರಸ್ಟಿಗಳೇ ದೂರು ನೀಡಿದ್ದರೂ, ಪಕ್ಷದ ಅಧ್ಯಕ್ಷನಾಗಿರುವ ವ್ಯಕ್ತಿ ಒಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದು ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಹುಂಡಿ ಕಳವಿನ ಬಗ್ಗೆ ತನಿಖೆಯೂ ನಡೆಸದಂತೆ ಮತ್ತು ಮಹಿಳೆಯ ರಾಜಿನಾಮೆಯನ್ನೂ ಪಡೆಯದಂತೆ ಮಾಡುತ್ತಿರುವ ಪಕ್ಷದ ಅಧ್ಯಕ್ಷರ ನಡೆ ಸಂಘ ಪರಿವಾರದೊಳಗೇ ಅಸಮಾಧಾನ ಮೂಡಿಸಿದೆ. ಇದಲ್ಲದೆ, ಆರೋಪಿತ ಮಹಿಳೆ ಕಳೆದ ಒಂಬತ್ತು ವರ್ಷಗಳಿಂದ ದೇವಸ್ಥಾನ ಕಮಿಟಿಯಲ್ಲಿದ್ದು ನಡುವೆ ಕಾಂಗ್ರೆಸ್ ಸರಕಾರ ಇದ್ದಾಗ ಟ್ರಸ್ಟಿ ಸ್ಥಾನ ಕಳಕೊಂಡಿದ್ದರೂ, ಹುಂಡಿ ಎಣಿಕೆಗೆ ಮಾತ್ರ ತಪ್ಪಿಸುತ್ತಿರಲಿಲ್ಲ ಅನ್ನುವ ಮಾತುಗಳನ್ನು ದೇವಸ್ಥಾನದ ಒಳಗಿನವರು ಹೇಳುತ್ತಾರೆ. ಪ್ರಕರಣ ಮುಚ್ಚಿ ಹಾಕುವುದು ಖಾತ್ರಿಯಾಗುತ್ತಲೇ ಸಿಸಿಟಿವಿ ವಿಡಿಯೋ ಬಿಡುಗಡೆ ಮಾಡಲಾಗಿದ್ದು ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಕಾಣಿಕೆ ಹಾಕಿದರೆ, ಅದನ್ನು ಸರಕಾರ ಮುಸ್ಲಿಮರ ಮದ್ರಸಾಕ್ಕೆ ಹೋಗುತ್ತದೆ ಎಂದು ಗುಲ್ಲೆಬ್ಬಿಸಿದ ಪಕ್ಷದವರೇ ಈಗ ಕಾಣಿಕೆ ಹುಂಡಿ ಎಗರಿಸಿದರೂ ತನಿಖೆಯಾಗದಂತೆ ಮತ್ತು ಆರೋಪಿತರ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ತಡೆಯುವುದು ಇವರ ನೀತಿಯನ್ನೇ ಜನಸಾಮಾನ್ಯರು ಪ್ರಶ್ನೆ ಮಾಡುವಂತಾಗಿದೆ.
ಅಧ್ಯಕ್ಷರಿಂದಲೇ ಅಧಿಕ ಪ್ರಸಂಗ !
ಕದ್ರಿ ದೇವಸ್ಥಾನದಲ್ಲಿ ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಎಜೆ ಶೆಟ್ಟಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಬಾರಿ ಬಿಜೆಪಿ ಸರಕಾರ ಬಂದ ಸಂದರ್ಭದಲ್ಲಿ ಅಧ್ಯಕ್ಷರ ಬದಲಾವಣೆ ಆಗಬೇಕೆಂದು ಪ್ರಬಲ ಒತ್ತಾಯ ಕೇಳಿಬಂದಿತ್ತು. ಸಂಘ ಪರಿವಾರದ ಕಡೆಯವರು ಅಧ್ಯಕ್ಷರ ಬದಲಾವಣೆಗೆ ಒತ್ತಾಯಿಸಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೂಚನೆಯಂತೆ ಪರಿವಾರದ ಟ್ರಸ್ಟಿಗಳನ್ನು ಬಾಯಿ ಮುಚ್ಚಿಸಲಾಗಿತ್ತು. ವಿರೋಧ ಮಧ್ಯೆಯೇ ಎಂಟು ತಿಂಗಳ ಹಿಂದೆ ಎಜೆ ಶೆಟ್ಟರನ್ನೇ ಮತ್ತೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಇದೀಗ ಕಾಣಿಕೆ ಹುಂಡಿ ಕಳವಾದಾಗಲೂ, ಪಕ್ಷದ ಅಧ್ಯಕ್ಷರು ಮೂಗು ತೂರಿಸಿಕೊಂಡು ಮತ್ತೆ ಸಾರ್ವಜನಿಕ ವಲಯದಲ್ಲಿ ತೀವ್ರ ಮುಜುಗರಕ್ಕೀಡಾಗಿದ್ದಾರೆ.
A trustee of Kadri Lord Manjunatheshwara temple here, who was appointed by the government, stole the money collected in donations box of the temple. This act was captured by the CCTV cameras installed at the temple. The money collected in the temple donation boxes was counted and accounted for on February 24. Two days later, one of the trustees received a call from an unidentified woman to tell him that she had seen the said lady trustee stuffing Rs 500 currency notes into her blouse during the counting operation. She asked him to check the CCTV footage if he could not trust what she said.
28-12-24 06:57 pm
HK News Desk
Bidar Contractor suicide, Priyank Kharges, Ra...
27-12-24 04:07 pm
Manmohan Singh, Mangalore beach festival: ಮನಮ...
27-12-24 11:24 am
ಹೊಸ ವರ್ಷಕ್ಕೆ ಮತ್ತೆ ಜನರಿಗೆ ಗ್ಯಾರಂಟಿ ಶಾಕ್ ? ಲೀಟ...
26-12-24 11:39 pm
Bidar Contractor Suicide, Priyank Kharge: ಪ್ರ...
26-12-24 08:03 pm
28-12-24 09:46 pm
HK News Desk
Manmohan Singh Wiki Kannada; ಪಾಕ್ನಲ್ಲಿ ಜನನ,...
27-12-24 10:38 am
Manmohan Singh Death; ಆರ್ಥಿಕ ಕ್ರಾಂತಿಯ ಹರಿಕಾರ...
27-12-24 10:15 am
Dr Manmohan Singh, passes away: ಮಾಜಿ ಪ್ರಧಾನಿ,...
26-12-24 11:15 pm
Ajay Bhalla, Arif Khan: ಗಲಭೆ ಪೀಡಿತ ಮಣಿಪುರಕ್ಕೆ...
25-12-24 04:21 pm
28-12-24 10:49 pm
Mangalore Correspondent
Mangalore Kambala 2024: ಕ್ಯಾ.ಬ್ರಿಜೇಶ್ ಚೌಟ ಸಾರ...
28-12-24 07:35 pm
Puttur Accident, Mangalore: ಪುತ್ತೂರು ಪರ್ಲಡ್ಕದ...
28-12-24 12:14 pm
Mangalore Daiva, Kolya, Temple: ದೈವದ ವಲಸರಿ ನಡ...
27-12-24 11:02 pm
Mangalore, MCC Bank, Anil Lobo arrest, Police...
27-12-24 09:26 pm
28-12-24 04:26 pm
Mangalore Correspondent
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm