ಬ್ರೇಕಿಂಗ್ ನ್ಯೂಸ್
06-02-26 09:54 am HK News Desk ದೇಶ - ವಿದೇಶ
ಮೇಘಾಲಯ, ಫೆ 06 : ಥಾಂಗ್ಸ್ಕುಪ್ರದೇಶದ 'ಅಕ್ರಮ' ಕಲ್ಲಿದ್ದಲು ಗಣಿಯೊಂದರಲ್ಲಿ ಗುರುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 18 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವು ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿಯವರೆಗೆ 16 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಸ್ಫೋಟದ ವೇಳೆ ಗಣಿಯಲ್ಲಿದ್ದ ಕಾರ್ಮಿಕರ ನಿಖರ ಸಂಖ್ಯೆ ಇನ್ನೂ ದೊರೆತಿಲ್ಲ. ಹೆಚ್ಚಿನವರು ಸಿಲುಕಿಕೊಂಡಿರುವ ಶಂಕೆ ಇದೆ ಎಂದು ಪೊಲೀಸ್ ಮಹಾನಿರ್ದೇಶಕರಾದ ಐ ನೊಂಗ್ರಾಂಗ್ ತಿಳಿಸಿದ್ದಾರೆ.



2014ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ)ಯು ಮೇಘಾಲಯದಲ್ಲಿ ರಾಟ್ ಹೋಲ್(RAT HOLE) ಕಲ್ಲಿದ್ದಲು ಗಣಿಗಾರಿಕೆ ಮತ್ತು ಇತರ ಎಲ್ಲ ಬಗೆಯ ಅವೈಜ್ಞಾನಿಕ ಗಣಿಗಾರಿಕಾ ಪದ್ಧತಿಗಳನ್ನು ನಿಷೇಧಿಸಿತ್ತು. ಪರಿಸರಕ್ಕೆ ಹಾನಿ ಮತ್ತು ಕಾರ್ಮಿಕರ ಸುರಕ್ಷತಾ ಅಪಾಯಗಳನ್ನು ಉಲ್ಲೇಖಿಸಿ ಅಂತಹ ವಿಧಾನಗಳ ಮೂಲಕ ಹೊರತೆಗೆದ ಕಲ್ಲಿದ್ದಲಿನ ಅಕ್ರಮ ಸಾಗಣೆಗೆ ಕಟ್ಟುನಿಟ್ಟಿನ ನಿರ್ಬಂಧವನ್ನೂ ವಿಧಿಸಿತ್ತು.
ತರುವಾಯ, ಸುಪ್ರೀಂ ಕೋರ್ಟ್ ಕೂಡಾ ಎನ್ಜಿಟಿ ನಿಷೇಧವನ್ನು ಎತ್ತಿಹಿಡಿದು, ಪರಿಸರ ಸುರಕ್ಷತೆಯೊಂದಿಗೆ ವೈಜ್ಞಾನಿಕ ಮತ್ತು ನಿಯಂತ್ರಿತ ಕಾರ್ಯವಿಧಾನಗಳ ಅಡಿಯಲ್ಲಿ ಮಾತ್ರವೇ ಗಣಿಗಾರಿಕೆಗೆ ಅವಕಾಶ ನೀಡಿತ್ತು.
RAT HOLE ಗಣಿಗಾರಿಕೆ ಎಂದರೇನು?:
ಇಲಿ ರಂಧ್ರ ಕೊರೆದು, ಆ ಮೂಲಕ ಕಾರ್ಮಿಕರು ಪ್ರವೇಶಿಸಿ ಕಲ್ಲಿದ್ದಲನ್ನು ಹೊರತೆಗೆಯುವ ವಿಧಾನ. ಸಾಮಾನ್ಯವಾಗಿ, 3ರಿಂದ 4 ಅಡಿ ಎತ್ತರದ ಕಿರಿದಾದ ಸುರಂಗಗಳನ್ನು ಇದಕ್ಕಾಗಿ ಕೊರೆಯಲಾಗುತ್ತದೆ. ಸಮತಲ ಸುರಂಗಗಳನ್ನು ಸಾಮಾನ್ಯವಾಗಿ ಇಲಿ ರಂಧ್ರಗಳು ಎನ್ನುವರು. ಇಂಥ ರಂಧ್ರಗಳು ಕೇವಲ ಒಬ್ಬ ಕಾರ್ಮಿಕನಿಗೆ ಸರಿಹೊಂದುತ್ತದೆ. ಅದಕ್ಕಾಗಿ ಈ ಹೆಸರು.
ಘಟನೆಗೆ ಸಂಬಂಧಿಸಿ ಪ್ರಧಾನಿ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ನೆರವು ಘೋಷಿಸಿವೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಮೇಘಾಲಯ ಸರ್ಕಾರದಿಂದ ನೆರವು:
ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಈ ಘಟನೆಯನ್ನು "ದುರದೃಷ್ಟಕರ" ಎಂದು ಕರೆದಿದ್ದು, ಮೃತ ಕಾರ್ಮಿಕರ ವಾರಸುದಾರರಿಗೆ ತಲಾ ₹3 ಲಕ್ಷ ಪರಿಹಾರ ಘೋಷಿಸಿದ್ದಾರೆ.
"ಜೀವಹಾನಿಯ ಬಗ್ಗೆ ತೀವ್ರ ದುಃಖವಾಗಿದೆ. ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ತಿಳಿಸಿದ್ದಾರೆ.
At least 18 workers were killed in a massive explosion at an alleged illegal coal mine in the Thangskup area of Meghalaya on Thursday. Authorities have recovered 16 bodies so far, while several workers are feared trapped inside the mine.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am