ಬ್ರೇಕಿಂಗ್ ನ್ಯೂಸ್
24-03-22 05:21 pm Bengaluru Correspondent ಕ್ರೈಂ
ಬೆಂಗಳೂರು, ಮಾ.24 : ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಪತ್ರಕರ್ತೆ ಆಗಿರುವ 35 ವರ್ಷದ ಗೃಹಿಣಿಯೊಬ್ಬರು ಗಂಡನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್ ಫೀಲ್ಡ್ ಠಾಣೆ ವ್ಯಾಪ್ತಿಯ ನಲ್ಲೂರಹಳ್ಳಿಯ ಮೇಫೇರ್ ನಲ್ಲಿ ನಡೆದಿದೆ.
ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ವಿದ್ಯಾನಗರ ನಿವಾಸಿಯಾಗಿರುವ ಶ್ರುತಿ ನಾರಾಯಣನ್ ರಾಯಿಟರ್ಸ್ ಬೆಂಗಳೂರು ಕಚೇರಿಯಲ್ಲಿ ಪೇಜ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದು ಇಂದು ಬೆಳಗ್ಗೆ ಮೇಫೇರ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. 2017ರಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿ, ಅನೀಶ್ ಎಂಬವರನ್ನು ಮದುವೆಯಾಗಿದ್ದರು. ಅನೀಶ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಇಂದು ಬೆಳಗ್ಗೆ ಶೃತಿ ತಾಯಿ ಆಕೆಗೆ ಫೋನ್ ಮಾಡಿದ್ದು ರಿಸೀವ್ ಮಾಡದೇ ಇದ್ದುದರಿಂದ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಇನ್ನೊಬ್ಬ ಮಗ ನಿಶಾಂತ್ ಬಳಿ ಹೇಳಿಕೊಂಡಿದ್ದರು. ನಿಶಾಂತ್ ಕೂಡಲೇ ಶೃತಿಗೆ ಫೋನ್ ಮಾಡಿದ್ದು ರಿಸೀವ್ ಆಗದೇ ಇದ್ದಾಗ ಆಕೆ ಉಳಿದುಕೊಂಡಿದ್ದ ಅಪಾರ್ಟ್ಮೆಂಟಿನ ಸೆಕ್ಯುರಿಟಿ ಗಾರ್ಡ್ ಗೆ ಫೋನ್ ಮಾಡಿದ್ದರು. ಸೆಕ್ಯುರಿಟಿ ಬಳಿ ಶೃತಿ ಇದ್ದಾಳೆಯೇ ಎಂದು ಗಮನಿಸಲು ತಿಳಿಸಿದಾಗ, ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ವೆರಾಂಡಾ ಮೂಲಕ ಹಿಂಬಾಗಿಲನ್ನು ಒಡೆದು ನೋಡಿದಾಗ, ಶೃತಿ ತನ್ನ ಕೊಠಡಿಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದಿರುವುದು ಕಂಡುಬಂದಿದೆ.
ನಿಶಾಂತ್ ಮತ್ತು ಇತರ ಸಂಬಂಧಿಕರು ಧಾವಿಸಿ ಬಂದಿದ್ದು, ವೈಟ್ ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಶೃತಿ ಗಂಡ ಅನೀಶ್ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಆತ ದಿನವೂ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಶೃತಿ ತನ್ನ ಪ್ರತಿ ತಿಂಗಳ ಸಂಬಳದಲ್ಲಿ ಒಂದಂಶವನ್ನು ತನ್ನ ತವರು ಮನೆಗೆ ಕಳಿಸಿಕೊಡುತ್ತಿದ್ದ ಬಗ್ಗೆ ಅನೀಶ್ ಪ್ರಶ್ನಿಸಿದ್ದ. ಅಲ್ಲದೆ, ಇದೇ ವಿಚಾರದಲ್ಲಿ ಗಂಡ- ಹೆಂಡತಿ ಮಧ್ಯೆ ಜಗಳವಾಗಿತ್ತು. ಪತಿ ಅನೀಶ್ ಕಾರಣ ಇಲ್ಲದೆ, ಕಿರುಕುಳ ನೀಡುತ್ತಿದ್ದ ಎಂದು ನಿಶಾಂತ್ ಪೊಲೀಸರಿಗೆ ತಿಳಿಸಿದ್ದಾರೆ.
ತನ್ನ ಮನೆಯೊಳಗೆ ಸಿಸಿಟಿವಿ ಮತ್ತು ರೆಕಾರ್ಡರ್ ಇಟ್ಟು ಪತ್ನಿಯ ಮೇಲೆಯೇ ಅನೀಶ್ ಗೂಢಚಾರಿಕೆ ನಡೆಸುತ್ತಿದ್ದ. ಆಕೆ ಯಾರೊಂದಿಗೆ ಮಾತನಾಡುತ್ತಾಳೆ ಎಂದು ಕೇಳಿ ಹಿಂಸೆ ನೀಡುತ್ತಿದ್ದ. ವೀಕೆಂಡ್ ಸಂದರ್ಭಗಳಲ್ಲಿ ಪತ್ನಿಯನ್ನು ಟೂರಿಗೆಂದು ಕರೆದೊಯ್ದು ಅಲ್ಲಿಯೂ ಹಿಂಸೆ ನೀಡುತ್ತಿದ್ದ. ಈ ಮಧ್ಯೆ ಮಾ.20 ಮತ್ತು 21ರಂದು ನಿಶಾಂತ್ ಪತ್ನಿಯೂ ಶೃತಿಗೆ ಫೋನ್ ಮಾಡಿದ್ದು, ಆಕೆ ರಿಸೀವ್ ಮಾಡಿರಲಿಲ್ಲ. ಬಳಿಕ ಮಾ.22ರಂದು ನೇರವಾಗಿ ಆಕೆಯ ಮನೆಗೆ ಬಂದು ನೋಡಿಕೊಂಡು ಹೋಗಿದ್ದರು. ಇದಲ್ಲದೆ, ಕಳೆದ ಜನವರಿಯಲ್ಲಿ ಶೃತಿಯನ್ನು ಆಕೆಯ ಗಂಡನೇ ಕೊಲ್ಲುವುದಕ್ಕೂ ಪ್ರಯತ್ನ ಪಟ್ಟಿದ್ದ ಎನ್ನುವ ಆರೋಪಗಳಿವೆ. ಮನೆಯಲ್ಲಿ ಕೊಲ್ಲಲು ಯತ್ನಿಸಿದ್ದಾಗ ಶೃತಿ ಬೊಬ್ಬೆ ಹಾಕಿದ್ದು ಬಳಿಕ ಸೆಕ್ಯುರಿಟಿ ಗಾರ್ಡ್ ಬಂದು ರಕ್ಷಣೆ ಮಾಡಿದ್ದರು. ಇದರಿಂದ ಬಚಾವಾಗಿದ್ದಳು ಎನ್ನುವುದನ್ನು ಸಂಬಂಧಿಕರು ಹೇಳುತ್ತಾರೆ.
ಶೃತಿ ಕಾಸರಗೋಡಿನ ವಿದ್ಯಾನಗರದ ನಿವಾಸಿ ಖ್ಯಾತ ಪರಿಸರವಾದಿ ಮತ್ತು ನಿವೃತ್ತ ಶಿಕ್ಷಕ ನಾರಾಯಣನ್ ಪೆರಿಯ ಮತ್ತು ಶಿಕ್ಷಕಿ ಸತ್ಯಭಾಮ ದಂಪತಿಯ ಪುತ್ರಿಯಾಗಿದ್ದು ಬೆಂಗಳೂರಿನಲ್ಲಿ ಪತ್ರಕರ್ತೆಯಾಗಿ ಕೆಲಸ ಆರಂಭಿಸಿದ್ದರು. ಐದು ವರ್ಷಗಳ ಹಿಂದೆ ಅನೀಶ್ ನನ್ನು ಮದುವೆಯಾಗಿದ್ದು, ಇದೀಗ ಆತನೇ ಶೃತಿಯನ್ನು ಕೊಂದು ನೇಣಿಗೆ ಹಾಕಿದ್ದಾಗಿ ಶಂಕೆಯೂ ವ್ಯಕ್ತವಾಗಿದೆ.
35-year-old Shruti Narayanan, who was a page editor at Reuters Bangalore bureau, was found dead in her apartment in 'Sruthinilayam' Kasaragod, Vidyanagar Chala Road in Bengaluru. Reportedly, she hanged herself when her husband was away from home.Shruti and her husband Aneesh were married for five years and stayed in an apartment in Nallurhalli Mayfair, Bengaluru.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 06:23 pm
Mangalore Correspondent
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm