ಬ್ರೇಕಿಂಗ್ ನ್ಯೂಸ್
11-06-22 09:22 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಮೊಟೊರೊಲಾ ಇತ್ತೀಚೆಗಷ್ಟೇ '200 ಮೆಗಾಪಿಕ್ಸೆಲ್' ಕ್ಯಾಮೆರಾದೊಂದಿಗೆ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹಾಗೂ ಈ ವರ್ಷದ ಮಧ್ಯಂತರ ಜುಲೈ ತಿಂಗಳಿನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತಂತೆ ಸುದ್ದಿಯೊಂದು ಹೊರಬಿದ್ದಿತ್ತು. ಇದೀಗ ಈ 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಪೋನ್ ತೆಗೆದಿರುವ ಚಿತ್ರಗಳ ಬಗ್ಗೆ ಕಂಪೆನಿಯ ಮೊಬೈಲ್ ಫೋನ್ ಜನರಲ್ ಮ್ಯಾನೇಜರ್ ಶೆನ್ ಜಿನ್ ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. "ಹೊಸ ಫೋನ್‌ನಿಂದ ತೆಗೆದ ಫೋಟೋಗಳು ನನಗೆ ತುಂಬಾ ಆಶ್ಚರ್ಯವನ್ನುಂಟುಮಾಡಿದವು" (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಎಂದು ಶೆನ್ ಜಿನ್ ಅವರು ಗುರುವಾರದಂದು ವೈಬೊ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಗಿಜ್‌ಚೀನಾ ಮಾಧ್ಯಮ ವರದಿ ಮಾಡಿರುವಂತೆ, ಲೆನೆವೊ ಕಂಪೆನಿಯ ಮೊಬೈಲ್ ಫೋನ್ ಜನರಲ್ ಮ್ಯಾನೇಜರ್ ಶೆನ್ ಜಿನ್ ಅವರು ವೈಬೊದಲ್ಲಿ ಮೊಟೊರೊಲಾ ಫೋನ್" ಎಂಬ ಶೀರ್ಷಿಕೆಯ ಸಾಧನದಿಂದ ಫೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಫೋಸ್ಟ್‌ನಲ್ಲಿ ಅವರು ಸ್ಮಾರ್ಟ್‌ಫೋನ್‌ನಿಂದ ಯಾವುದೇ ಚಿತ್ರದ ಮಾದರಿಗಳನ್ನು ಹಂಚಿಕೊಂಡಿಲ್ಲ ಅಥವಾ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಕಂಪನಿಯ ಮುಂಬರುವ ಹ್ಯಾಂಡ್‌ಸೆಟ್‌ನ ಕ್ಯಾಮೆರಾ ಕಾರ್ಯಕ್ಷಮತೆಯನ್ನು ಅವರು ಉಲ್ಲೇಖಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಲ್ಲ. ಆದರೆ, ಇದು ಖಂಡಿತವಾಗಿ 200 ಮೆಗಾಪಿಕ್ಸೆಲ್' ಕ್ಯಾಮೆರಾವನ್ನು ಹೊಂದಿರುವ ಮೊಟೊರೊಲಾ ಸ್ಮಾರ್ಟ್‌ಪೋನ್ ಕುರಿತು ಹೇಳಿರುವುದು ಎಂದು ವರದಿ ಮಾಡಲಾಗಿದೆ.
![]()
ಇದೇ ಜುಲೈನಲ್ಲಿ '200 ಮೆಗಾಪಿಕ್ಸೆಲ್' ಕ್ಯಾಮೆರಾ, ಸ್ನಾಪ್‌ಡ್ರಾಗನ್ 8+ Gen 1 SoC ಹಾಗೂ 125W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರುವ ಮೊಟೊರೊಲಾದ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. 200-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಮೊಟೊರೊಲಾ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಕಂಪೆನಿ ಕೂಡ ಖಚಿತಪಡಿಸಿದೆ. ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಗಳು ಇನ್ನೂ 100-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾಗಳನ್ನು ಬಳಸುತ್ತಿರುವಾಗ, ಮೊಟೊರೊಲಾ 200-ಮೆಗಾಪಿಕ್ಸೆಲ್ ಲೆನ್ಸ್ ಆನ್‌ಬೋರ್ಡ್‌ನೊಂದಿಗೆ ಹೊಸ ಫ್ಲ್ಯಾಗ್‌ಶಿಪ್ ಅನ್ನು ಪ್ರಾರಂಭಿಸುತ್ತಿದ್ದು, ಇದು 200-ಮೆಗಾಪಿಕ್ಸೆಲ್ ಸಂವೇದಕವನ್ನು ಬಳಸಿಕೊಂಡು 16x ಪಿಕ್ಸೆಲ್ ಬಿನ್ನಿಂಗ್‌ನೊಂದಿಗೆ 12.5-ಮೆಗಾಪಿಕ್ಸೆಲ್ ಇಮೇಜ್ ಕ್ಯಾಪ್ಚರ್ ಅನ್ನು ಬೆಂಬಲಿಸುತ್ತದೆ ಎನ್ನಲಾಗಿದೆ.

Motorola ತನ್ನ ಮುಂಬರುವ ಸ್ಮಾರ್ಟ್‌ಫೋನ್ ಕುರಿತಂತೆ ವಿವರವಾದ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸದಿದ್ದರೂ, 200-ಮೆಗಾಪಿಕ್ಸೆಲ್‌ನೊಂದಿಗೆ ಕಂಪನಿಯ ಮುಂಬರುವ ಈ ಸ್ಮಾರ್ಟ್‌ಫೋನ್ ಮೋಟೋರೋಲಾ "ಫ್ರಾಂಟಿಯರ್" ಹ್ಯಾಂಡ್‌ಸೆಟ್ ಆಗಿರಬಹುದು ಎಂದು ವರದಿಗಳು ಸೂಚಿಸಿವೆ. ಈ ಫೋನ್ 144Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ OLED ಡಿಸ್‌ಯನ್ನು ಹೊಂದಿದೆ. ಇದು 12-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾದೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇನ್ನು ಸ್ಮಾರ್ಟ್‌ಫೋನ್‌ನ ಲೈವ್ ಚಿತ್ರವನ್ನು ಮಾರ್ಚ್‌ನಲ್ಲಿ ವೈಬೊದಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಕಂಪನಿಯು ಹೊಸ 125W ಚಾರ್ಜರ್ ಬಗ್ಗೆ ಸಹ ತಿಳಿಸಲಾಗಿದೆ. ಹಾಗಾಗಿ, ನಾವು ಇಂತಹದೊಂದು ಸ್ಮಾರ್ಟ್‌ಫೋನನ್ನು ನೋಡುವ ಸಮಯ ದೂರವಿಲ್ಲ ಎನ್ನಬಹುದು.
Motorola Teases Camera Performance Of 200 Mp Smartphone Ahead Of Launch.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
26-01-26 05:05 pm
HK News Desk
ರೌಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ; ಪೊಲೀಸರ ಕೈಗೆ...
24-01-26 11:23 pm
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
26-01-26 03:03 pm
HK News Desk
ಅಮಾನ್ಯ ನೋಟಿನ 400 ಕೋಟಿ ದರೋಡೆ ಪ್ರಕರಣ ; ಗುಜರಾತ್...
25-01-26 10:11 pm
Indias Biggest Robbery in Belagavi: ಇಡೀ ದೇಶದಲ...
25-01-26 09:48 am
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm