ಇದೇ ಜೂನ್ 27 ರಂದು ಭಾರತದಲ್ಲಿ OnePlus Nord 2T 5G ರಿಲೀಸ್?!..ಬೆಲೆ ಎಷ್ಟು ಗೊತ್ತಾ?

20-06-22 09:45 pm       Source: Vijayakarnataka   ಡಿಜಿಟಲ್ ಟೆಕ್

ಭಾರತದಲ್ಲಿ ಮೂಲ 8GB RAM + 128GB ಸ್ಟೋರೇಜ್ ಮಾದರಿಯ OnePlus Nord 2T 5G ಸ್ಮಾರ್ಟ್‌ಫೋನ್ ಆರಂಭಿಕ 28,999 ರೂ. ಗಳಿಗೆ ಹಾಗೂ ಟಾಪ್-ಆಫ್-ಲೈನ್ 12GB RAM +...

ಕಳೆದ ತಿಂಗಳು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ OnePlus ಕಂಪೆನಿಯ ಮೊದಲ T-ಸಂಖ್ಯೆ ಸರಣಿಯ ನೂತನ OnePlus Nord 2T 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಲಿರುವ ದಿನಾಂಕ ಹೊರಬಿದ್ದಿದೆ. ಜನಪ್ರಿಯ ಟಿಪ್‌ಸ್ಟಾರ್ Paras Guglani (@passionategeekz) ಅವರ ಮಾಹಿತಿಯನ್ನು ಉಲ್ಲೇಖಿಸಿ ಟೆಕ್ ಮಾಧ್ಯಮ ಗ್ಯಾಜೆಟ್ಸ್360 ಈ ಬಗ್ಗೆ ವರದಿ ಮಾಡಿದ್ದು, ವರದಿಯ ಪ್ರಕಾರ, OnePlus Nord 2T 5G ಸ್ಮಾರ್ಟ್‌ಫೋನ್ ದೇಶದಲ್ಲಿ ಇದೇ ಜುಲೈ 27 ರಂದು ಬಿಡುಗಡೆಯಾಗಿದೆ ಎಂದು ತಿಳಿಸಲಾಗಿದೆ. ಇಷ್ಟೇ ಅಲ್ಲದೇ, ದೇಶದಲ್ಲಿ OnePlus Nord 2T 5G ಸ್ಮಾರ್ಟ್‌ಫೋನ್ ಬೆಲೆ ಗಳು ಎಷ್ಟು ಮತ್ತು ಮಾರಾಟಕ್ಕೆ ಬರುವ ದಿನಾಂಕ ಯಾವುದು ಎಂಬುದನ್ನು ಸಹ ತಿಳಿಸಲಾಗಿದೆ.

ಭಾರತದಲ್ಲಿ ಮೂಲ 8GB RAM + 128GB ಸ್ಟೋರೇಜ್ ಮಾದರಿಯ OnePlus Nord 2T 5G ಸ್ಮಾರ್ಟ್‌ಫೋನ್ ಆರಂಭಿಕ 28,999 ರೂ. ಗಳಿಗೆ ಹಾಗೂ ಟಾಪ್-ಆಫ್-ಲೈನ್ 12GB RAM + 256GB ಸ್ಟೋರೇಜ್ ಮಾದರಿಯು 31,999 ರೂ. ಗಳಿಗೆ ಬಿಡುಗಡೆಯಾಗಲಿದೆ ಎಂದು ವರದಿಯು ಹೇಳಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮಾರಾಟವು ಜುಲೈ 3 ರಿಂದ ಜುಲೈ 5 ರ ನಡುವೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದ್ದು, OnePlus ಕಂಪೆನಿಯು OnePlus Nord 2T 5G ಸ್ಮಾರ್ಟ್‌ಫೋನ್ ಮೇಲೆ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಗಳಿಗೆ 4,000 ರೂ.ಗಳ ಕ್ಯಾಶ್‌ಬ್ಯಾಕ್ ಅನ್ನು ನೀಡಲಿದೆ ಎಂದು ತಿಳಿಸಲಾಗಿದೆ. ಆದರೆ, OnePlus ಈ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.

OnePlus Nord 2T 5G India launch date, memory variants, and price leaked  online: Details | The Financial Express

OnePlus Nord 2T ವೈಶಿಷ್ಟ್ಯಗಳು
ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ನೂತನ OnePlus Nord 2T ಸ್ಮಾರ್ಟ್‌ಫೋನಿನಲ್ಲಿ ಎಡ ಮೂಲೆಯಲ್ಲಿ ಹೋಲ್-ಪಂಚ್ ಕಟೌಟ್ ವಿನ್ಯಾಸದ 6.43-ಇಂಚಿನ FHD+ AMOLED ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಸಹ ಹೊಂದಿದೆ. ಇನ್ನು ಇತ್ತೀಚಿಗಷ್ಟೇ ತೈವಾನೀಸ್ ಚಿಪ್‌ಮೇಕರ್ ಮೀಡಿಯಾಟೆಕ್ ಪರಿಚಯಿಸಿರುವ ಹೊಸ 'ಮೀಡಿಯಾ ಟೆಕ್ ಡೈಮೆನ್ಸಿಟಿ 1300' ಚಿಪ್‌ಸೆಟ್‌ ಅನ್ನು OnePlus Nord 2T ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದ್ದು, 8GB LPDDR4X RAM ಜೊತೆಗೆ 128GB UFS 3.1 ಸ್ಟೋರೇಜ್ ಮತ್ತು 12GB LPDDR4X RAM ಜೊತೆಗೆ 256GB UFS 3.1 ಸ್ಟೋರೇಜ್ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದೆ. ಆದರೆ, ಸ್ಮಾರ್ಟ್‌ಫೋನಿನಲ್ಲಿ ಮೆಮೊರಿಯನ್ನು ಹೆಚ್ಚಿಸಲು ಮೆಮೊರಿ ಸ್ಲಾಟ್ ಆಯ್ಕೆ ಇಲ್ಲ.

OnePlus Nord 2T price in India said to be around Rs 28,999, launch date  tipped - Technology News

ಕ್ಯಾಮೆರಾ ವೈಶಿಷ್ಟ್ಯಗಳನ್ನು ನೋಡುವುದಾದರೆ, OnePlus Nord 2T ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು OIS ಗೆ ಬೆಂಬಲದೊಂದಿಗೆ 50MP ಸೋನಿ IMX766 ಮುಖ್ಯ ಕ್ಯಾಮೆರಾ 8MP ಅಲ್ಟ್ರಾವೈಡ್ ಮತ್ತು 2MP ಸೆಕೆಂಡರಿ ಕ್ಯಾಮೆರಾಗಳನ್ನು ಒಳಗೊಂಡಿವೆ. ಸೆಲ್ಫಿಗಳಿಗಾಗಿ ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi 6, ಬ್ಲೂಟೂತ್ 5.2, GPS, NFC, ಬೀಡೌ, ಗೆಲಿಲಿಯೋ ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳನ್ನು ನಾವು ನೋಡಬಹುದು. ಇನ್ನು ಆಂಡ್ರಾಯ್ಡ್ 12 ನಲ್ಲಿ ಆಕ್ಸಿಜನ್ ಓಎಸ್ 12 ನಲ್ಲಿ ಕೆಲಸ ನಿರ್ವಹಿಸಲಿರುವ ಈ ಸ್ಮಾರ್ಟ್‌ಪೋನ್ 80W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಹೊಂದಿದೆ.

OnePlus Nord 2T 5G India launch tipped to be scheduled on June 27 -  phonewale

ಜಾಗತಿಕವಾಗಿ OnePlus Nord 2T ಬೆಲೆ
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ OnePlus Nord 2T ಸ್ಮಾರ್ಟ್‌ಫೋನ್‌ ಶಾಡೋ ಮತ್ತು ಜೇಡ್ ಫಾಗ್ ಬಣ್ಣ ಆಯ್ಕೆಗಳಲ್ಲಿ EUR 399 ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ 32,400 ರೂ.ಗಳಾಗಿದ್ದು, OnePlus Nord 2T 5G ಅನ್ನು ಮೇ ತಿಂಗಳಲ್ಲಿ ಹಲವಾರು ದೇಶಗಳಲ್ಲಿ EUR 399 (ಸರಿಸುಮಾರು ರೂ. 33,400) ಬೇಸ್ 8GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ ಮತ್ತು 12GB RAM + 256GB ಯ ವೇರಿಯಂಟ್‌ಗಾಗಿ EUR 499 (ಸರಿಸುಮಾರು ರೂ. 41,600) ನಲ್ಲಿ ಬಿಡುಗಡೆ ಮಾಡಲಾಯಿತು.

Oneplus Nord 2t 5g India Launch Tipped For June 27.