ಬ್ರೇಕಿಂಗ್ ನ್ಯೂಸ್
22-11-22 06:56 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಎಲೆಕ್ಟ್ರಾನಿಕ್ ಬ್ರ್ಯಾಂಡ್ Sony ಭಾರತದಲ್ಲಿಂದು ತನ್ನ ನೂತನ Sony LinkBuds S (WF-LS900N) ವೈರ್‌ಲೆಸ್ ಇಯರ್‌ಫೋನ್ ಸಾಧನವನ್ನು ಬಿಡುಗಡೆಗೊಳಿಸಿದೆ. ಕಳೆದ ಮೇ 2022 ರಲ್ಲಿ ಜಾಗತಿಕವಾಗಿ ಬಿಡುಗಡೆಯಾಗಿದ್ದ Sony LinkBuds S (WF-LS900N) ವೈರ್‌ಲೆಸ್ ಇಯರ್‌ಫೋನ್ ಸಾಧನವನ್ನು ದೇಶದಲ್ಲಿ 16,990 ಬೆಲೆಯಲ್ಲಿ ಪರಿಚಯಿಸಲಾಗಿದೆ. ಆದರೆ, ಇದೇ ನವೆಂಬರ್ 30 ರವರೆಗೆ ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೊಂದಿಗೆ 3,000 ರೂ. ಕ್ಯಾಶ್‌ಬ್ಯಾಕ್ ಒದಗಿಸುವ ಬಗ್ಗೆ ಕಂಪೆನಿ ತಿಳಿಸಿದೆ.
Sony LinkBuds S (WF-LS900N) ವೈಶಿಷ್ಟ್ಯಗಳು
ಈಗಾಗಲೇ ನಾವು ತಿಳಿಸಿರುವಂತೆ, Sony LinkBuds S (WF-LS900N) ವೈರ್‌ಲೆಸ್ ಇಯರ್‌ಫೋನ್ ಸಾಧನದಲ್ಲಿರುವ ಪ್ರತಿ ಇಯರ್‌ಪೀಸ್ ಕೇವಲ 4.8g ತೂಗುತ್ತವೆ. ನೀರಿನ ಪ್ರತಿರೋಧಕ್ಕಾಗಿ IPX4-ರೇಟ್ ಹೊಂದಿರುವ ಈ ಸಾಧನವು ಸ್ಪರ್ಶ ನಿಯಂತ್ರಣಗಳ ಬಟನ್‌ಗಳನ್ನು ಹೊಂದಿದೆ. ಇಂಟಿಗ್ರೇಟೆಡ್ ಪ್ರೊಸೆಸರ್ V1 ನಿಂದ ಚಾಲಿತವಾಗಿರುವೀ ಸಾಧನವು ಬ್ಲೂಟೂತ್ 5.2 ಸಂಪರ್ಕ LDAC, AAC ಮತ್ತು SBC ಕೋಡೆಕ್ ಬೆಂಬಲಗಳೊಂದಿಗೆ ಸಕ್ರಿಯ ಶಬ್ದ ರದ್ದತಿ ಬೆಂಬಲದಲ್ಲಿ ಕಾರ್ಯನಿರ್ವಹಿಸುತ್ತದೆ.
Sony LinkBuds S (WF-LS900N) ವೈರ್‌ಲೆಸ್ ಇಯರ್‌ಫೋನ್ ಸಾಧನವು Sony Headphones Connect ಅಪ್ಲಿಕೇಶನ್ ಮೂಲಕ iOS ಮತ್ತು Android ಎರಡರಲ್ಲೂ ಕಾರ್ಯನಿರ್ವಹಿಸಲಿದೆ. ಇದರ ಚಾರ್ಜಿಂಗ್ ಕೇಸ್‌ಗೆ ಬ್ಯಾಟರಿ ಬಾಳಿಕೆ 20 ಗಂಟೆಗಳವರೆಗೆ ಇರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಪ್ಲಿಕೇಶನ್-ಆಧಾರಿತ ನಿಯಂತ್ರಣ, Google Fast Pair ಮತ್ತು Microsoft Swift Pair ಪ್ರೋಟೋಕಾಲ್ ಸಹ ಹೊಂದಿರುವ ಈ ಸಾಧನವು ದೇಶದಲ್ಲಿ ಕಪ್ಪು, ಬಿಳಿ ಮತ್ತು ಬೀಜ್ ಮೂರು ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
Sony LinkBuds S (WF-LS900N) ಬೆಲೆ ಮತ್ತು ಲಭ್ಯತೆ.
ಈ ಮೊದಲೇ ತಿಳಿಸಿದರೆ, ದೇಶದಲ್ಲಿ Sony LinkBuds S (WF-LS900N) ವೈರ್‌ಲೆಸ್ ಇಯರ್‌ಫೋನ್ ಸಾಧನವನ್ನು 16,990 ಬೆಲೆಯಲ್ಲಿ ಪರಿಚಯಿಸಲಾಗಿದೆ. ಸೋನಿ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದಿನಿಂದಲೇ Sony LinkBuds S (WF-LS900N) ವೈರ್‌ಲೆಸ್ ಇಯರ್‌ಫೋನ್ ಸಾಧನವನ್ನು ಖರೀದಿಸಬಹುದು. ಬಿಡುಗಡೆ ಕೊಡುಗೆಯಾಗಿ ಇದೇ ನವೆಂಬರ್ 21 ರಿಂದ ನವೆಂಬರ್ 30ರ ನಡುವೆ ಆಯ್ದ ಕಾರ್ಡ್‌ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ 3,000 ರೂ. ಕ್ಯಾಶ್‌ಬ್ಯಾಕ್ ದೊರೆಯಲಿದೆ.
Sony Linkbuds S Wf-Ls900n Tws Earphones Launched In India.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm