CM Dk Shivakumar, Mangalore: ಕದ್ರಿ ದೇವಸ್ಥಾನದಲ್ಲಿ ದೇವರ ದರ್ಶನ, ಕದ್ರಿಯಿಂದ ಪಡೀಲಿಗೆ ತೆರೆದ ಬಸ್ಸಿನಲ್ಲಿ ಮೆರವಣಿಗೆ, ಮಂಗ್ಳೂರು ಬಿಸಿಲಿಗೆ ಮೈಯೊಡ್ಡಿದ ವಂದಿ ಮಾಗಧರು !

18-09-26 03:39 pm       HK News Staffer   ಕರಾವಳಿ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಳಗ್ಗೆ ಉಪಾಹಾರ ಸ್ವೀಕರಿಸಿದ ಬಳಿಕ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಅಲ್ಲಿಂದಲೇ ಇತರೇ ಸಂಪುಟ ದರ್ಜೆಯ ಸಚಿವರೊಂದಿಗೆ ಮೆರವಣಿಗೆಯ ಸಲುವಾಗಿ ವಿಶೇಷವಾಗಿ ಅಲಂಕರಿಸಲ್ಪಟ್ಟಿದ್ದ ಬಸ್ಸಿಗೇರಿದ್ದಾರೆ.

ಮಂಗಳೂರು, ಸೆ.18: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಳಗ್ಗೆ ಉಪಾಹಾರ ಸ್ವೀಕರಿಸಿದ ಬಳಿಕ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಅಲ್ಲಿಂದಲೇ ಇತರೇ ಸಂಪುಟ ದರ್ಜೆಯ ಸಚಿವರೊಂದಿಗೆ ಮೆರವಣಿಗೆಯ ಸಲುವಾಗಿ ವಿಶೇಷವಾಗಿ ಅಲಂಕರಿಸಲ್ಪಟ್ಟಿದ್ದ ಬಸ್ಸಿಗೇರಿದ್ದಾರೆ.

ಬಸ್ಸಿನ ಮೇಲ್ಭಾಗದಲ್ಲಿ ಚೇರ್ ಹಾಕಿ ಸಚಿವರು ಮತ್ತು ಮುಖ್ಯಮಂತ್ರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಬಿರು ಬಿಸಿಲಿನ ನಡುವೆಯೇ ಸಚಿವರೆಲ್ಲ ಮೇಲ್ಭಾಗದ ಚೇರ್ ನಲ್ಲಿ ಕುಳಿತು ಬಸ್ಸಿನಲ್ಲಿ ಮೆರವಣಿಗೆ ಬಂದರು. ಬಸ್ಸು ನೇರವಾಗಿ ಮಲ್ಲಿಕಟ್ಟೆ, ಪಂಪ್ವೆಲ್ ಮಾರ್ಗವಾಗಿ ಪಡೀಲ್ ಜಿಲ್ಲಾಧಿಕಾರಿ ಕಚೇರಿಗೆ ಹೊರಟಿತು.

ದಾರಿ ಮಧ್ಯದಲ್ಲಿ ಅಲ್ಲಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸೇರಿ ಮುಖ್ಯಮಂತ್ರಿ ಡಿಕೆಶಿಗೆ ಜೈಕಾರ ಕೂಗಿದರು. ಕೆಲವು ಕಡೆ ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು. ಇದಲ್ಲದೆ, ರಸಮಂಜರಿ, ಮುಸ್ಲಿಮರ ದಫ್ತ್, ಗೊಂಬೆ, ಯಕ್ಷಗಾನ ವೇಷಗಳನ್ನೂ ಮೆರವಣಿಗೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.

11.30ರ ವೇಳೆಗ ಕದ್ರಿಯಿಂದ ಹೊರಟ ಸಚಿವರ ಬಸ್ಸು 12.50ರ ಸುಮಾರಿಗೆ ಪಡೀಲ್ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಸುಮಾರು ಒಂದೂವರೆ ಗಂಟೆ ಕಾಲ ಸಚಿವರು ಮತ್ತು ಸಿಎಂ ಡಿಕೆಶಿ ಬಸ್ಸಿನ ಮೇಲ್ಭಾಗದಲ್ಲಿ ಕುಳಿತು ಬಿಸಿಲಿನ ಧಗಗೆ ಮೈಯೊಡ್ಡಿದರು. ಆಮೂಲಕ ಮಂಗಳೂರಿನ ಬಿಸಿಲಿನ ಧಗೆಯನ್ನೂ ನೇರವಾಗಿ ಅನುಭವಿಸಿದರು. ಬಳಿಕ ಬಸ್ಸಿನಿಂದಿಳಿದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪೊಲೀಸರ ಗೌರವ ಸ್ವೀಕರಿಸಿ ಒಳಗಡೆ ನಡೆದರು. ಮಧ್ಯಾಹ್ನ 1.30ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ಏರ್ಪಾಟಾಗಿದ್ದ ಮಿನಿ ಹಾಲ್ ನಲ್ಲಿ ಸಂಪುಟ ಸಭೆ ಆರಂಭಗೊಂಡಿತ್ತು. ಮೊದಲೇ ನಿಗದಿಯಾಗಿರುವ ಕಾರ್ಯಸೂಚಿಗಳನ್ನು ಸಂಪುಟ ಸಭೆಯಲ್ಲಿ ಇರಿಸಿ ಅದಕ್ಕೆ ಅನುಮೋದನೆ ಪಡೆಯಲಿದ್ದಾರೆ.

Karnataka Deputy Chief Minister D.K. Shivakumar visited the historic Kadri Manjunath Temple in Mangaluru and offered prayers on Friday before joining other Cabinet ministers for a special open-bus roadshow to Padil, where the State Cabinet meeting was scheduled to be held.