ಬ್ರೇಕಿಂಗ್ ನ್ಯೂಸ್
20-04-23 07:50 pm Source: Vijayakarnataka ಡಿಜಿಟಲ್ ಟೆಕ್
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Samsung ಕಂಪೆನಿಯ ವಿನೂತನ Galaxy M14 5G ಸ್ಮಾರ್ಟ್‌ಫೋನ್ ನಾಳೆಯಿಂದ (21, ಏಪ್ರಿಲ್) ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. Samsung ಕಂಪೆನಿಯ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರಾದ M-ಸರಣಿಯಲ್ಲಿ ಈ ಹೊಸ Galaxy M14 5G ಸ್ಮಾರ್ಟ್‌ಫೋನ್ ಎಂಟ್ರಿ ನೀಡಿದ್ದು, 13,490 ರೂ. ಆರಂಭಿಕ ಬೆಲೆಯಲ್ಲಿ ನಾಳೆ ಮಧ್ಯಾಹ್ನ 12pm IST ಗಂಟೆಯಿಂದ ಅಧಿಕೃತ Samsung, Amazon ಮತ್ತು ಆಯ್ದ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಹೊಸ Galaxy M14 5G ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಸಂಪೂರ್ಣ ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
Samsung Galaxy M14 5G ವೈಶಿಷ್ಟ್ಯಗಳು
ನೂತನ Galaxy M14 5G ಫೋನ್ HD+ (2408 x 1080 ಪಿಕ್ಸೆಲ್‌ಗಳು) ರೆಸಲ್ಯೂಶನ್ ಸಾಮರ್ಥ್ಯದ 6.6-ಇಂಚಿನ PLS LCD ಡಿಸ್‌ಪ್ಲೇ ಹೊಂದಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಜೋಡಿಸಲಾದ Exynos 1330 ಆಕ್ಟಾ-ಕೋರ್ SoC ಪ್ರೊಸೆಸರ್ ಮತ್ತು Mali G68 GPU ಗಳೊಂದಿಗೆ ಜೋಡಿಸಲಾಗಿರುವ ಈ Galaxy M14 5G ಫೋನ್ ಆಂಡ್ರಾಯ್ಡ್ 13 ಆಧಾರಿತ Samsung One UI 5 ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ವಿಭಾಗದಲ್ಲಿ, Galaxy M14 5G ಫೋನ್ 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 2-ಮೆಗಾಪಿಕ್ಸೆಲ್ ಡೆಪ್ತ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ಗಳನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಫೋನ್ ಡಿಸ್‌ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ವಾಟರ್‌ಡ್ರಾಪ್ ನಾಚ್ ಶೈಲಿಯಲ್ಲಿ 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾ ನೀಡಲಾಗಿದೆ. ಈ ಕ್ಯಾಮೆರಾಗಳು ಇತ್ತೀಚಿನ ಹಲವಾರು ಫೋಟೊಗ್ರಫಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ Galaxy M14 5G ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದಕ್ಕಾಗಿ 25W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ USB ಟೈಪ್-C ಪೋರ್ಟ್ ನಿಡಲಾಹಗಿದೆ. ಇನ್ನುಳಿದಂತೆ, ಕರೆ ವೇಳೆ ಹಿನ್ನೆಲೆ ಶಬ್ದ ರದ್ದುತಿಗೆ ಸಹಾಯ ಮಾಡುವ ವಾಯ್ಸ್ ಫೋಕಸ್ ವೈಶಿಷ್ಟ್ಯ, ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ 5G, 4G, Wi-Fi, Bluetooth 5.2, NFC ಮತ್ತು GPS ಸಂಪರ್ಕ ಆಯ್ಕೆಗಳ ಬೆಂಬಲವನ್ನು ಈ ಫೋನ್ ಹೊಂದಿದೆ
Samsung Galaxy M14 5G ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ
ಭಾರತದಲ್ಲಿ Samsung Galaxy M14 5G ಸ್ಮಾರ್ಟ್‌ಫೋನ್ 4GB + 128GB ಮತ್ತು 6GB + 128GB ಎರಡು ಮಾದರಿಗಳಲ್ಲಿ ಕ್ರಮವಾಗಿ 13,490 ರೂ. ಮತ್ತು 14,990 ರೂ. ಬಜೆಟ್ ಬೆಲೆಗಳಲ್ಲಿ ಬಿಡುಗಡೆಯಾಗಿದೆ. ಮತ್ತು ನೀಲಿ, ಕಡು ನೀಲಿ ಮತ್ತು ಬೆಳ್ಳಿ ಬಣ್ಣದಲ್ಲಿ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
samsung galaxy m14 5g goes for first sale tomorrow via amazon price in india, specifications.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm