ಬ್ರೇಕಿಂಗ್ ನ್ಯೂಸ್
27-04-23 07:37 pm Source: Vijayakarnataka ಡಿಜಿಟಲ್ ಟೆಕ್
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಹವಾ ಎಬ್ಬಸಿದ್ದ 'Vivo X90' ಸರಣಿಯ ಎರಡು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಗೆ ಇದೀಗ ಎಂಟ್ರಿ ನೀಡಿವೆ. ದೇಶದಲ್ಲಿ Vivo X90 ಸರಣಿಯಲ್ಲಿ Vivo X90 Pro ಮತ್ತು Vivo X90 ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದ್ದು, ಈ ಫೋನ್‌ಗಳು ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್, ಪ್ರಭಾವಶಾಲಿ ಕ್ಯಾಮೆರಾ ಸೆಟಪ್‌ಗಳು, ಉತ್ತಮ-ಗುಣಮಟ್ಟದ ಡಿಸ್‌ಪ್ಲೇ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊತ್ತು ಮಾರುಕಟ್ಟೆಗೆ ಬಂದಿವೆ. ಹೊಸ Vivo X90 Pro ಮತ್ತು Vivo X90 ಎರಡು ಸ್ಮಾರ್ಟ್‌ಫೋನ್‌ಗಳ ಸಂಪೂರ್ಣ ವೈಶಿಷ್ಟ್ಯಗಳು ಮತ್ತು ಬೆಲೆಗಳ ಮಾಹಿತಿ ಇಲ್ಲಿದೆ.
Vivo X90 Pro ಮತ್ತು Vivo X90 ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಶಕ್ತಿಯು ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್, G715 GPU ಮತ್ತು ಕ್ಯಾಮೆರಾಕ್ಕಾಗಿ Vivo V2 ಚಿಪ್‌ಗಳನ್ನು ಹೊಂದಿವೆ. 12GB PDDR5 RAM ಮತ್ತು 256GB ವರೆಗೆ ಸ್ಟೋರೇಜ್ ಹೊಂದಿರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ Android 13-ಆಧಾರಿತ FunTouch OS ನಲ್ಲಿ ಕಾರ್ಯನಿರ್ವಹಿಸುತ್ತವೆ.
ಕ್ಯಾಮೆರಾ:
Vivo X90 50MP ಸೋನಿ IMX 758 ಲೆನ್ಸ್, 13MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 13MP ಪೋರ್ಟ್ರೇಟ್ ಲೆನ್ಸ್‌ಗಳನ್ನು ಹೊಂದಿದೆ. ಸೆಲ್ಫಿಗಳಿಗಾಗಿ, 32MP ಸೆಲ್ಫಿ ಕ್ಯಾಮೆರಾ ಇದೆ. ಇತ್ತ Vivo X90 Pro ಸ್ಮಾರ್ಟ್‌ಪೋನ್ 50MP ಕ್ಯಾಮೆರಾ ( 1"ಸೆನ್ಸಾರ್ ಜೊತೆಗೆ), 50MP ಟೆಲಿಫೋಟೋ ಕ್ಯಾಮೆರಾ ಮತ್ತು 12MP ಅಲ್ಟ್ರಾವೈಡ್ ಲೆನ್ಸ್‌ಗಳನ್ನು ಒಳಗೊಂಡಿರುವ ವಿಭಿನ್ನ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ.
ಡಿಸ್‌ಪ್ಲೇ:
Vivo X90 Pro ಮತ್ತು Vivo X90 ಎರಡೂ ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.78-ಇಂಚಿನ ಕರ್ವ್ಡ್ 3D AMOLED ಡಿಸ್‌ಪ್ಲೇಯನ್ನು ಹೊಂದಿವೆ. 1260p (2,800x1,260-ಪಿಕ್ಸೆಲ್ಸ್) ರೆಸಲ್ಯೂಶನ್ ಹೊಂದಿರುವ ಈ ಡಿಸ್‌ಪ್ಲೇಯು 100% DCI-P3 ಕಲರ್ ಗ್ಯಾಮೆಟ್ ವ್ಯಾಪ್ತಿಯನ್ನು ಒದಗಿಸುತ್ತದೆ. ಗೇಮಿಂಗ್‌ಗೆ ಸಿದ್ದವಾಗಿರುವ ಸ್ಮೂಡ್ ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಸೆನಸ್ಸಾರ್ ಸಹ ಅಳವಡಿಸಲಾಗಿದೆ.
ಬ್ಯಾಟರಿ
Vivo X90 Pro ಸ್ಮಾರ್ಟ್‌ಫೋನ್ 4,870mAh ಬ್ಯಾಟರಿ ಹೊಂದಿದ್ದರೆ, ಇತ್ತ Vivo X90 ಸ್ಮಾರ್ಟ್‌ಫೋನ್ 4,810 mAh ಬ್ಯಾಟರಿಯ ಹೊಂದಿದೆ. ಈ ಎರಡೂ ಫೋನ್‌ಗಳು 120W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತವೆ. ಇವುಗಳ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವು ಕೇವಲ ಎಂಟು ನಿಮಿಷಗಳಲ್ಲಿ ಬ್ಯಾಟರಿಯನ್ನು ಶೂನ್ಯದಿಂದ 50% ವರೆಗೆ ಚಾರ್ಜ್ ಮಾಡುತ್ತದೆ. ಇದು ಪ್ರಸ್ತುತ ಲಭ್ಯವಿರುವ ತ್ವರಿತ ಚಾರ್ಜಿಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ.
ಬೆಲೆ ಮತ್ತು ಲಭ್ಯತೆ.
ದೇಶದಲ್ಲಿ vivo X90 Pro ಒಂದೇ 12GB/256GB ಮಾದರಿಯ Legendary Black ಬಣ್ಣದಲ್ಲಿ INR84,999 ಬೆಲೆಯೊಂದಿಗೆ ಬಿಡುಗಡೆಯಾಗಿದ್ದರೆ, ಇತ್ತ vivo X90 ಸ್ಮಾರ್ಟ್‌ಫೋನ್ 8GB /256GB, 12GB/256GB ಎರಡು ಮಾದರಿಗಳಲ್ಲಿ ಮತ್ತು Asteroid Black ಮತ್ತು Breeze Blue ಬಣ್ಣಗಳಲ್ಲಿ ಕ್ರಮವಾಗಿ 59,999 ರೂ. ಹಾಗೂ 63,999 ರೂ. ಬೆಲೆಗಳಲ್ಲಿ ಬಿಡುಗಡೆಯಾಗಿದೆ. ಗ್ರಾಹಕರು ಇದೇ ಮೇ 5 ರಿಂದ ಕಂಪೆನಿಯ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಇತರೆ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಲು ಸಾಧ್ಯವಿದೆ.
vivo x90, x90 pro launched in india check all details.
11-01-25 09:14 pm
Bangalore Correspondent
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm