ಐಫೋನ್ ಅಥವಾ ಐಪಾಡ್‌ನಿಂದ ವೈಫೈ ಪಾಸ್‌ವರ್ಡ್ ಹಂಚಿಕೊಳ್ಳುವುದು ಹೇಗೆ?: ಇಲ್ಲಿದೆ ಡಿಟೈಲ್ಸ್

17-07-23 07:42 pm       Source: Vijayakarnataka   ಡಿಜಿಟಲ್ ಟೆಕ್

ಸಮಯದ ಉಳಿತಾಯ ಮತ್ತು ಸರಳ ಮಾರ್ಗದೊಂದಿಗೆ ಐಫೋನ್ ಅಥವಾ ಐಪಾಡ್‌ನಿಂದ ವೈಫೈ ಪಾಸ್‌ವರ್ಡ್ ಹಂಚಿಕೊಳ್ಳಬಹುದು. ಸುರಕ್ಷತೆಗೆ ಒತ್ತು ಕೊಡುವ ಸಲುವಾಗಿ ಇದು ಉತ್ತಮ ಆಯ್ಕೆಯೂ ಹೌದು. ಈ ಸುಲಭ ದಾರಿಯ ಬಗ್ಗೆ ಇಲ್ಲಿ ನೋಡೋಣ.

ಈಗ ಇಂಟರ್‌ನೆಟ್‌ ಬಳಕೆ ವ್ಯಾಪಕವಾಗಿದೆ. ಸಾಕಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸವನ್ನು ನಿರ್ವಹಿಸಬೇಕಾದ ಸಂದರ್ಭ ಕೂಡಾ ಇರುತ್ತದೆ. ಕೆಲವೊಂದು ಸಂದರ್ಭದಲ್ಲಿ ವೈಫ್ ಪಾಸ್‌ವರ್ಡ್‌ಗಳು ಮರೆತು ಹೋಗುವುದೂ ಇದೆ. ಇಂತಹ ಸಂದರ್ಭದಲ್ಲಿ ವೈ-ಫೈ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವುದು ಉಪಯುಕ್ತವಾಗಿರುತ್ತದೆ. ಇದು ಸಮಯದ ಉಳಿಯುವ ಜೊತೆಗೆ ಮತ್ತೆ ಪಾಸ್‌ವರ್ಡ್ ಟೈಪ್ ಮಾಡಬೇಕಾದ ಅವಶ್ಯಕತೆಯೂ ಇರುವುದಿಲ್ಲ.

How To Share Wi-Fi Access with Guests on iOS 16

ಸದ್ಯ ಹೆಚ್ಚಿನವರು ಮೊಬೈಲ್ ಡೇಟಾ ಬಳಸುವುದರಿಂದ ಅನೇಕ ಬಾರಿ ನಮಗೆ ವೈ-ಫೈ ಪ್ರವೇಶದ ಅಗತ್ಯವಿರುತ್ತದೆ. ಕೆಲವೊಮ್ಮೆ ನಮ್ಮ ಮನೆಗೆ ಭೇಟಿ ನೀಡುವ ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ನಮ್ಮ ಮನೆಯ ಬ್ರಾಡ್‌ಬ್ಯಾಂಡ್‌ ಎಕ್ಸಸ್‌ ಅನ್ನು ಹಂಚಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲೆಲ್ಲಾ ಪಾಸ್‌ವರ್ಡ್‌ ಶೇರ್ ಮಾಡುವ ಸುಲಭ ವೈಶಿಷ್ಟ್ಯ ಹೆಚ್ಚು ಸೂಕ್ತ ಹಾಗೂ ಸುರಕ್ಷಿತ ದೃಷ್ಟಿಯಿಂದ ಸಹಾಯಕ್ಕೆ ಬರುತ್ತದೆ.

ವೈಫೈ ಪಾಸ್‌ವರ್ಡ್‌ ವೈಶಿಷ್ಟ್ಯ ಆಂಡ್ರಾಯ್ಡ್‌ ಮತ್ತು ಐಒಎಸ್‌ ಆಪರೇಟಿಂಗ್ ಸಿಸ್ಟಮ್ ಎರಡಲ್ಲೂ ಲಭ್ಯವಿದೆ. ಇದು ವೈಫೈ ಪಾಸ್‌ವರ್ಡ್‌ ಅನ್ನು ನಾವೇ ಟೈಪ್ ಮಾಡುವ ಬದಲಾಗಿ ಸುಲಭ ಮತ್ತು ಸರಳವಾಗಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಂತವನ್ನು ಹೇಗೆ ಸುಲಭವಾಗಿ ಅನುಸರಿಸಬಹುದು ಎಂಬ ಮಾಹಿತಿ ಇಲ್ಲಿದೆ.

way to share wi fi password easily from iphone or ipad without manually enter.