ಗ್ರಾಹಕರಿಗೆ ಗುಡ್‌ನ್ಯೂಸ್‌!..ಮತ್ತೆ ಭಾರೀ ಬೆಲೆ ಇಳಿಕೆ ಕಂಡಿದೆ ಶಿಯೋಮಿಯ ಈ ಫೋನ್‌!

18-07-23 08:21 pm       Source: Gizbot Kannada   ಡಿಜಿಟಲ್ ಟೆಕ್

ಪ್ರಮುಖ ಮೊಬೈಲ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಶಿಯೋಮಿ 12 ಪ್ರೊ ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ.

ಪ್ರಮುಖ ಮೊಬೈಲ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ಶಿಯೋಮಿ 12 ಪ್ರೊ ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಈ ಮೊಬೈಲ್‌ ಇದೀಗ ಮಾರುಕಟ್ಟೆಯ ಗಮನವನ್ನು ಮತ್ತೊಮ್ಮೆ ಸೆಳೆದಿದ್ದು, ಶಿಯೋಮಿ ಫೋನ್‌ ಖರೀದಿಸುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಅದೇನೆಂದರೆ ಶಿಯೋಮಿ 12 ಪ್ರೊ ಫೋನ್‌ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆ ಆಗಿದೆ.

Redmi Note 12 Pro - 6000 mAh Battery ,200Camera, 8GB Ram, 128GB, 5G ...

ಹೌದು, ಶಿಯೋಮಿ ಕಂಪನಿಯ ಜನಪ್ರಿಯ ಶಿಯೋಮಿ 12 ಪ್ರೊ 5G ಮೊಬೈಲ್‌ ಬೆಲೆಯಲ್ಲಿ ಈಗ ಸಖತ್‌ ಇಳಿಕೆ ಆಗಿದೆ. ಈ ಫೋನ್‌ 6GB+128GB, 8GB+128GB ಮತ್ತು 8GB+256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, 8GB+128GB ವೇರಿಯಂಟ್‌ 2,000ರೂ ಇಳಿಕೆ ಕಂಡಿದೆ. ಹಾಗೆಯೇ 6GB+128GB ಮತ್ತು 8GB+256GB ವೇರಿಯಂಟ್‌ ಆಯ್ಕೆಗಳು 1,000ರೂ. ಗಳ ಬೆಲೆ ಕಡಿತ ಆಗಿವೆ.

ಅಂದಹಾಗೆ ಶಿಯೋಮಿ 12 ಪ್ರೊ 5G ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಪಡೆದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಹಾಗೆಯೇ ಈ ಫೋನ್ ಬ್ಲೂ, ಬ್ಲ್ಯಾಕ್‌ ಹಾಗೂ ಓಪೆರಾ ಮಾವೆ ಕಲರ್‌ ಆಯ್ಕೆ ಪಡೆದಿದೆ. ಇನ್ನುಳಿದಂತೆ ಶಿಯೋಮಿ 12 ಪ್ರೊ 5G ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ. ಶಿಯೋಮಿ 12 ಪ್ರೊ 5G ಡಿಸ್‌ಪ್ಲೇ ಮಾಹಿತಿ ಇಲ್ಲಿದೆ : ಶಿಯೋಮಿ 12 ಪ್ರೊ 5G ಮೊಬೈಲ್‌ 1,440 x 3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ನೊಂದಿಗೆ 6.73 ಇಂಚಿನ WQHD+ ಸ್ಯಾಮ್‌ಸಂಗ್ E5 ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 1,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ಡೈನಾಮಿಕ್ ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಶಿಯೋಮಿ 12 ಪ್ರೊ 5G ಪ್ರೊಸೆಸರ್‌ ಬಲ ಯಾವುದು : ಶಿಯೋಮಿ 12 ಪ್ರೊ 5G ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 ಜೆನ್‌ 1 SoC ಪ್ರೊಸೆಸರ್‌ ಪಡೆದಿದ್ದು, ಆಂಡ್ರಾಯ್ಡ್‌ ಸಪೋರ್ಟ್‌ ನೊಂದಿಗೆ ಕೆಲಸ ಮಾಡಲಿದೆ. ಅಲ್ಲದೇ ಇದು 8 GB RAM + 256 GB ಹಾಗೂ 12 GB RAM + 256 GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದೆ.

Redmi Note 12 Serisi'nin Yeni Telefonu Note 12 Pro Hakkında İlk ...

ಶಿಯೋಮಿ 12 ಪ್ರೊ 5G ಕ್ಯಾಮೆರಾ ಸೆನ್ಸಾರ್ ರಚನೆ ಹೇಗೆ : ಶಿಯೋಮಿ 12 ಪ್ರೊ 5G ಮೊಬೈಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX707 ಸೆನ್ಸಾರ್‌, ಸೆಕೆಂಡರಿ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪೋರ್ಟ್ರೇಟ್ ಲೆನ್ಸ್‌ ಮತ್ತು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ ವೈಡ್ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ನ ಸೆಲ್ಫಿ ಕ್ಯಾಮೆರಾ ಆಯ್ಕೆ ಸಹ ಇದೆ. ಶಿಯೋಮಿ 12 ಪ್ರೊ 5G ಬ್ಯಾಟರಿ ಮತ್ತು ಇತರೆ ಫೀಚರ್ಸ್‌ : ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ 4,600 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇದಕ್ಕೆ ಪೂರಕವಾಗಿ 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಹಾಗೂ 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಕೂಡ ಪಡೆದಿದೆ.

ಇನ್ನು ಶಿಯೋಮಿ 12 ಪ್ರೊ 5G ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 6E, ಬ್ಲೂಟೂತ್ v5.2, NFC ಮತ್ತು USB ಟೈಪ್-C ಪೋರ್ಟ್ ಸೌಲಭ್ಯಗಳ ಆಯ್ಕೆ ಅನ್ನು ಒಳಗೊಂಡಿದೆ.ಹಾಗೆಯೇ ಈ ಫೋನ್‌ ಬ್ಲೂ, ಬ್ಲ್ಯಾಕ್‌ ಹಾಗೂ ಓಪೆರಾ ಮಾವೆ ಕಲರ್‌ ಆಯ್ಕೆಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.

Redmi note 12 pro receives a huge price drop in India.