ಮಾರುಕಟ್ಟೆಯಲ್ಲಿ ನುಬಿಯಾ Z50S ಪ್ರೊ ಬಿರುಗಾಳಿ! ಅದ್ಬುತ ಕ್ಯಾಮೆರಾ ಡಿಸೈನ್‌!

20-07-23 09:24 pm       Source: Gizbot Kannada   ಡಿಜಿಟಲ್ ಟೆಕ್

ZTE ಕಂಪೆನಿ ನುಬಿಯಾ ಸರಣಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ZTE ಕಂಪೆನಿ ನುಬಿಯಾ ಸರಣಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಹೊಸ ಸ್ನಾಪ್‌ಡ್ರಾಗನ್‌ 8 Gen 2 ಅಡ್ವಾನ್ಸ್ಡ್ ಆವೃತ್ತಿ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದೆ.

ಹೌದು, ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ತನ್ನ ಪ್ಯಾನಲ್‌ ಡಿಸೈನ್‌ ಹಾಗೂ ಕ್ಯಾಮೆರಾ ವಿನ್ಯಾಸದಿಂದಾಗಿ ಭಾರಿ ಸೌಂಡ್‌ ಮಾಡುತ್ತಿದೆ. ಇನ್ನು ಸ್ಮಾರ್ಟ್‌ಫೋನ್‌ 5100mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದ್ದು, 80W ಫಾಸ್ಟ್ ಚಾರ್ಜ್ ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

nubia Z50S Pro Design and Key Specifications Revealed - Gizbot News

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ರಚನೆ

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ 6.78-ಇಂಚಿನ ಫ್ಲಾಟ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2800×1260 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು ಪ್ರಭಾವಶಾಲಿ 1000Hz ಗರಿಷ್ಠ ಸ್ಯಾಪ್ಲಿಂಗ್‌ ರೇಟ್‌ ಅನ್ನು ಒಳಗೊಂಡಿದೆ. ಜೊತೆಗೆ ಇದು UL ಪ್ಲಾಟಿನಂ ಲೋ ಬ್ಲೂ ಲೈಟ್‌ ಐ ಪ್ರೊಟೆಕ್ಷನ್‌ ಪ್ರಮಾಣೀಕರಣವನ್ನು ಹೊಂದಿದೆ.

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಜನ್ 2 ಅಡ್ವಾನ್ಸ್ಡ್ ಆವೃತ್ತಿ SoC ಪ್ರೊಸೆಸರ್‌ ವೇಗವನ್ನು ಪಡೆದಿದೆ. ಇದು ‌ಓವರ್‌ಲಾಕ್ಡ್ (3.36GHz ಪೀಕ್ ಕ್ಲಾಕ್ ಸ್ಪೀಡ್) ಚಿಪ್‌ನ ಆವೃತ್ತಿಯಾಗಿದೆ. ಈ ಸ್ಮಾರ್ಟ್‌ಫೋನ್‌ 12GB RAM + 256GB, 12GB RAM + 1TB ಮತ್ತು 16GB RAM + 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ.

ZTE Nubia Z50S Pro With Snapdragon 8 Gen 2, 5,100mAH Battery Launched:  Price, Specifications | Technology News

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಸೆಟ್‌ಅಪ್‌

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌, ಎರಡನೇ ಕ್ಯಾಮೆರಾ 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 8MP ಟೆಲಿಫೋಟೋ ಲೆನ್ಸ್ ಅನ್ನು ಬೆಂಬಲಿಸಲಿದೆ. ಇದಲ್ಲದೆ 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮರಾ ಸೆಟಪ್ ಕಸ್ಟಮ್ 1G + 6P ಲೆನ್ಸ್ ಅನ್ನು ಸಂಯೋಜಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ 80W ಫಾಸ್ಟ್ ಚಾರ್ಜ್ ಬೆಂಬಲಿಸುವ 5100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟ ಆಯ್ಕೆಗಳಲ್ಲಿ 5G/4G/3G/2G, WiFi 802.11a/b/g/n/ac/ax/be ಮತ್ತು ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದೆ. ಇದಲ್ಲದೆ X ಅಲ್ಟ್ರಾ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, X-ಆಕ್ಸಿಸ್ ಲೀನಿಯರ್ ಮೋಟಾರ್, ಇನ್‌ಫ್ರಾರೆಡ್‌ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

Nubia Z50S Pro with 50MP triple cameras, overclocked Snapdragon 8 Gen 2 SoC  & 80W fast charging launched - Gizmochina

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಬೆಲೆ ಮತ್ತು ಲಭ್ಯತೆ

ನುಬಿಯಾ Z50S ಪ್ರೊ ಸ್ಮಾರ್ಟ್‌ಫೋನ್‌ ಪ್ರಸ್ತುತ ಚೀನಾದಲ್ಲಿ ಬಿಡುಗಡೆಯಾಗಿದೆ. ಆದರಿಂದ ಇದರ ಬೆಲೆ 12GB RAM + 256GB ಸ್ಟೋರೇಜ್‌ ಆಯ್ಕೆಗೆ 3,699 ಯುವಾನ್ (ಅಂದಾಜು 42,310ರೂ) ಆಗಿದೆ. ಇನ್ನು 12GB RAM + 1TB ಸ್ಟೋರೇಜ್‌ ಆಯ್ಕೆಯು 3,999 ಯುವಾನ್ (ಅಂದಾಜು 45,742ರೂ)ಬೆಲೆ ಪಡೆದಿದೆ. ಇದರ 16GB RAM + 1TB ಸ್ಟೋರೇಜ್‌ ಆಯ್ಕೆಯು 4,399 ಯುವಾನ್ (ಅಂದಾಜು 50,317ರೂ) ಬೆಲೆಯಲ್ಲಿ ದೊರೆಯಲಿದೆ.

Nubia z50s pro with 80w fast charging launched details.