Samsung Galaxy Z Flip 5: ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಅನಾವರಣ; ಅಲೆ ಎಬ್ಬಿಸಲಿವೆ ಫೀಚರ್ಸ್‌!

26-07-23 10:30 pm       Source: Gizbot Kannada   ಡಿಜಿಟಲ್ ಟೆಕ್

ಲಾಂಚ್‌ ಆಗುವ ಮುನ್ನವೇ ಟೆಕ್‌ ವಲಯದಲ್ಲಿ ಸುನಾಮಿ ಎಬ್ಬಿಸಿದ್ದ ಸ್ಯಾಮ್‌ಸಂಗ್‌ನ (Samsung) ಹೊಸ ಡಿವೈಸ್‌ಗಳು ಕೊನೆಗೂ ಲಾಂಚ್‌ ಆಗಿವೆ.

ಲಾಂಚ್‌ ಆಗುವ ಮುನ್ನವೇ ಟೆಕ್‌ ವಲಯದಲ್ಲಿ ಸುನಾಮಿ ಎಬ್ಬಿಸಿದ್ದ ಸ್ಯಾಮ್‌ಸಂಗ್‌ನ (Samsung) ಹೊಸ ಡಿವೈಸ್‌ಗಳು ಕೊನೆಗೂ ಲಾಂಚ್‌ ಆಗಿವೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2023 ( Samsung Galaxy Unpacked 2023) ಕಾರ್ಯಕ್ರಮದಲ್ಲಿ ಹಲವಾರು ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡಲಾಗಿದ್ದು, ಗ್ಯಾಲಕ್ಸಿ Z ಫ್ಲಿಪ್‌ 5 ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ.

ಹೌದು, ಈ ವಿಶೇಷ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲಕ್ಸಿ Z ಫ್ಲಿಪ್ 5 ಫೋನ್‌, ಗ್ಯಾಲಕ್ಸಿ ವಾಚ್‌ 6, ಗ್ಯಾಲಕ್ಸಿ ಟ್ಯಾಬ್‌ 9 ಸರಣಿ ಅನಾವರಣ ಮಾಡಿದ್ದು, ಇದರೊಂದಿಗೆ ಬಹಳ ಕುತೂಹಲ ಉಂಟು ಮಾಡಿದ್ದ ಗ್ಯಾಲಕ್ಸಿ Z ಫ್ಲಿಪ್ 5 ಅನ್ನು ಲಾಂಚ್‌ ಮಾಡಿದೆ. ಐದನೇ ತಲೆಮಾರಿನ ಗ್ಯಾಲಕ್ಸಿ ಫೋಲ್ಡಬಲ್‌ ಫೋನ್‌ಗಳು ನಯವಾದ ವಿನ್ಯಾಸ, ಶಕ್ತಿಯುತ ಕಾರ್ಯಕ್ಷಮತೆ ಮತ್ತು ಗ್ರಾಹಕೀಯಗೊಳಿಸಬಹುದಾದ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ

Samsung Galaxy Z Fold 5 and Galaxy Z Flip 5 launched: Price, top specs,  features, and everything else - India Today

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 5 ಡಿಸ್‌ಪ್ಲೇ ವಿವರ:

ಗ್ಯಾಲಕ್ಸಿ Z ಫ್ಲಿಪ್ 5 ಮಡಚಬಹುದಾದ ಸ್ಮಾರ್ಟ್‌ಫೋನ್ (Smartphone) ವಿಭಾಗದಲ್ಲಿ ಸ್ಯಾಮ್‌ಸಂಗ್‌ನ ಇತ್ತೀಚಿನ ಕೊಡುಗೆಯಾಗಿದೆ. ಅನನ್ಯ ಮತ್ತು ಪಾಕೆಟ್ ಸ್ನೇಹಿಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, 2640 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಡೈನಾಮಿಕ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ.

ಇದರೊಂದಿಗೆ 60Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 720 x 748 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ ಹಾಗೂ 306 PPI ನೊಂದಿಗೆ 3.4 ಇಂಚಿನ ಸೂಪರ್ ಅಮೋಲೆಡ್‌ ಕವರ್ ಡಿಸ್‌ಪ್ಲೇ ಆಯ್ಕೆ ಇದೆ. ಹಾಗೆಯೇ ಈ ಫ್ಲೆಕ್ಸ್ ವಿಂಡೋ ಪ್ರತ್ಯೇಕವಾಗಿದ್ದು, ಇದು ಹಿಂದಿನ ಮಾದರಿಗಳಿಗಿಂತ ಹಲವು ಪಟ್ಟು ದೊಡ್ಡದಾಗಿದ್ದು, ಇದರಲ್ಲಿ ಗ್ರಾಹಕೀಯಗೊಳಿಸಬಹುದಾದ ಸೌಲಭ್ಯ ಇರಲಿದೆ.

Samsung Galaxy Z Fold5 and Galaxy Z Flip5 launched Globally with up to 120Hz  AMOLED display, Snapdragon 8 Gen 2 SoC

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 5 ಪ್ರೊಸೆಸರ್‌ ಮಾಹಿತಿ: ಇದರ ಪ್ರೊಸೆಸರ್‌ ವಿಚಾರಕ್ಕೆ ಬರುವುದಾದರೆ ಸ್ನಾಪ್‌ಡ್ರಾಗನ್‌ 8 ಜನ್‌ 2 (Snapdragon 8 Gen 2)ನಿಂದ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ವಿವಿಧ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಮಾಡಬಹುದಾಗಿದೆ. ಅಂದರೆ ಅತ್ಯುತ್ತಮ ಕಾರ್ಯಕ್ಷಮತೆ ಇದರಲ್ಲಿದೆ. ಉಳಿದಂತೆ ಅಡ್ರಿನೋ GPU ನೊಂದಿಗೆ ಈ ಫೋನ್‌ ಪ್ಯಾಕ್‌ ಆಗಿದ್ದು, 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 5 ಕ್ಯಾಮೆರಾ ವಿನ್ಯಾಸ: ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ(Triple rear camera) ಆಯ್ಕೆ ಪಡೆದುಕೊಂಡಿದೆ. ಅಂದರೆ 12M ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಆಯ್ಕೆ ಇದ್ದು, ಸೆಲ್ಫಿಗಾಗಿ ಮುಂಭಾಗದಲ್ಲಿ 10 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

Samsung Galaxy Z Flip5 with 6.7″ FHD+ 1-120Hz AMOLED Infinity Flex display,  3.4″ AMOLED cover display, Snapdragon 8 Gen 2 for Galaxy announced

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 5 ಬ್ಯಾಟರಿ ಸಾಮರ್ಥ್ಯ: ಇನ್ನು ಈ ಫೋನ್ 3,700mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 25W ವೇಗದ ಚಾರ್ಜಿಂಗ್ ಹಾಗೂ ವಾಯರ್‌ಲೆಸ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಉಳಿದಂತೆ 5G, 4G LTE, ವೈ-ಫೈ 6E, ಬ್ಲೂಟೂತ್ ಆವೃತ್ತಿ v5.3, ಜಿಪಿಎಸ್‌, ಮತ್ತು ಚಾರ್ಜಿಂಗ್ ಮತ್ತು ಡೇಟಾ ಸಿಂಕ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್‌ನ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 5 ಬೆಲೆ ಹಾಗೂ ಲಭ್ಯತೆ: ಇನ್ನು ಬೆಲೆಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ ಈ ಫೋನ್‌ನ 256GB ಸ್ಟೋರೇಜ್ ಆವೃತ್ತಿ $999 (ಅಂದಾಜು 82,000ರೂ.ಗಳು) ನಿಂದ ಪ್ರಾರಂಭ ಆಗಲಿದ್ದು, 512GB ಆವೃತ್ತಿಗೆ $1,119 (ಅಂದಾಜು 92,000ರೂ.ಗಳು) ಬೆಲೆ ಇರಲಿದೆ ಎಂದು ತಿಳಿದುಬಂದಿದೆ. ಈ ಫೋನ್‌ ಬೆಲೆಗಳನ್ನು ಭಾರತದಲ್ಲಿ ನಾಳೆ ಪ್ರಕಟಿಸಲಾಗುತ್ತದೆ.

ಈ ಫೋನ್‌ನೊಂದಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ ಫೋನ್‌(Samsung Galaxy Z Flip Phone) ಅನ್ನೂ ಸಹ ಲಾಂಚ್‌ ಮಾಡಲಾಗಿದ್ದು, ಇದು 5 7.6 ಇಂಚಿನ QXGA+ ಡೈನಾಮಿಕ್ ಅಮೋಲೆಡ್‌ 2X ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇ ಜೊತೆಗೆ 2,176x1,812 ಪಿಕ್ಸೆಲ್‌ಗಳ ರೆಸಲ್ಯೂಶನ್, 21.6:18 ಆಕಾರ ಅನುಪಾತ, 374ppi ಮತ್ತು 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ಹೊಂದಿದೆ. ಹಾಗೆಯೇ ಮತ್ತೊಂದು ಬದಿಯ ಡಿಸ್‌ಪ್ಲೇ 6.2 ಇಂಚಿನಿಂದ ಕೂಡಿದ್ದು, ಇದು HD+ ಡೈನಾಮಿಕ್ ಅಮೋಲೆಡ್‌ ಡಿಸ್‌ಪ್ಲೇ ಆಗಿದೆ.

Samsung Galaxy z flip 5 with 120hz amoled display launched know specs price details.