ಆಂಡ್ರಾಯ್ಡ್‌ ಫೋನ್‌ನ ಬ್ಯಾಟರಿ ಚಾರ್ಜ್‌ ಜಾಸ್ತಿ ಉಳಿಸಿಕೊಳ್ಳಲು ಇಲ್ಲಿವೆ ಕೆಲ ಟಿಪ್ಸ್

28-07-23 09:16 pm       Source: Vijayakarnataka   ಡಿಜಿಟಲ್ ಟೆಕ್

ಆಂಡ್ರಾಯ್ಡ್‌ ಫೋನ್‌ನ ಬ್ಯಾಟರಿ ಚಾರ್ಜ್‌ ಹೇಗೆ ಹೆಚ್ಚು ಹೊತ್ತು ಉಳಿಸಿಕೊಳ್ಳುವುದು ಎಂದು ನೀವು ಚಿಂತಿಸುತ್ತಿದ್ದೀರಾ?

ಸ್ಮಾರ್ಟ್‌ ಫೋನ್‌ಗಳು ಈಗ ನಮ್ಮ ಬದುಕಿನಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೊಬೈಲ್ ಫೋನ್‌ಗಳು ಈಗ ಬರೀ ಸಂವಹನದ ಮಾಧ್ಯಮಗಳಾಗಿ ಮಾತ್ರ ಉಳಿದಿಲ್ಲ. ಇದರಾಚೆಗೂ ಫೋನ್‌ನ ಸಾಕಷ್ಟು ಪ್ರಯೋಜನಗಳಿವೆ. ಹೀಗಾಗಿ, ಮೊಬೈಲ್ ಫೋನ್‌ನ ಚಾರ್ಜ್‌ ಅನ್ನು ಹೆಚ್ಚು ಉಳಿಸಿಕೊಳ್ಳುವುದು ಕೂಡಾ ಬಹಳ ಮುಖ್ಯವಾಗಿದೆ.

5 tips to extend the battery life of your Android phone | Technology News -  The Indian Express

ಆಂಡ್ರಾಯ್ಡ್‌ ಫೋನ್‌ಗಳು ಈಗ ಪವರ್ ಸೇವಿಂಗ್ ಮೋಡ್‌ನೊಂದಿಗೆಯೇ ಬರುತ್ತದೆ. ಬ್ಯಾಟರಿ ಚಾರ್ಜ್‌ ಅನ್ನು ಅನಗತ್ಯವಾಗಿ ಬಳಸುವ ವೈಶಿಷ್ಟ್ಯಗಳು, ಆಪ್‌ಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸುವ ಮೂಲಕ ಇದು ಫೋನ್‌ನ ಬ್ಯಾಟರಿಯನ್ನು ಉಳಿಸುತ್ತದೆ. ಇದರ ಜೊತೆಗೆ ಆಂಡ್ರಾಯ್ಡ್‌ ಫೋನ್ ಬಳಕೆದಾರರು ಕೂಡಾ ಕೆಲವೊಂದು ವಿಧಾನದ ಮೂಲಕ ಬ್ಯಾಟರಿ ಚಾರ್ಜ್‌ ಅನ್ನು ಜಾಸ್ತಿ ಉಳಿಸಿಕೊಳ್ಳಲು ಪ್ರಯತ್ನಿಸಬಹುದು. ಅಂತಹ ಕೆಲವು ಟಿಪ್ಸ್ ಇಲ್ಲಿವೆ.

10 Tips to Boost Your Android Phone's Battery Life | PCMag

  • ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಆಪ್‌ಗಳಿರುತ್ತವೆ. ಆದರೆ, ಇವುಗಳಲ್ಲಿ ಕೆಲವೊಂದು ಆಪ್‌ಗಳನ್ನು ನಾವು ಕಡಿಮೆ ಬಳಸುತ್ತೇವೆ ಅಥವಾ ಬಳಸುವುದೇ ಇಲ್ಲ. ಒಂದೊಮ್ಮೆ ನಿಮ್ಮ ಫೋನ್‌ನಲ್ಲಿ ಇಂತಹ ಆಪ್‌ಗಳಿದ್ದರೆ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ ಅಥವಾ ಡಿಸೇಬಲ್ ಮಾಡಿ. ನಿಮ್ಮ ಫೋನ್‌ನ ಸೆಟ್ಟಿಂಗ್‌ಗೆ ಹೋಗಿ ಇದನ್ನು ಮಾಡಬಹುದು. ಬ್ಯಾಟರಿ ಉಳಿಸಲು ಇದೂ ಸಹಕಾರಿ.
  • ಸ್ಕ್ರೀನ್ ಟೈಮ್ ಔಟ್ ಅನ್ನು ಸೆಟ್ ಮಾಡಿ. ಆಂಡ್ರಾಯ್ಡ್‌ ಫೋನ್‌ ಬಳಸಿದ ಬಳಿಕ ಸ್ಕ್ರೀನ್ ಆಟೋಮ್ಯಾಟಿಕ್ ಆಗಿ ಆಫ್ ಆಗುತ್ತದೆ. ಈ ಅವಧಿ ಆದಷ್ಟು ಕಡಿಮೆ ಇಟ್ಟುಕೊಂಡರೆ ಒಳ್ಳೆಯದು. ಡಿಸ್‌ಪ್ಲೇ ಸೆಟ್ಟಿಂಗ್‌ಗೆ ಹೋಗಿ, ಇಲ್ಲಿ ಸ್ಕ್ರೀನ್ ಟೈಮ್ಔಟ್ ನೋಡಿ. ಬಳಿಕ ಸಾಧ್ಯವಾದಷ್ಟು ಕಡಿಮೆ ಟೈಮ್ ಲಿಮಿಟ್ ಅನ್ನು ಸೆಟ್ ಮಾಡಿ.
  • ಬ್ಯುಸಿ ಹೋಮ್‌ ಸ್ಕ್ರೀನ್ ನಿಮ್ಮ ಬ್ಯಾಟರಿಯ ಚಾರ್ಜ್‌ ಬಳಸುತ್ತದೆ. ಹೀಗಾಗಿ, ಬ್ಯಾಟರಿ ಬಾಳಿಕೆಗೆ ಆಂಡ್ರಾಯ್ಡ್‌ ಬಳಕೆದಾರರು ಲೈವ್‌ ವಾಲ್‌ಪೇಪರ್ ಮತ್ತು ಇತರ ಅನಗತ್ಯ ವಿಡ್ಜೆಟ್‌ ನಂತಹ ಫೀಚರ್‌ಗಳನ್ನು ನಿಮ್ಮ ಹೋಮ್‌ ಸ್ಕ್ರೀನ್‌ನಿಂದ ತೆಗೆಯಿರಿ.
  • ಫೋನ್‌ನ ಬ್ರೈಟ್‌ನೆಸ್ ಸಾಧ್ಯವಾದಷ್ಟು ಕಡಿಮೆ ಇಟ್ಟುಕೊಳ್ಳಿ. ಇದರಿಂದಲೂ ಬ್ಯಾಟರಿ ಉಳಿಸಿಕೊಳ್ಳಬಹುದು.
  • ವೈಬ್ರೇಷನ್ ಮೋಡ್ ಅನ್ನು ಆಫ್ ಮಾಡಿ. ರಿಂಗ್‌ ಟೋನ್‌ಗಿಂತ ವೈಬ್ರೇಷನ್‌ ಅಲರ್ಟ್‌ ಮೋಡ್ ಜಾಸ್ತಿ ಬ್ಯಾಟರಿಯನ್ನು ಡ್ರೈನ್ ಮಾಡುತ್ತದೆ. ಹೀಗಾಗಿ, ವೈಬ್ರೇಷನ್ ಮೋಡ್ ಅನ್ನು ಆಫ್ ಮಾಡಿ ಇಟ್ಟುಕೊಂಡರೂ ಉತ್ತಮ.
  • ಬ್ಯಾಟರಿಯನ್ನು ಉಳಿಸಲು ಕೆಲವೊಂದು ಆಪ್‌ಗಳ ನೋಟಿಫಿಕೇಷನ್ ಅನ್ನು ಆಫ್‌ ಮಾಡುವುದೂ ಒಳ್ಳೆಯದು. ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಆಪ್‌ಗಳ ನೋಟಿಫಿಕೇಷನ್ ಆಫ್‌ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಬ್ಯಾಟರಿ ಚಾರ್ಜ್ ಉಳಿಸಿಕೊಳ್ಳಲು ಜಿಪಿಎಸ್ ಅನ್ನು ಆಫ್ ಮಾಡಿಟ್ಟುಕೊಳ್ಳುವುದೂ ಉತ್ತಮ.
  • ಆಂಡ್ರಾಯ್ಡ್‌ ಫೋನ್‌ನಲ್ಲಿ ಮತ್ತು ಆಪ್‌ಗಳಲ್ಲಿ ಡಾರ್ಕ್ ಥೀಮ್ ಅನ್ನು ಬಳಸುವುದೂ ಬ್ಯಾಟರಿ ಉಳಿಸುವಲ್ಲಿ ಪ್ರಯೋಜನಕಾರಿ.
  • ಈ ಎಲ್ಲಾ ಸರಳ ವಿಧಾನಗಳ ಮೂಲಕ ನೀವು ನಿಮ್ಮ ಆಂಡ್ರಾಯ್ಡ್‌ ಫೋನ್‌ನ ಬ್ಯಾಟರಿ ಚಾರ್ಜ್ ಇನ್ನೂ ಹೆಚ್ಚು ಉಳಿಸಿಕೊಳ್ಳಲು ಪ್ರಯತ್ನಿಸಬಹುದು.

How to conserve your android phones battery.