Redmi 12 5G: ಬಹು ನಿರೀಕ್ಷಿತ ರೆಡ್ಮಿ 12 5G ಸ್ಮಾರ್ಟ್‌ಫೋನ್‌ ಲಾಂಚ್‌, ರಗಡ್‌ ಲುಕ್‌, ಬೊಂಬಾಟ್‌ ಫೀಚರ್ಸ್‌!

01-08-23 10:32 pm       Source: Gizbot Kannada   ಡಿಜಿಟಲ್ ಟೆಕ್

ಬಹುನಿರೀಕ್ಷಿತ ರೆಡ್ಮಿಯ (Redmi) ಹೊಸ ಡಿವೈಸ್‌ಗಳು ಲಾಂಚ್‌ ಆಗಿವೆ. ಈ ಸಮಾರಂಭದಲ್ಲಿ ಶಿಯೋಮಿ ಟಿವಿ X ಸರಣಿ ಮತ್ತು ರೆಡ್ಮಿ ವಾಚ್ 3 ಆಕ್ಟಿವ್ ಸ್ಮಾರ್ಟ್‌ವಾಚ್ ಸೇರಿದಂತೆ ಅನೇಕ ಸ್ಮಾರ್ಟ್‌ಡಿವೈಸ್‌ಗಳನ್ನು ಅನಾವರಣ ಮಾಡಿದ್ದು, ಅದರಲ್ಲಿ ಈಗಾಗಲೇ ಭಾರೀ ಸದ್ದು ಮಾಡಿದ್ದ ರೆಡ್ಮಿ 12 5G ಫೋನ್‌ (Redmi 12 5G smartphone) ಸಹ ಅನಾವರಣ ಆಗಿದೆ.

ಬಹುನಿರೀಕ್ಷಿತ ರೆಡ್ಮಿಯ (Redmi) ಹೊಸ ಡಿವೈಸ್‌ಗಳು ಲಾಂಚ್‌ ಆಗಿವೆ. ಈ ಸಮಾರಂಭದಲ್ಲಿ ಶಿಯೋಮಿ ಟಿವಿ X ಸರಣಿ ಮತ್ತು ರೆಡ್ಮಿ ವಾಚ್ 3 ಆಕ್ಟಿವ್ ಸ್ಮಾರ್ಟ್‌ವಾಚ್ ಸೇರಿದಂತೆ ಅನೇಕ ಸ್ಮಾರ್ಟ್‌ಡಿವೈಸ್‌ಗಳನ್ನು ಅನಾವರಣ ಮಾಡಿದ್ದು, ಅದರಲ್ಲಿ ಈಗಾಗಲೇ ಭಾರೀ ಸದ್ದು ಮಾಡಿದ್ದ ರೆಡ್ಮಿ 12 5G ಫೋನ್‌ (Redmi 12 5G smartphone) ಸಹ ಅನಾವರಣ ಆಗಿದೆ.

ಹೌದು, ರೆಡ್ಮಿ 12 5G ಸ್ಮಾರ್ಟ್‌ಫೋನ್‌ ಲಾಂಚ್‌ ಆಗುವ ಮುನ್ನವೇ ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತು. ಅದರಲ್ಲೂ ಕೈಗೆಟಕುವ ದರದಲ್ಲಿ ಲಭ್ಯ ಆಗುತ್ತಿರುವ ಹಾಗೂ ಅತ್ಯುತ್ತಮ ಫೀಚರ್ಸ್‌ ಆಯ್ಕೆ ಇರುವ ಸ್ಮಾರ್ಟ್‌ಫೋನ್‌ ಎಂದು ಹೊಗಳಿಸಿಕೊಂಡಿತ್ತು. ಕೊನೆಗೂ ಈ ಫೋನ್‌ ಲಾಂಚ್‌ ಆಗಿದ್ದು, ಇದು ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ ನಿಂದ ಕಾರ್ಯನಿರ್ವಹಿಸಲಿದ್ದು, 256GB ಇಂಟರ್‌ ಸ್ಟೋರೇಜ್‌ ಆಯ್ಕೆ ಮೂಲಕ ವಿಶೇಷ ಎನಿಸಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ ಬನ್ನಿ.

Redmi 12 5G launched in India with Snapdragon 4 Gen 2 chip, glass back,  50MP camera, and more - Gizmochina

ರೆಡ್ಮಿ 12 5G ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.79 ಇಂಚಿನ FHD ಡಿಸ್‌ಪ್ಲೇ ಹೊಂದಿದ್ದು, 90 Hz ನ ರಿಫ್ರೆಶ್ ರೇಟ್ ಪ್ಯಾನೆಲ್‌ನೊಂದಿಗೆ ಅತ್ಯುತ್ತಮ ಸೌಲಭ್ಯ ಪಡೆದಿದೆ. ಇದರೊಂದಿಗೆ 1080 X 2400 ಪಿಕ್ಸೆಲ್‌ನ ಸ್ಕ್ರೀನ್ ರೆಸಲ್ಯೂಶನ್‌ ಹಾಗೂ 240Hz ಟಚ್‌ ಮಾದರಿ ರೇಟ್‌ ಆಯ್ಕೆ ಯಾವುದೇ ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್‌ ಸಂದರ್ಭದಲ್ಲಿ ಉತ್ತಮ ಅನುಭವ ನೀಡಲಿದೆ.

ಈ ಫೋನ್ ಗ್ಲಾಸ್ ಡಿಸೈನ್ ಬ್ಯಾಕ್ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದ್ದು, ರೆಡ್ಮಿ ಸ್ಮಾರ್ಟ್‌ಫೋನ್‌ನಲ್ಲಿ ಮೊದಲ ಬಾರಿಗೆ ಈ ಫೀಚರ್ಸ್‌ ಆಯ್ಕೆ ನೀಡಲಾಗಿದೆ ಎಂದು ಶಿಯೋಮಿ ಮಾಹಿತಿ ನೀಡಿದೆ. ರೆಡ್ಮಿ 12 ನ ಗ್ಲಾಸ್ ಬ್ಯಾಕ್ ಗೀರುಗಳ ವಿರುದ್ಧ ಉತ್ತಮ-ದರ್ಜೆಯ ರಕ್ಷಣೆಯನ್ನು ನೀಡುತ್ತದಂತೆ. ಇದಕ್ಕಾಗಿ ಕಠಿಣವಾದ ಸ್ಕ್ರ್ಯಾಚ್ ಪರೀಕ್ಷೆಗಳನ್ನು ಎದುರಿಸಿದೆ.

Redmi 12 Series With 5,000mAh Battery, 18W Fast Charging Support Launched  in India: Price, Specifications | Technology News

ರೆಡ್ಮಿ 12 5G ಪ್ರೊಸೆಸರ್‌ ಮಾಹಿತಿ : ಇದರೊಂದಿಗೆ ಈ ಹೊಸ ಫೋನ್ ವರ್ಧಿತ ಕಾರ್ಯಕ್ಷಮತೆಗಾಗಿ ಮಾಲಿ- G 52 ಜಿಪಿಯು ಜೊತೆಗೆ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಉಳಿದಂತೆ 8GB RAM ನೊಂದಿಗೆ 8 GB ವರ್ಚುವಲ್ RAM ಆಯ್ಕೆ ಸಹ ಈ ಫೋನ್‌ನಲ್ಲಿದ್ದು, 256 GB ಇಂಟರ್‌ ಸ್ಟೋರೇಜ್‌ ಬಳಕೆದಾರರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಿಕೊಡಲಿದೆ.

ರೆಡ್ಮಿ 12 5G ಕ್ಯಾಮೆರಾ ಸಾಮರ್ಥ್ಯ: ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ 50 ಮೆಗಾಪಿಕ್ಸೆಲ್‌ ಪ್ರೈಮರಿ ಶೂಟರ್, 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್‌ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಇನ್ನು ಕ್ಯಾಮೆರಾ ಫಿಲ್ಮ್ ಫಿಲ್ಟರ್ ಅನ್ನು ನೀಡುವ ರೆಡ್ಮಿ ಸರಣಿಯಲ್ಲಿ ಇದು ಮೊದಲ ಸ್ಮಾರ್ಟ್‌ಫೋನ್ ಆಗಿದೆ.

ರೆಡ್ಮಿ 12 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ರೆಡ್ಮಿ 12 5G ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬೃಹತ್‌ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ ಈ ಫೋನ್ ಆಂಡ್ರಾಯ್ಡ್ 13 ಅನ್ನು ರನ್‌ ಮಾಡಲಿದ್ದು, IP53 ರೇಟಿಂಗ್‌ ಪಡೆದುಕೊಂಡಿದ್ದು, ಧೂಳು ನಿರೋಧಕವಾಗಿದೆ.

Xiaomi launches Redmi 12 series smartphones in India: Price, specifications

ರೆಡ್ಮಿ 12 5G ಬೆಲೆ ಮತ್ತು ಲಭ್ಯತೆ: ಈ ಫೋನ್ ಮೂರು ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಅದರಲ್ಲಿ 4GB + 128GB, 6GB + 128GB, ಮತ್ತು 8GB + 256GB. 4GB + 128GB ಆಯ್ಕೆಗಳಿವೆ. 6GB + 128GB ವೇರಿಯಂಟ್‌ಗೆ 12499,ರೂ. 8GB + 256GB ವೇರಿಯಂಟ್‌ಗೆ 14,499 ರೂ.ಗಳು ಮತ್ತು ಸಾಮಾನ್ಯ ವೇರಿಯಂಟ್‌ಗೆ 10,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

ಈ ಮೇಲೆ ತಿಳಿಸಿದ ದರ ಆಫರ್ ಬೆಲೆ ಆಗಿದ್ದು, ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬೇಕು ಎಂದರೆ ವಿನಿಮಯ ಆಫರ್‌ ಬಳಕೆ ಮಾಡಿಕೊಳ್ಳಬಹುದು. ಉಳಿದಂತೆ ಈ ಸ್ಮಾರ್ಟ್‌ಫೋನ್‌ ಮಿ.ಕಾಮ್‌ ಹಾಗೂ ಶಿಯೋಮಿ ರಿಟೇಲರ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಆದರೆ ಈ ಫೋನ್‌ಗಳು ಸದ್ಯಕ್ಕೆ ಲಭ್ಯವಿಲ್ಲ. ಬದಲಾಗಿ ಆಗಸ್ಟ್ 4 ರಿಂದ ಮಾರಾಟಕ್ಕೆ ಮುಕ್ತವಾಗುತ್ತವೆ.

Redmi12 5G with snapdragon 4 gen 2 chipset launched in india know more details.