ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ ಅನಾವರಣ; ಪವರ್‌ ಫುಲ್‌ ಬ್ಯಾಟರಿ ಸಾಮರ್ಥ್ಯ!

02-08-23 09:12 pm       Source: Gizbot Kannada   ಡಿಜಿಟಲ್ ಟೆಕ್

ಮೊಬೈಲ್‌ ಮಾರುಕಟ್ಟೆಯಲ್ಲಿ ಟೆಕ್ನೋ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವತ್ತೆ ಟೆಕ್ನೋ ದಾಪುಗಾಲು ಇಟ್ಟಿದೆ.

ಮೊಬೈಲ್‌ ಮಾರುಕಟ್ಟೆಯಲ್ಲಿ ಟೆಕ್ನೋ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವತ್ತೆ ಟೆಕ್ನೋ ದಾಪುಗಾಲು ಇಟ್ಟಿದೆ. ಅದಕ್ಕೆ ಅನುಗುಣವಾಗಿ ಇದೀಗ ಟೆಕ್ನೋ ಕಂಪೆನಿ ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಹೌದು, ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ ಟೆಕ್‌ ವಲಯದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 68W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Tecno Pova 5 Pro With Arc Interface, 50-Megapixel Primary Camera Launched:  Price, Specifications | Technology News

ಟೆಕ್ನೋ ಪೋವಾ 5 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 84.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 396 ಪಿಪಿಐ ಸಾಂದ್ರತೆಯನ್ನು ಹೊಂದಿದ್ದು, 120Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ.

ಟೆಕ್ನೋ ಪೋವಾ 5 ಪ್ರೊ ಪ್ರೊಸೆಸರ್‌ ಯಾವುದು?

ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ HiOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಮಾಹಿತಿಯಿಲ್ಲ.

Tecno Pova 5 Pro launched with 50MP primary camera, all you must know  before you get

ಟೆಕ್ನೋ ಪೋವಾ 5 ಪ್ರೊ ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದ್ದು, ಸೆಕೆಂಡರಿ AI ಕ್ಯಾಮೆರಾದೊಂದಿಗೆ ಬರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್‌ನ ರಿಯರ್‌ ಪ್ಯಾನಲ್‌ನಲ್ಲಿ ಅಧಿಸೂಚನೆಗಳಿಗಾಗಿ RGB LED ದೀಪಗಳನ್ನು ಒಳಗೊಂಡಿರುವ ಹೊಸ 'ಆರ್ಕ್ ಇಂಟರ್ಫೇಸ್' ಅನ್ನು ಒಳಗೊಂಡಿದೆ.

ಟೆಕ್ನೋ ಪೋವಾ 5 ಪ್ರೊ ಬ್ಯಾಟರಿ ಮತ್ತು ಇತರೆ ಸೌಲಭ್ಯ

ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 68W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, NFC, GPS ಮತ್ತು A-GPS ಅನ್ನು ಒಳಗೊಂಡಿದೆ. ಇದಲ್ಲದೆ 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಅನ್ನು ಸಹ ಹೊಂದಿದೆ.

Tecno Pova 5 Pro launched in Indonesia, here's price, specifications

ಟೆಕ್ನೋ ಪೋವಾ 5 ಪ್ರೊ ಬೆಲೆ ಮತ್ತು ಲಭ್ಯತೆ

ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್‌ಫೋನ್‌ ಪ್ರಸ್ತುತ ಇಂಡೂನೇಷ್ಯಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ನ 8GB + 256GB RAM ಆಯ್ಕೆಯ ಬೆಲೆ IDR 2,949,000 (ಸುಮಾರು 16,000ರೂ)ಗೆ ನಿಗದಿಪಡಿಸಲಾಗಿದೆ. ಇದನ್ನು ಡಾರ್ಕ್ ಇಲ್ಯೂಷನ್ ಮತ್ತು ಸಿಲ್ವರ್ ಫ್ಯಾಂಟಸಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಭಾರತಕ್ಕೆ ಕೂಡ ಎಂಟ್ರಿ ನೀಡುವ ನಿರೀಕ್ಷೆಯಿದೆ.

tecno pova 5 pro with mac interface launched price specifications details.