ಈ ಹೊಸ ಲ್ಯಾಪ್‌ಟಾಪ್‌ ಬೆಲೆಯಲ್ಲಿ ಭಾರೀ ಇಳಿಕೆ!..ಖರೀದಿಗೆ ಬೆಸ್ಟ್‌ ಟೈಮ್‌!

03-08-23 08:21 pm       Source: Gizbot Kannada   ಡಿಜಿಟಲ್ ಟೆಕ್

ಚೀನಾ ಮೂಲದ ಹಾನರ್‌ ಬ್ರ್ಯಾಂಡ್‌ ಫೋನ್‌ ಸೇರಿದಂತೆ ಹಲವು ಟೆಕ್ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಹಾಗೆಯೇ ಹಾನರ್‌ ಸಂಸ್ಥೆಯು ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ ಡಿವೈಸ್‌ಗಳ ಆಯ್ಕೆ ಹೊಂದಿದೆ.

ಚೀನಾ ಮೂಲದ ಹಾನರ್‌ ಬ್ರ್ಯಾಂಡ್‌ ಫೋನ್‌ ಸೇರಿದಂತೆ ಹಲವು ಟೆಕ್ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಹಾಗೆಯೇ ಹಾನರ್‌ ಸಂಸ್ಥೆಯು ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ ಡಿವೈಸ್‌ಗಳ ಆಯ್ಕೆ ಹೊಂದಿದೆ. ಆ ಪೈಕಿ ಇತ್ತೀಚಿಗಷ್ಟೆ ಹೊಸದಾಗಿ ಬಿಡುಗಡೆ ಮಾಡಿರುವ ಹಾನರ್‌ ಮ್ಯಾಜಿಕ್‌ X14 2023 ಲ್ಯಾಪ್‌ಟಾಪ್‌ ಈಗ ಸಖತ್‌ ಡಿಸ್ಕೌಂಟ್‌ ಪಡೆದಿದೆ.

ಹೌದು, ಪ್ರಮುಖ ಇ ಕಾಮರ್ಸ್‌ ತಾಣ ಅಮೆಜಾನ್‌ ನಲ್ಲಿ 'ಹಾನರ್‌ ಮ್ಯಾಜಿಕ್‌ X14 2023' ಲ್ಯಾಪ್‌ಟಾಪ್‌ 35% ರಷ್ಟು ಬೊಂಬಾಟ್‌ ರಿಯಾಯಿತಿ ಹೊಂದಿದೆ. ಈ ಲ್ಯಾಪ್‌ಟಾಪ್‌ (14 ಇಂಚಿನ) 8GB/512GB NVMe SSD ವೇರಿಯಂಟ್‌ ಡಿವೈಸ್‌ ಬೆಲೆಯು 74,999ರೂ. ಆಗಿದ್ದು, ಆದರೆ ಅಮೆಜಾನ್‌ ಆಫರ್‌ನಲ್ಲಿ 48,990ರೂ. ಗಳಿಗೆ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್‌ ಸಹ ದೊರೆಲಿದೆ. ಈ ಲ್ಯಾಪ್‌ಟಾಪ್‌ ಹಗುರವಾಗಿದ್ದು, 1.4ಕಿ.ಲೋ ತೂಕವನ್ನು ಪಡೆದುಕೊಂಡಿದೆ.

Honor MagicBook X 14, MagicBook X 15 Laptops With Up to Intel Core i5  Processor Launched in India | Technology News

ಹಾಗೆಯೇ ಹಾನರ್‌ ಸಂಸ್ಥೆಯ 'ಹಾನರ್‌ ಮ್ಯಾಜಿಕ್‌ X14 2023' ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್‌ ಮೂಲಕ ಕೆಲಸ ಮಾಡಲಿದೆ. 8GB + 512GB ಹಾಗೂ 16GB + 512GB RAM ಸ್ಟೋರೇಜ್‌ ವೇರಿಯಂಟ್‌ ಮಾಡೆಲ್‌ಗಳನ್ನು ಪಡೆದಿದೆ. ಇದರ ಜೊತೆಗೆ ಸ್ಟಿರಿಯೊ ಸ್ಪೀಕರ್‌ ಸೌಲಭ್ಯ ಸಹ ಒಳಗೊಂಡಿದೆ. ಹಾಗಾದರೆ ಹಾನರ್‌ ಮ್ಯಾಜಿಕ್‌ X14 2023 ಲ್ಯಾಪ್‌ಟಾಪ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹಾನರ್‌ ಮ್ಯಾಜಿಕ್‌ X14 2023 ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು. ಇನ್ನು ಈ ಲ್ಯಾಪ್‌ಟಾಪ್‌ ಡಿಸ್‌ಪ್ಲೇ 100 ಪ್ರತಿಶತ ಬಣ್ಣದ ಹರವು ಪಡೆದಿದೆ. ಹಾಗೆಯೇ ಇದು 300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಸಾಮರ್ಥ್ಯವನ್ನು ಸಹ ಹೊಂದಿವೆ. ಈ ಲ್ಯಾಪ್‌ಟಾಪ್‌ ತೆಳುವಾದ ವಿನ್ಯಾಸ ಹೊಂದಿದ್ದು, ಹಗುರವಾಗಿದೆ. ಜೊತೆಗೆ ಮೆಟಲ್ ಯುನಿಬಾಡಿ ಅನ್ನು ಇದು ಪಡೆದಿದೆ. ಇದರೊಂದಿಗೆ ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಸಹ ಒದಗಿಸಲಾಗಿದೆ.

Honor Magic book X14, X16 2023 With Powerful Intel 12th Gen H Series  Chipset Official India Launch Confirmed: Price, Launch Date, Specifications  -

ಹಾನರ್‌ ಮ್ಯಾಜಿಕ್‌ಬುಕ್ X14 ಲ್ಯಾಪ್‌ಟಾಪ್‌ ಫುಲ್‌-ಸೈಜ್ಡ್‌ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಪಡೆದುಕೊಂಡಿದ್ದು, ಎರಡನೆಯದು ಸ್ವತಂತ್ರ ಸಂಖ್ಯೆಯ ಪ್ಯಾಡ್ ಅನ್ನು ಸಹ ಒಳಗೊಂಡಿವೆ. ಇದರ ಜೊತೆಗೆ ಹಾನರ್‌ನ ಈ ಲ್ಯಾಪ್‌ಟಾಪ್‌ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಹೀಗಾಗಿ ಅತ್ಯುತ್ತಮ ಗೇಮಿಂಗ್ ಆಡಿಯೊವನ್ನು ಬಳಕೆದಾರರು ಅನುಭವಿಸಬಹುದು. ಹಾಗೆಯೇ ಲ್ಯಾಪ್‌ಟಾಪ್‌ ಸ್ಕ್ರೀನ್‌ ಸೌಂಡ್‌ ಎಫೆಕ್ಟ್‌ಗಳಿಗೆ ಆಟೋಮ್ಯಾಟಿಕ್‌ ಆಗಿ ಸೆಟ್ ಆಗುತ್ತದೆ.

ಹಾನರ್‌ ಮ್ಯಾಜಿಕ್‌ಬುಕ್‌ X14 2023 ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇದು ಸಾಫ್ಟ್‌ವೇರ್-ವಾರು, ಲ್ಯಾಪ್‌ಟಾಪ್‌ ವಿಂಡೋಸ್ 11 ಓಎಸ್‌ ನಲ್ಲಿ ಹಾನರ್ ಡಿವೈಸ್ ಕ್ಲೋನ್ ಅನ್ನು ಸಪೋರ್ಟ್ ಪಡೆದಿದೆ. ಇದರ ಜೊತೆಗೆ 16GB RAM ಮತ್ತು 512GB ಆಂತರೀಕ ಸ್ಟೊರೇಜ್‌ ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಅಲ್ಲದೇ ಈ ಎರಡು ಲ್ಯಾಪ್‌ಟಾಪ್‌ 65W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ 60Whr ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಹಾನರ್‌ ಮ್ಯಾಜಿಕ್‌ಬುಕ್‌ X14 2023 ಲ್ಯಾಪ್‌ಟಾಪ್‌ 8GB + 512GB ವೇರಿಯಂಟ್‌ ಮತ್ತು 16GB + 512GB RAM ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಹಾನರ್‌ ಮ್ಯಾಜಿಕ್‌ಬುಕ್ X16 2023 ಲ್ಯಾಪ್‌ಟಾಪ್‌ ಅನ್ನು ಗ್ರಾಹಕರು ಅಮೆಜಾನ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಖರೀದಿ ಮಾಡಬಹುದಾಗಿದೆ.

 

Honor Magicbook x14 2023 Laptop price drop on Amazon platform.