ಬ್ರೇಕಿಂಗ್ ನ್ಯೂಸ್
01-09-23 10:05 pm Source: Gizbot Kannada ಡಿಜಿಟಲ್ ಟೆಕ್
ಟೆಕ್ ವಲಯದಲ್ಲಿ ವಿವೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಒಂದು ತೂಕವಿದೆ. ತನ್ನ ಕ್ಯಾಮೆರಾ ಕೇಂದ್ರಿತ ಫೀಚರ್ಸ್‌ಗಳ ಮೂಲಕ ವಿವೋ ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಗಮನಸೆಳೆದಿವೆ. ಇದಕ್ಕೆ ಅನುಗುಣವಾಗಿ ವಿವೋ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದೀಗ ಹೊಸ ವಿವೋ V29 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಮುಂದಾಗಿದೆ.
ಹೌದು, ವಿವೋ ಕಂಪೆನಿ ಹೊಸ ವಿವೋ V29 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆದಿದೆ. ಈ ಸ್ಮಾರ್ಟ್‌ಫೋನ್ ಭಾರತ ಸೇರಿದಂತೆ 39 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆ ಆಗಲಿದೆ ಎಂದು ವಿವೋ ಹೇಳಿದೆ. ಇನ್ನು ವಿವೋ V29 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ. ಇನ್ನುಳಿದಂತೆ ವಿವೋ V29 5G ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ವಿವೋ V29 5G ಡಿಸ್‌ಪ್ಲೇ ರಚನೆ ನಿರೀಕ್ಷೆ ಏನು?
ವಿವೋ V29 5G ಸ್ಮಾರ್ಟ್‌ಫೋನ್ 6.78 ಇಂಚಿನ 1.5K AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1260 x 2800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದ್ದು, 90.8% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರಲಿದೆ ಎನ್ನಲಾಗಿದೆ. ಇದು 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.
ವಿವೋ V29 5G ಪ್ರೊಸೆಸರ್ ಯಾವುದು?
ವಿವೋ V29 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ FunTouch OS 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿರಲಿದೆ. ಇದಲ್ಲದೆ ವಿಸ್ತರಿತ RAM ಜೊತೆಗೆ 20GB ವರೆಗೆ ವಿಸ್ತರಿಸಬಹುದು ಎಂದು ವರದಿಯಾಗಿದೆ.
ವಿವೋ V29 5G ಕ್ಯಾಮೆರಾ ಸೆಟ್‌ಅಪ್
ವಿವೋ V29 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಜೊತೆಗೆ ರಿಂಗ್ LED ಫ್ಲ್ಯಾಷ್ ಅನ್ನು ಒಳಗೊಂಡಿದೆ. ಇದಲ್ಲದೆ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ವಿವೋ V29 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
ವಿವೋ V29 5G ಸ್ಮಾರ್ಟ್‌ಫೋನ್ 4,600mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿರಲಿದೆ. ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇನ್ನು ಸಮರ್ಥ ಶಾಖ ನಿರ್ವಹಣೆಗಾಗಿ ಅಲ್ಟ್ರಾ-ಲಾರ್ಜ್ VC ಬಯೋನಿಕ್ ಕೂಲಿಂಗ್ ಸಿಸ್ಟಮ್ ಅನ್ನು ಸಂಯೋಜಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿರಲಿದೆ ಎಂದು ಎನ್ನಲಾಗಿದೆ.
ವಿವೋ V29 5G ಬೆಲೆ ಮತ್ತು ಲಭ್ಯತೆ
ವಿವೋ V29 5G ಸ್ಮಾರ್ಟ್‌ಫೋನ್ ಮಿಡ್ ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ಬರುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಸದ್ಯದಲ್ಲೇ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಇದರ ಕಲರ್ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Vivo V29 5G with 50mp front Camera Tipped to Launch Soon in India.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm