ಬ್ರೇಕಿಂಗ್ ನ್ಯೂಸ್
28-11-26 02:42 pm HK News Staffer ಕ್ರೈಂ
ಮಂಗಳೂರು, ನ.28: ಕುಡಿದ ಮತ್ತಿನಲ್ಲಿ ಫಾರ್ಚುನರ್ ಕಾರು ಓಡಿಸುತ್ತಿದ್ದ ವ್ಯಕ್ತಿಯೊಬ್ಬ ರಸ್ತೆ ಬದಿ ನಿಲ್ಲಿಸಿದ್ದ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದು ಆಲ್ಟೋ ಕಾರಿನಲ್ಲಿದ್ದ ಕೇರಳದ ಕಣ್ಣೂರು ಮೂಲದ ಯುವಕ ಮೃತಪಟ್ಟ ಘಟನೆ ಉರ್ವ ಮೈದಾನ ಬಳಿಯ ಗಾಂಧಿನಗರ ಶಾಲೆಯ ಮುಂಭಾಗದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ನಡೆದಿದೆ.
ಉರ್ವ ಗಾಂಧಿನಗರದ ಸರ್ಕಾರಿ ಶಾಲೆಯ ಬಳಿ ನಿಲ್ಲಿಸಿದ್ದ ಆಲ್ಟೋ ಕಾರಿನಲ್ಲಿ ಕಣ್ಣೂರು ಮೂಲದ ಜಿತೇಂದ್ರ (41) ಎಂಬವರು ಮಾತ್ರ ಕುಳಿತಿದ್ದರು. ಈ ವೇಳೆ, ಅತಿ ವೇಗದಿಂದ ಬಂದ ಫಾರ್ಚುನರ್ ಕಾರು ನೇರವಾಗಿ ಡಿಕ್ಕಿಯಾಗಿದ್ದು ಬಳಿಕ ಮರ ಮತ್ತು ಕಾಂಪೌಂಡ್ ಗೋಡೆಗೂ ಬಡಿದು ನಿಂತಿದೆ. ಅಪಘಾತದ ತೀವ್ರತೆಗೆ ಆಲ್ಟೋ ಕಾರು ಮೇಲಕ್ಕೆ ಚಿಮ್ಮಿ ಕಾಂಪೌಂಡ್ ಗೋಡೆಯ ಎಡೆಯಲ್ಲಿ ಬಿದ್ದಿದೆ. ಚಾಲಕ ಜಿತೇಂದ್ರ ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಅಷ್ಟರಲ್ಲಿ ಮೃತಪಟ್ಟಿದ್ದಾರೆ.

ಜಿತೇಂದ್ರ ಮತ್ತು ಇತರ ಇಬ್ಬರು ಸ್ನೇಹಿತರೊಂದಿಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದು ನಿನ್ನೆ ಸಂಜೆ ಉರ್ವಾದ ಕೊರಗಜ್ಜನ ಕಟ್ಟೆಗೆ ನಮಿಸಲು ಬಂದಿದ್ದರು. ಆಲ್ಟೋ ಕಾರು ಸ್ನೇಹಿತ ಶರತ್ ಎಂಬವರದ್ದಾಗಿದ್ದು ಇವರು ಕಾರಿನಿಂದ ಇಳಿದು ಚಾರ್ಜರ್ ಖರೀದಿಗಾಗಿ ಪಕ್ಕದ ಮೊಬೈಲ್ ಅಂಗಡಿಗೆ ತೆರಳಿದ್ದರು. ಅಷ್ಟರಲ್ಲಿ ಫಾರ್ಚುನರ್ ಕಾರು ಡಿಕ್ಕಿಯಾಗಿ ದುರಂತ ಸೃಷ್ಟಿಸಿದೆ. ಫಾರ್ಚುನರ್ ಕಾರು ರಥಬೀದಿಯ ಬುಕ್ ಕಂಪನಿಗೆ ಸೇರಿದ್ದು ಎನ್ನಲಾಗಿದ್ದು ಆತನನ್ನು ಯಾರು ಎಲ್ಲಿಗೆ ಕರೆದೊಯ್ದಿದ್ದಾರೆ, ಗಾಯ ಆಗಿದೆಯೇ ಎನ್ನುವ ಬಗ್ಗೆ ತಿಳಿದಿಲ್ಲ ಎಂದು ಪಾಂಡೇಶ್ವರ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಮೃತ ಜಿತೇಂದ್ರ ಬೆಂಗಳೂರಿನಲ್ಲಿ ಎಸ್ ಬಿಐ ಬ್ಯಾಂಕ್ ಕಚೇರಿಯಲ್ಲಿ ಮ್ಯಾನೇಜರ್ ಆಗಿದ್ದು ರಜೆಯಲ್ಲಿ ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದರು. ಫಾರ್ಚುನರ್ ಜವರಾಯನಂತೆ ಎರಗಿ ಸಾವು ಉಂಟು ಮಾಡಿದೆ. ಫಾರ್ಚುನರ್ ಕಾರನ್ನು ಯಾರು ಕೂಡ ಒಯ್ಯಲು ಬಂದಿಲ್ಲ. ಸ್ಥಳದಲ್ಲೇ ಜಖಂ ಆಗಿ ಬಿದ್ದಿದೆ. ಕುಡಿದು ವಾಹನ ಚಲಾಯಿಸಿ ಸಾವಿಗೆ ಕಾರಣನಾದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
26-11-26 08:34 pm
HK News Staffer
ಆನೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಶಾಸಕರ ವಿರೋಧ ; ಯಾ...
25-11-26 07:48 pm
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ;...
25-11-26 02:11 pm
ಯೋಗಿಶ್ ಗೌಡ ಕೊಲೆ ಪ್ರಕರಣ ; ಕಾಂಗ್ರೆಸ್ ಶಾಸಕ ವಿನಯ...
25-11-26 02:10 pm
ಹಾಸನ ಜಿಲ್ಲಾಧಿಕಾರಿ ಬಗ್ಗೆ ಲಂಚದ ಆರೋಪ ; ಕೇಂದ್ರ ಸಚ...
24-11-26 08:43 pm
28-11-26 04:08 pm
HK News Staffer
ಇಸ್ರೇಲ್ ನಲ್ಲಿ ಮಂಗಳೂರಿನ ಯುವಕ ನಿಗೂಢ ಸಾವು ; ಕೊಲೆ...
25-11-26 11:53 am
Alwyn Joel Noronha, Mangalore: ಉದ್ಯಮಿ ಆಲ್ವಿನ್...
24-11-26 09:44 pm
ಮುಂಬೈ ನೌಕಾನೆಲೆಯಿಂದ ಮಾಹಿತಿ ಸೋರಿಕೆ ; 90 ರಹಸ್ಯ ವ...
24-11-26 08:45 pm
ಮಾಜಿ ಸಿಎಂ ಸ್ಟಾಲಿನ್ ಸೋಲಿಸಿದ್ದ ನಾಯಕನಿಗೆ ಭಾವಪೂರ್...
21-11-26 11:44 am
28-11-26 04:10 pm
HK News Staffer
ಡಿ.25ರಿಂದ ಮಂಗಳೂರಿನಲ್ಲಿ ಮೂರು ದಿನಗಳ ‘ವಿಶ್ವ ಕೌಶಲ...
28-11-26 08:54 am
ಧರ್ಮಸ್ಥಳ ಅಸಹಜ ಸಾವು ಪ್ರಕರಣ ; ಎಸ್ಐಟಿ ವರದಿಯನ್ನು...
27-11-26 06:23 pm
ಬೋಳೂರು - ಬೆಂಗ್ರೆ ಸೇತುವೆ ಕಾಮಗಾರಿ ; ಕ್ರೇನ್ ಸಹಿತ...
27-11-26 12:28 pm
ಮಂಗಳೂರು - ಬೆಂಗಳೂರು ವಾಹನ ಸಂಚಾರಕ್ಕೆ ಮತ್ತೊಂದು ಹೊ...
26-11-26 09:00 pm
28-11-26 02:42 pm
HK News Staffer
ವಿಟ್ಲದಲ್ಲಿ ಪತ್ನಿಯನ್ನು ಹತ್ಯೆಗೈದು ಹೃದಯಾಘಾತದ ಕತೆ...
27-11-26 03:14 pm
ಗೂಗಲ್ನಲ್ಲಿ ಹುಡುಕಾಡಿ ತುಂಗಾ ನದಿಗೆ ಸ್ನಾನಕ್ಕಿಳಿದ...
26-11-26 08:35 pm
ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯ...
26-11-26 07:47 pm
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆ...
26-11-26 02:48 pm