ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ನೀಡಿದ ಇನ್ಫಿನಿಕ್ಸ್‌ ಜಿರೋ 30 5G.. ಕ್ಯಾಮೆರಾ ವಿನ್ಯಾಸ ಹೇಗಿದೆ?

02-09-23 10:24 pm       Source: Gizbot Kannada   ಡಿಜಿಟಲ್ ಟೆಕ್

ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಇನ್ಫಿನಿಕ್ಸ್‌ ಜಿರೋ 30 5G ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ನೀಡಿದೆ. ತನ್ನ ಡಿಸೈನ್‌ ಹಾಗೂ ವಿನ್ಯಾಸದ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಸಾಕಷ್ಟು ಗಮನಸೆಳೆದಿದೆ.

ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಇನ್ಫಿನಿಕ್ಸ್‌ ಜಿರೋ 30 5G ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ನೀಡಿದೆ. ತನ್ನ ಡಿಸೈನ್‌ ಹಾಗೂ ವಿನ್ಯಾಸದ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಸಾಕಷ್ಟು ಗಮನಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ.

ಹೌದು, ಇನ್ಫಿನಿಕ್ಸ್‌ ಜಿರೋ 30 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ 144Hz ರಿಫ್ರೆಶ್‌ ರೇಟ್‌ ಬೆಂಬಲಿಸುವ ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಆನ್‌ಬೋರ್ಡ್‌ ಮೆಮೊರಿಯನ್ನು 21GB ವರೆಗೆ ವಿಸ್ತರಿಸಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Infinix Zero 30 5G Confirmed to Feature Dimensity 8020 Chipset, 108-Megapixel  Camera Ahead of Debut | Technology News

ಇನ್ಫಿನಿಕ್ಸ್‌ ಜಿರೋ 30 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಇನ್ಫಿನಿಕ್ಸ್‌ ಜಿರೋ 30 5G ಸ್ಮಾರ್ಟ್‌ಫೋನ್‌ 6.78-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,400x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಡಿಸ್‌ಪ್ಲೇ 60-ಡಿಗ್ರಿ ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 144Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 950 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಇದು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು DCI-P3 ಬಣ್ಣದ ಹರವು 100 ಪ್ರತಿಶತ ಕವರೇಜ್ ಅನ್ನು ತಲುಪಿಸಲು ರೇಟ್ ಮಾಡಲಾಗಿದೆ.

ಇನ್ಫಿನಿಕ್ಸ್‌ ಜಿರೋ 30 5G ಪ್ರೊಸೆಸರ್‌ ಯಾವುದು?

ಇನ್ಫಿನಿಕ್ಸ್‌ ಜಿರೋ 30 5G ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ XOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ Memfusion RAM ಫೀಚರ್ಸ್‌ ಮೂಲಕ ಹೆಚ್ಚುವರಿ ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು ಆನ್‌ಬೋರ್ಡ್ ಮೆಮೊರಿಯನ್ನು 21GB ವರೆಗೆ ವಿಸ್ತರಿಸಬಹುದಾಗಿದೆ.

Infinix Zero 30 5G With Dimensity 8020 SoC, 108-Megapixel Triple Rear  Cameras Launched in India: Price, Specifications | Technology News

ಇನ್ಫಿನಿಕ್ಸ್‌ ಜಿರೋ 30 5G ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಇನ್ಫಿನಿಕ್ಸ್‌ ಜಿರೋ 30 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸಹ ಹೊಂದಿದ್ದು, ಡ್ಯುಯಲ್ LED ಫ್ಲ್ಯಾಷ್‌ನೊಂದಿಗೆ ಬರಲಿದೆ.

ಇನ್ಫಿನಿಕ್ಸ್‌ ಜಿರೋ 30 5G ಬ್ಯಾಟರಿ ಮತ್ತು ಇತರೆ

ಇನ್ಫಿನಿಕ್ಸ್‌ ಜಿರೋ 30 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 68W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಅನ್ನು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 80% ವರೆಗೆ ಚಾರ್ಜಿಂಗ್‌ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, NFC, GPS, USB ಟೈಪ್-C ಪೋರ್ಟ್, ಬ್ಲೂಟೂತ್ 5.3, ಮತ್ತು Wi-Fi 6 ಅನ್ನು ಒಳಗೊಂಡಿವೆ. ಇದಲ್ಲದೆ ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, G-ಸೆನ್ಸರ್, ಗೈರೊಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ನೊಂದಿಗೆ ಬರಲಿದೆ.

Infinix Zero 30 5G Launched in India With 144Hz 3D Curved Display, MediaTek  Dimensity 8020 SoC, Price and Specifications Details - MobiLapy

ಇನ್ಫಿನಿಕ್ಸ್‌ ಜಿರೋ 30 5G ಬೆಲೆ ಮತ್ತು ಲಭ್ಯತೆ

ಇನ್ಫಿನಿಕ್ಸ್‌ ಜಿರೋ 30 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬೇಸ್ ಮಾಡೆಲ್‌ 8GB RAM + 128GB ಸ್ಟೋರೇಜ್ ಆಯ್ಕೆಗೆ 23,999ರೂ ಬೆಲೆಯನ್ನು ಹೊಂದಿದೆ. ಇದರ 12GB RAM + 256GB ಸ್ಟೋರೇಜ್‌ ಆಯ್ಕೆಗೆ 24,999ರೂ ಬೆಲೆಯನ್ನು ನಿಗದಿಪಡಿಸಲಾಗಿದೆ. ಸ್ಮಾರ್ಟ್‌ಫೋನ್‌ ಅನ್ನು ಗೋಲ್ಡನ್ ಅವರ್ ಮತ್ತು ರೋಮ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದ್ದು, ಇದೇ ಸೆಪ್ಟೆಂಬರ್ 8ರಿಂದ ಸೇಲ್‌ ಪ್ರಾರಂಭವಾಗಲಿದೆ.

Infinix Zero 30 5G with 108 Megapixel Triple Rear Cameras Launched in India.