ಬಿಎಸ್‌ಎನ್‌ಎಲ್‌ನ ಈ ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಭರ್ಜರಿ ಪ್ರಯೋಜನೆಗಳು!

04-12-20 12:38 pm       Source: GIZBOT Manthesh   ಡಿಜಿಟಲ್ ಟೆಕ್

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಅಧಿಕ ವ್ಯಾಲಿಡಿಟಿ ಹಾಗೂ ಡೇಟಾ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.

ದೇಶದ ಟೆಲಿಕಾಂ ವಲಯದಲ್ಲಿ ಬಿಎಸ್‌ಎನ್‌ಎಲ್‌ ಸೇರಿದಂತೆ ಖಾಸಗಿ ಟೆಲಿಕಾಂಗಳು ಆಕರ್ಷಕ ಪ್ಲ್ಯಾನ್ ಪರಿಚಯಿಸಿವೆ. ಇತ್ತೀಚಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಅಧಿಕ ವ್ಯಾಲಿಡಿಟಿ ಹಾಗೂ ಡೇಟಾ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಅದೇ ಹಾದಿಯಲ್ಲಿ ಬಿಎಸ್‌ಎನ್‌ಎಲ್‌ ಇತ್ತೀಚಿಗಷ್ಟೆ ಪರಿಚಯಿಸಿರುವ 1499ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಅಧಿಕ ಪ್ರಯೋಜನಗಳಿಂದ ಗಮನ ಸೆಳೆದಿದೆ.

ಹೌದು, ಬಿಎಸ್‌ಎನ್‌ಎಲ್ 1499ರೂ. ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಯೋಜನೆಯಾಗಿದ್ದು, ಒಟ್ಟು 24GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಹಾಗೂ ಎಸ್‌ಎಮ್‌ಎಸ್‌ ಪ್ರಯೋಜನವನ್ನು ಈ ಯೋಜನೆಯು ಹೊಂದಿದೆ. ಅದೇ ರೀತಿ ವಾರ್ಷಿಕ ವ್ಯಾಲಿಡಿಟಿ ಯೋಜನೆಗಳಲ್ಲಿ ಬಿಎಸ್‌ಎನ್‌ಎಲ್‌ನ 1999ರೂ. ಪ್ಲ್ಯಾನ್‌ ಸಹ ಆಕರ್ಷಕ ಅನಿಸಿದೆ. ಈ ಯೋಜನೆಗಳ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.


ಬಿಎಸ್‌ಎನ್‌ಎಲ್ 1499ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ನ 1499ರೂ. ಪ್ಲ್ಯಾನಿನಲ್ಲಿ ಭಾರತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್ ಕರೆಗಳು ಲಭ್ಯ(250 ನಿಮಿಷ). ಇದರೊಂದಿಗೆ ಒಟ್ಟು 24GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಪ್ರತಿದಿನ 100ಎಸ್‌ಎಮ್‌ಎಸ್‌ ಸೌಲಭ್ಯಗಳು ಸಿಗಲಿವೆ. ಇನ್ನು ಈ ಯೋಜನೆಯು 395 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ.



ಬಿಎಸ್‌ಎನ್‌ಎಲ್ 1,999ರೂ. ಪ್ಲ್ಯಾನ್ ಪ್ರಯೋಜನಗಳು

ಬಿಎಸ್‌ಎನ್‌ಎಲ್‌ನ 1,999ರೂ. ಪ್ಲ್ಯಾನಿನಲ್ಲಿ ಭಾರತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್ ಕರೆಗಳು, ಪ್ರತಿದಿನ 3GB ಡೇಟಾ ಸೌಲಭ್ಯ ಸಹ ದೊರೆಯಲಿದೆ (ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1308GB ಡಾಟಾ). ಇದರೊಂದಿಗೆ ಪ್ರತಿದಿನ 100 ಎಸ್‌ಎಂಎಸ್ ಜೊತೆಗೆ ಬಿಎಸ್ಎನ್ಎಲ್ ಟ್ಯೂನ್ಸ್ ಮತ್ತು ಬಿಎಸ್ಎನ್ಎಲ್ ಟಿವಿ ಚಂದಾದಾರಿಕೆಯು ಸಹ ಉಚಿತವಾಗಿ ಲಭ್ಯವಾಗಲಿವೆ



ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

This News Article is a Copy of GIZBOT