ವಾಟ್ಸಾಪ್‌ ಬದಲು ಸಿಗ್ನಲ್‌ ಆಪ್‌ ಬಳಸಿ!..ವಾಟ್ಸಾಪ್‌ ವಿರುದ್ದ ಟೆಸ್ಲಾ CEO ಆಕ್ರೋಶ!

08-01-21 04:12 pm       Source: GIZBOT Mutthuraju H M   ಡಿಜಿಟಲ್ ಟೆಕ್

ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿ ಮತ್ತು ಸೇವಾ ನಿಯಮವನ್ನು ಬಳಕೆದಾರರು ಒಪ್ಪಿಕೊಳ್ಳಲೇಬೆಕಂಬ ನೀತಿಯ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿ ಮತ್ತು ಸೇವಾ ನಿಯಮವನ್ನು ಬಳಕೆದಾರರು ಒಪ್ಪಿಕೊಳ್ಳಲೇಬೆಕಂಬ ನೀತಿಯ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಾಗಲೇ ವಾಟ್ಸಾಪ್‌ ಬಳಕೆದಾರರ ಅಧಿಕ ಮಾಹಿತಿ ಸಂಗ್ರಹಣೆ ಮಾಡುತ್ತಿದೆ ಎನ್ನುವ ವಿಚಾರ ಕೂಡ ಹೆಚ್ಚು ಸದ್ದು ಮಾಡುತ್ತಿದೆ. ಇದೇ ಮಾಹಿತಿಯನ್ನು ಇಟ್ಟುಕೊಂಡು ವಾಟ್ಸಾಪ್‌ನ ಸರ್ವಾಧಿಕಾರಿ ದೊರಣೆಯ ವಿರುದ್ದ ಟೆಕ್‌ ವಲಯದ ಪ್ರಮುಖರು ಕೂಡ ಕಿಡಿಕಾರಿದ್ದಾರೆ. ಇದರ ನಡುವೆ ವಾಟ್ಸಾಪ್‌ ಬಿಟ್ಟು ವಾಟ್ಸಾಪ್‌ಗೆ ಪರ್ಯಾಯವಾದ ಟೆಲಿಗ್ರಾಮ್‌, ಸಿಗ್ನಲ್‌ ಆಪ್‌ಗಳನ್ನು ಬಳಸಿ ಎಂದು ಹೇಳಲಾಗ್ತಿದೆ.

ಹೌದು, ವಾಟ್ಸಾಪ್ ನ ಹೊಸ ಗೌಪ್ತಯತೆ ನೀಡತಿಯ ಬಗ್ಗೆ ಎಲ್ಲೆಡೆ ಅಸಮಾಧಾನ ವ್ಯಕ್ತವಾಗುತ್ತಿದೆ. ಇದೀಗ ವಾಟ್ಸಾಪ್‌ ಈ ನಿರ್ದೇಶನದ ಬಗ್ಗೆ ಟೆಸ್ಲಾ ಸಂಸ್ಥೆಯ CEO ಎಲೋನ್‌ ಮಸ್ಕ್‌ ಕೂಡ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ ತಮ್ಮ ಟ್ವೀಟ್‌ನಲ್ಲಿ ಬಳಕೆದಾರರು ಸಿಗ್ನಲ್ ಅಪ್ಲಿಕೇಶನ್‌ಗೆ ಬದಲಾಯಿಸಬೇಕೆಂದು ಸೂಚಿಸಿದ್ದಾರೆ. ಡೇಟಾ ಹಂಚಿಕೆ ಕುರಿತು ಫೇಸ್‌ಬುಕ್‌ನೊಂದಿಗೆ ಮತ್ತಷ್ಟು ಏಕೀಕರಣವನ್ನು ಸೂಚಿಸುವ ವಾಟ್ಸಾಪ್ ತನ್ನ ಗೌಪ್ಯತೆ ನೀತಿಗೆ ಪರಿಷ್ಕರಣೆ ಘೋಷಿಸಿದ ನಂತರ ಈ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಎಲೋನ್‌ ಮಸ್ಕ್‌ ಯಾರು? ಅವರು ಹೇಳಿದ್ದೇನು?



ವಾಟ್ಸಾಪ್ ನ ಹೊಸ ಸೇವಾ ನೀತಿ ವಿರುದ್ದ ಆನ್‌ಲೈನ್‌ನಲ್ಲಿ ಅಭಿಯಾನವೇ ನಡೆಯುತ್ತಿದೆ. ಈಗಗಾಲೇ ವಾಟ್ಸಾಪ್‌ ಬಿಟ್ಟು ಟೆಲಿಗ್ರಾಮ್‌ನತ್ತ ಮುಖ ಮಾಡಿ ಎಂದು ಆನ್‌ಲೈನ್‌ ಅಭಿಯಾನ ಕೂಡ ನಡೆಯುತ್ತಿದೆ. ಇದೀಗ ಟೆಸ್ಲಾ ಸಂಸ್ಥೆಯ CEO ಎಲೋನ್‌ ಮಸ್ಕ್‌ ಕೂಡ ವಾಟ್ಸಾಪ್‌ ನೀತಿಯ ವಿರುದ್ದ ಕಿಡಿಕಾರಿದ್ದಾರೆ. ವಾಟ್ಸಾಪ್‌ ಬಿಟ್ಟು ಸಿಗ್ನಲ್‌ ಅಪ್ಲಿಕೇಶನ್‌ ಬಳಸುವಂತೆ ಕರೆ ನೀಡಿದ್ದಾರೆ. ಸಿಗ್ನಲ್‌ ಅಪ್ಲಿಕೇಶನ್‌ ವಾಟ್ಸಾಪ್‌ನಂತೆಯೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಪ್ರೋಟೋಕಾಲ್ ಅನ್ನು ಹೊಂದಿದೆ. ಇದಲ್ಲದೆ, ಮಾಜಿ ವಾಟ್ಸಾಪ್‌ ಸಹ-ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಅವರು ಸಿಗ್ನಲ್‌ ಅಪ್ಲಿಕೇಶನ್‌ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.



ಇನ್ನು ಹೆಚ್ಚಿನ ಜನರು ಸಿಗ್ನಲ್ ಅಪ್ಲಿಕೇಶನ್‌ ಅನ್ನು ಬಳಸುವುದಕ್ಕೆ ಮುಂದಾಗುತ್ತಿದ್ದು, ಹೊಸ ಬಳಕೆದಾರರ ಒಳಹರಿವನ್ನು ನಿರ್ವಹಿಸಲು ಅಪ್ಲಿಕೇಶನ್ ಸಿದ್ಧವಾಗಿಲ್ಲ ಎನ್ನಲಾಗಿದೆ. ಹೊಸ ಬಳಕೆದಾರರ ಪ್ರವಾಹದಿಂದಾಗಿ ಅವುಗಳಲ್ಲಿ ಹಲವಾರು ಸಿಗ್ನಲ್ ಅಪ್ಲಿಕೇಶನ್‌ನಲ್ಲಿ ಖಾತೆಯನ್ನು ರಚಿಸಲು ಪರಿಶೀಲನಾ ಕೋಡ್‌ಗಳನ್ನು ಪಡೆಯುತ್ತಿಲ್ಲ ಎನ್ನಲಾಗಿದೆ. ಆದರೂ ಇದನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ವಾಹಕಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅಲ್ಲಿಯೇ ಇರಿ "ಎಂದು ಸಿಗ್ನಲ್ ಟ್ವಿಟರ್‌ನಲ್ಲಿ ತಿಳಿಸಿದೆ.ಸದ್ಯ ಸಿಗ್ನಲ್ ಅಪ್ಲಿಕೇಶನ್‌ ಅನ್ನು ಈಗಾಗಲೇ ಹತ್ತು ಮಿಲಿಯನ್ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ.

ಇದರ ನಡುವೆ ಟೆಸ್ಲಾ ಸಂಸ್ಥೆಯ CEO ಎಲೋನ್‌ ಮಸ್ಕ್‌ ವಾಟ್ಸಾಪ್‌ ವಿರುದ್ದ ಕಿಡಿಕಾರಿರುವುದು ಹೆಚ್ಚು ಚರ್ಚೆಯಾಗುತ್ತಿದೆ. ಏಕೆಂದರೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜನವರಿ 7, 2021 ರಿಂದ ಗುರುವಾರ ಮಸ್ಕ್ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರನ್ನು ಮೀರಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಮಸ್ಕ್ ಸುಮಾರು 27 ಬಿಲಿಯನ್ ಯುಎಸ್ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ, ಇದು ಅವರನ್ನು ವಿಶ್ವದ ಅಗ್ರ 50 ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ.



ಇದೆಲ್ಲದರ ನಡುವೆ ಮಸ್ಕ್‌ ಫೇಸ್‌ಬುಕ್‌ ಒಡೆತನದ ಪ್ಲಾಟ್‌ಫಾರ್ಮ್‌ಗಳ ವಿರುದ್ದ ಕಿಡಿಕಾರಿರುವುದು ಇದೇ ಮೊದಲೇನಲ್ಲ. ವಾಷಿಂಗ್ಟನ್‌ನಲ್ಲಿನ ಯುಎಸ್ ಕ್ಯಾಪಿಟಲ್‌ನಲ್ಲಿ ಇತ್ತೀಚೆಗೆ ನಡೆದ ಗಲಭೆಗಳಿಗೆ ಫೇಸ್‌ಬುಕ್ ಕಾರಣ ಎಂದು ಸೂಚಿಸುವ ಮೂಲಕ ಮಸ್ಕ್ ಟ್ವಿಟರ್‌ನಲ್ಲಿ ಒಂದು ಲೆಕ್ಕವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಕಳೆದ ವರ್ಷ ಫೆಬ್ರವರಿಯಲ್ಲಿ, ಮಸ್ಕ್ ಟ್ವಿಟರ್‌ನಲ್ಲಿ ಜನರನ್ನು ಫೇಸ್‌ಬುಕ್ ಖಾತೆಗಳನ್ನು ಡಿಲೀಟ್‌ ಮಾಡುವಂತೆ ಕೇಳಿಕೊಂಡಿದ್ದರು. ಏಕೆಂದರೆ ಇದು ಒಂದು ರೀತಿಯ "lame" (ಕುಂಟ) ಮಾದರಿಯಂತೆ ಎಂದಿದ್ದರು.

This News Article is a Copy of GIZBOT