ನೆಟ್‌ಫ್ಲಿಕ್ಸ್‌ನಲ್ಲಿ ಹಿಸ್ಟರ್‌ ಕ್ಲಿಯರ್‌ ಮಾಡಲು ಹೀಗೆ ಮಾಡಿರಿ!

10-01-21 02:54 pm       Source: GIZBOT Mutthuraju H M   ಡಿಜಿಟಲ್ ಟೆಕ್

ಓಟಿಟಿ ಅಪ್ಲಿಕೇಶನ್‌ಗಳ ಜನಪ್ರಿಯತೆ ಹೆಚ್ಚಿದ್ದು, ವೆಬ್‌ ಸಿರೀಸ್‌ ಕಾರ್ಯಕ್ರಮಗಳು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿವೆ.

ಪ್ರಸ್ತುತ ಓಟಿಟಿ ಅಪ್ಲಿಕೇಶನ್‌ಗಳ ಜನಪ್ರಿಯತೆ ಹೆಚ್ಚಿದ್ದು, ವೆಬ್‌ ಸಿರೀಸ್‌ ಕಾರ್ಯಕ್ರಮಗಳು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿವೆ. ಈ ನಿಟ್ಟಿನಲ್ಲಿ ಬಳಕೆದಾರರು ಹೆಚ್ಚಾಗಿ ಓಟಿಟಿ ತಾಣಗಳಲ್ಲಿಯೇ ಮಗ್ನರಾಗಿರುತ್ತಾರೆ. ಆ ಪೈಕಿ ನೆಟ್‌ಫ್ಲಿಕ್ಸ್‌ ತಾಣ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಭಿನ್ನ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಸಾಗಿದೆ. ಈ ತಾಣಗಳಲ್ಲಿ ಬಳಕೆದಾರರು ತಮಗೆ ಬೇಕಾದ ಕಾರ್ಯಕ್ರಮ/ಕಂಟೆಂಟ್‌ ಸರ್ಚ್ ಮಾಡಿರುತ್ತಾರೆ. ಹೀಗೆ ಸರ್ಚ್ ಮಾಡಿರುವ ಹಿಸ್ಟರಿ ಕ್ಲಿಯರ್ ಮಾಡಬಹುದಾಗಿದೆ.

ಹೌದು, ನೆಟ್‌ಫ್ಲಿಕ್ಸ್‌ ಜನಪ್ರಿಯ ವೆಬ್‌ ಸಿರೀಸ್‌ ಶೋ ಮತ್ತು ಹೊಸ ಸಿನಿಮಾಗಳಿಂದ ವೀಕ್ಷಕ ಸಮೂಹವನ್ನು ತನ್ನತ್ತ ಸೆಳೆದಿದೆ. ಇನ್ನು ಬಳಕೆದಾರರು ನೆಟ್‌ಫ್ಲಿಕ್ಸ್‌ ಆಪ್‌ನ ಸರ್ಚ್‌ ಆಯ್ಕೆಯಲ್ಲಿ ತಮಗೆ ಬೇಕಾದ ವಿಡಿಯೊಗಳನ್ನು/ ಕಾರ್ಯಕ್ರಮಗಳ ಹೆಸರುಗಳನ್ನು ಜಾಲಾಡಿರುತ್ತಾರೆ. ಬಳಕೆದಾರರು ಏನೆಲ್ಲಾ ಸರ್ಚ್ ಮಾಡಿದ್ದಾರೆ ಎನ್ನುವುದು ಹಿಸ್ಟರಿಯಲ್ಲಿ ಸ್ಟೋರ್ ಆಗಿರುತ್ತದೆ. ಆದ್ರೆ ಈ ಸರ್ಚ್ ಹಿಸ್ಟರಿ ಕ್ಲಿಯರ್ ಮಾಡಲು ಅವಾಕಶ ನೀಡಲಾಗಿದೆ.



ಐಫೋನ್‌ನಲ್ಲಿ ಈ ಹೀಗೆ ಮಾಡಿರಿ

* ನೆಟ್‌ಫ್ಲಿಕ್ಸ್ ತೆರೆದು ಬಲಗಡೆಯ ಸೈನ್‌ಇನ್ ಆಯ್ಕೆ ಮೂಲಕ ಲಾಗ್‌ಇನ್ ಆಗಿರಿ.

* ನಂತರ ಮೆನು ಆಯ್ಕೆಯನ್ನು ಕ್ಲಿಕ್ ಮಾಡಿರಿ

* ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ

* ಸರ್ಚ್ ಹಿಸ್ಟರಿ ಡಿಲೀಟ್ ಮಾಡುವ ಪ್ರೊಫೈಲ್ ಸೆಲೆಕ್ಟ್ ಮಾಡಿ

* ಆನಂತರ ಮತ್ತೆ ಮೆನು ಆಯ್ಕೆ ಒತ್ತಿರಿ ಮತ್ತು ಅಕೌಂಟ್ ಟ್ಯಾಪ್ ಮಾಡಿ

* ಆಗ ವ್ಯೂವಿಂಗ್ ಆಕ್ಟಿವಿಟಿ ಆಯ್ಕೆ ಕಾಣಿಸುತ್ತದೆ.

* ಮೈ ಆಕ್ಟಿವಿಟಿಯ ಆಯ್ಕೆ ಕ್ಲಿಕ್ ಮಾಡಿ ಮತ್ತು ಹೈಡ್ (Hide) ಆಲ್ ಒತ್ತಿರಿ.



ಡೆಸ್ಕ್‌ಟಾಪ್‌ನಲ್ಲಿ ಈ ಹಂತಗಳನ್ನು ಅನುಸರಿಸಿ

* ನೆಟ್‌ಫ್ಲಿಕ್ಸ್ ತೆರೆದು, ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ.

* ಕೆಳಭಾಗದ ಬಲಭಾಗದಲ್ಲಿ ಕಾಣುವ 'ಮೋರ್' ಆಯ್ಕೆ ಕ್ಲಿಕ್ಕ್ ಮಾಡಿ.

* ನಂತರ ಅಕೌಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

* ಸ್ಕ್ರೋಲ್‌ ಡೌನ್ ಮಾಡಿ, 'ವ್ಯೂವಿಂಗ್ ಆಕ್ಟಿವಿಟಿ' ಟ್ಯಾಪ್ ಮಾಡಿರಿ

* ವ್ಯೂವಿಂಗ್ ಹಿಸ್ಟರಿಯನ್ನು 'ಹೈಡ್ ಆಲ್'(Hide all) ಒತ್ತಿರಿ.

This News Article is a Copy of GIZBOT