ರಾತ್ರಿಯಿಡಿ ಮೊಬೈಲ್‌ ಚಾರ್ಜ್‌ಗೆ ಹಾಕಿದರೇ ಏನಾಗುತ್ತದೆ ಗೊತ್ತಾ?

10-01-21 03:42 pm       Source: GIZBOT Manthesh   ಡಿಜಿಟಲ್ ಟೆಕ್

ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ.

ಸದ್ಯ ಫೋನ್ ಎಲ್ಲರ ಅತೀ ಅವಶ್ಯ ಡಿವೈಸ್‌ ಆಗಿದ್ದು, ಮೊಬೈಲ್‌ಗೆ ಬ್ಯಾಟರಿ ಬ್ಯಾಕ್‌ಅಪ್‌ ಅತೀ ಮುಖ್ಯವಾಗಿದೆ. ಪ್ರಸ್ತುತ ಮೊಬೈಲ್ ಕಂಪನಿಗಳು ನೂತನ ಫೋನ್‌ಗಳಲ್ಲಿ ಅಧಿಕ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತಿವೆ. ಅದಗ್ಯೂ ಅತೀಯಾದ ಫೋನ್ ಬಳಕೆಯಿಂದ ಬ್ಯಾಟರಿ ಬ್ಯಾಕ್‌ಅಪ್‌ ಬಹುಬೇಗನೇ ಖಾಲಿಯಾಗಿ ಬಿಡುತ್ತದೆ. ಹೀಗಾಗಿ ಅನೇಕರು ರಾತ್ರಿಯಿಡಿ ಮೊಬೈಲ್‌ ಚಾರ್ಜಿಗೆ ಹಾಕುತ್ತಾರೆ. ಆದರೆ ಇದು ಎಷ್ಟು ಸರಿ.

ಹೌದು, ಸ್ಮಾರ್ಟ್‌ಫೋನ್ ಬಳಕೆ ಮಾಡುವ ಪ್ರತಿಯೊಬ್ಬರಲ್ಲಿಯೂ ಫೋನ್ ಚಾರ್ಜಿಂಗ್ ಬಗ್ಗೆ ಏನಾದರೂ ಒಂದು ಗೊಂದಲ ಇದ್ದೆ ಇರುತ್ತದೆ. ಫೋನ್ ಯವಾಗಾ ಚಾರ್ಜ್ ಮಾಡಬೇಕು? ಫೋನ್‌ ಎಷ್ಟು ಗಂಟೆ ಚಾರ್ಜ್ ಮಾಡಬೇಕು? ರಾತ್ರಿಯಿಡಿ ಫೋನ್ ಚಾರ್ಜ್ ಮಾಡಿದರೇ ಏನಾಗುತ್ತದೆ? ಫಾಸ್ಟ್‌ ಚಾರ್ಜರ್ ಬಳಸಬಹುದಾ ಹೀಗೆ ಕೆಲವು ಪ್ರಶ್ನೆಗಳು ಬಳಕೆದಾರರಲ್ಲಿ ಮೂಡಿರುತ್ತವೆ. ಆದರೂ ಹೆಚ್ಚಿನ ಬಳಕೆದಾರರು ರಾತ್ರಿಯಿಡಿ ಫೋನ್ ಚಾರ್ಜ್ ಹಾಕುವುದನ್ನು ರೂಢಿ ಮಾಡಿಕೊಂಡಿರುತ್ತಾರೆ.



ರಾತ್ರಿಯಿಡಿ ಚಾರ್ಜ್ ಖಂಡಿತಾ ಬೇಡ

ಅನೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿರಿ.



ಬ್ಯಾಟರಿ ಪೂರ್ಣ ಖಾಲಿ ಆಗದಿರಲಿ

ಸ್ಮಾರ್ಟ್‌ಫೋನಿನ ಪ್ರಮುಖ ಅಂಗವೇ ಬ್ಯಾಟರಿ. ಫೋನಿಗೆ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಂದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ 0 ಆಗುವವರೆಗೂ ಫೋನ್ ಬಳಕೆ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮ.



ಬಿಸಿ-ತಂಪು ಒಳ್ಳೆಯದಲ್ಲ

ಪ್ರಸ್ತುತ ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಲಿಥೀಯಮ್ ಬ್ಯಾಟರಿ (Lithium-ion batteries) ಗಳಿಗೆ ಅತೀಯಾದ ಬಿಸಿ ಮತ್ತು ಅತೀಯಾದ ತಂಪು ಆಗಿ ಬರುವುದಿಲ್ಲ. ಹೀಗಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಎಚ್ಚರವಹಿಸಬೇಕು. ಅಗತ್ಯವಾಗ ಕ್ರಮಗಳನ್ನು ಅನುಸರಿಸಿ ಚಾರ್ಜ್ ಮಾಡುವುದು ಉತ್ತಮ.



ಚಾರ್ಜಿಂಗ್‌ ಟೈಮ್‌ನಲ್ಲಿ ಫೋನ್ ಬಳಸಬೇಡಿ

ಬಹುತೇಕರು ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುತ್ತಾರೆ. ಈ ರೀತಿ ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವುದು ಬ್ಯಾಟರಿ ಲೈಫ್‌ಗೂ ಧಕ್ಕೆ ಹಾಗೂ ಅಪಾಯದ ಸಾಧ್ಯತೆಗಳಿ ಅಧಿಕವಾಗಿರುತ್ತವೆ. ಚಾರ್ಜಿಂಗ್ ವೇಳೆ ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್ ಬಳಕೆ ಮಾಡದೇ ಇರುವುದು ಅತೀ ಉತ್ತಮ.



ಒಮ್ಮೆಲೇ ಪೂರ್ಣ ಚಾರ್ಜ್ ಮಾಡಲೇಬೇಡಿ

ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ ಖಾಲಿಯಾಗಿದ್ದಾಗ ಫೋನ್ ಚಾರ್ಜಿಂಗ್ ಹಾಕಿ. ಆದರೆ ಫೋನ್ 0% ಪರ್ಸೆಂಟ್‌ನಿಂದ 100% ವರೆಗೆ ಪೂರ್ಣ ಚಾರ್ಜ್ ಮಾಡಲೇಬೇಡಿ. ಹೀಗೆ ಒಂದೇ ಬಾರಿಗೆ ಶೂನ್ಯದಿಂದ ಪೂರ್ಣ ಚಾರ್ಜ್ ಬ್ಯಾಟರಿ ಬಾಳಿಕೆಗೆ ಹಾನಿ ಉಂಡು ಮಾಡುವ ಸಾಧ್ಯತೆಗಳಿರುತ್ತವೆ. ಸುಮಾರು 60% ನಿಂದ 75% ಪರ್ಸೆಂಟ್ ನಡುವೆ ಇದ್ದಾಗ ಚಾರ್ಜಿಂಗ್ ತೆಗೆಯಿರಿ.

This News Article is a Copy of GIZBOT