ಕ್ಲಬ್‌ಹೌಸ್ ನಿಂದ ಬ್ಯಾಕ್‌ಚಾನಲ್ ಮೆಸೇಜಿಂಗ್ ಫೀಚರ್ಸ್‌ ಬಿಡುಗಡೆ!

16-07-21 10:00 am       GIZBOT Mutthuraju H M   ಡಿಜಿಟಲ್ ಟೆಕ್

ಹೊಸ ಕ್ಲಬ್‌ಹೌಸ್ ಬ್ಯಾಕ್‌ಚಾನಲ್ ಬಳಕೆದಾರರಿಗೆ ಒಂದೊಂದಾಗಿ ಮತ್ತು ಗ್ರೂಪ್‌ ಟೆಕ್ಸ್ಟ್‌ ಚಾಟ್‌ಗಳನ್ನು ಅನುಮತಿಸುತ್ತದೆ. ಈ ಫೀಚರ್ಸ್‌ ಐಚ್ಛಿಕ ಎರಡನೇ ಇನ್‌ಬಾಕ್ಸ್ ಅನ್ನು ಹೊಂದಿದೆ.

ಕಳೆದ ಕೆಲವು ತಿಂಗಳುಗಳಿಂದ ಸೊಶೀಯಲ್‌ ಆಡಿಯೋ ಅಪ್ಲಿಕೇಶನ್‌ ಕ್ಲಬ್‌ಹೌಸ್‌ ಸಾಕಷ್ಟು ಜನಪ್ರಿಯತೆ ಗಳಿಸದೆ. ಈಗಾಗಲೇ ಭಾರಿ ಸಂಚಲನ ಸೃಷ್ಟಿಸಿರುವ ಕ್ಲಬ್‌ಹೌಸ್ ಸೊಶೀಯಲ್‌ ಆಡಿಯೊ ಅಪ್ಲಿಕೇಶನ್ ಇದೀಗ ಹೊಸ ಡೈರೆಕ್ಟ್‌ ಮೆಸೇಜ್‌ ಫೀಚರ್ಸ್‌ ಬ್ಯಾಕ್‌ಚಾನಲ್ ಅನ್ನು ಪರಿಚಯಿಸಿದೆ. ಈ ಹೊಸ ಕ್ಲಬ್‌ಹೌಸ್ ಬ್ಯಾಕ್‌ಚಾನಲ್ ಬಳಕೆದಾರರಿಗೆ ಒಂದೊಂದಾಗಿ ಮತ್ತು ಗ್ರೂಪ್‌ ಟೆಕ್ಸ್ಟ್‌ ಚಾಟ್‌ಗಳನ್ನು ಅನುಮತಿಸುತ್ತದೆ. ಈ ಫೀಚರ್ಸ್‌ ಐಚ್ಛಿಕ ಎರಡನೇ ಇನ್‌ಬಾಕ್ಸ್ ಅನ್ನು ಹೊಂದಿದೆ.

ಹೌದು, ಇನ್ವೈಟ್‌ ಒನ್ಲಿ ಅಪ್ಲಿಕೇಶನ್‌ ಕ್ಲಬ್‌ಹೌಸ್‌ ಹೊಸ ಬ್ಯಾಕ್‌ಚಾನಲ್‌ ಫೀಚರ್ಸ್‌ ಪರಿಚಯಿಸಿದೆ. ಇದು ಕ್ಲಬ್‌ಹೌಸ್‌ನಲ್ಲಿ ಡೈರೆಕ್ಟ್‌ ಮೆಸೇಜ್‌ ಸೇವೆ ನೀಡಲಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡಲ್ಲೂ ಲಭ್ಯವಿದೆ. ಇನ್ನು ಈ ಹೊಸ ಫಿಚರ್ಸ್‌ ಬಗ್ಗೆ ಕ್ಲಬ್‌ಹೌಸ್‌ ತನ್ನ ಟ್ವಟಿರ್‌ನಲ್ಲಿ ಪ್ರಕಟಣೆ ನೀಡಿದೆ. ಹಾಗಾದ್ರೆ ಕ್ಲಬ್‌ಹೌಸ್‌ ಪರಿಚಯಿಸಿರುವ ಬ್ಯಾಕ್‌ ಚಾನಲ್‌ ಫೀಚರ್ಸ್‌ ವಿಶೇಷತೆ ಏನು? ಇದರ ಕಾರ್ಯ ನಿರ್ವಹಣೆ ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ‌.ಕ್ಲಬ್‌ಹೌಸ್ ಬ್ಯಾಕ್‌ಚಾನಲ್

ಕ್ಲಬ್‌ಹೌಸ್ ಬ್ಯಾಕ್‌ಚಾನಲ್ ಹೊಸ ನೇರ ಸಂದೇಶ ಸೇವೆಯಾಗಿದೆ. ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಈ ವೈಶಿಷ್ಟ್ಯ ಲಭ್ಯವಿದೆ. ಇದರ ಮೂಲಕ ಬಳಕೆದಾರರು ಒಬ್ಬರಿಗೊಬ್ಬರು ಮತ್ತು ಗ್ರೂಪ್‌ಗಳಲ್ಲಿ ಚಾಟ್ ಮಾಡಬಹುದು. ಅವರು ಲಿಂಕ್‌ಗಳನ್ನು ಸಹ ಕಳುಹಿಸಬಹುದು. ಈ ಫೀಚರ್ಸ್‌ನಲ್ಲಿ ಇನ್ನೂ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ಹೊಂದಿಲ್ಲ. ಆದರೆ ಇತರ ಕೆಲವು ವೈಶಿಷ್ಟ್ಯಗಳೊಂದಿಗೆ ಕ್ರಿಯಾತ್ಮಕತೆಯು ಶೀಘ್ರದಲ್ಲೇ ಬರಲಿದೆ. ಅಲ್ಲದೆ ಇದು ಆಪ್ಸನಲ್‌ ಸೆಕೆಂಡ್‌ ಇನ್‌ಬಾಕ್ಸ್ ಸಹ ಇರುತ್ತದೆ, ಇಲ್ಲಿ ಸಂದೇಶ ವಿನಂತಿಗಳನ್ನು ಕಾಣಬಹುದಾಗಿದೆ.

ಇನ್ನು ಬ್ಯಾಕ್‌ಚಾನಲ್‌ನೊಂದಿಗೆ, ಸ್ಪೀಕರ್ ನಿಮ್ಮ ಸಹ-ಹೋಸ್ಟ್‌ಗಳೊಂದಿಗೆ ಚಾಟ್ ಮಾಡಬಹುದು. ಮುಂದೆ ಯಾವ ಪ್ರಶ್ನೆಯನ್ನು ಕೇಳಬೇಕೆಂದು ಯೋಜಿಸಬಹುದು, ಅಥವಾ ಪ್ರೇಕ್ಷಕರಿಂದ ಯಾರನ್ನು ಎಳೆಯಬೇಕು ಎಂದು ನಿರ್ಧರಿಸಬಹುದು. ಸರಳವಾಗಿ ಹೇಳುವುದಾದರೆ ಸ್ಪೀಕರ್‌ಗಳು ಸಕ್ರಿಯ ರೂಂ ಟೈಂನಲ್ಲಿ ಮುಂಚಿತವಾಗಿ ಸಂಘಟಿಸಬಹುದು ಅಥವಾ ಸಂದೇಶ ಕಳುಹಿಸುವ ಮೂಲಕ ಲೈವ್ ಅನ್ನು ಸಂಯೋಜಿಸಬಹುದು. ಕೇಳುಗರು ಕೋಣೆಯಲ್ಲಿ ಸಕ್ರಿಯವಾಗಿರುವಾಗ ಪ್ರೇಕ್ಷಕರಲ್ಲಿ ತಮ್ಮ ಇತರ ಸ್ನೇಹಿತರೊಂದಿಗೆ ಚಾಟ್ ಮಾಡಲು ಸಹ ಸಾಧ್ಯವಾಗುತ್ತದೆ.ಕ್ಲಬ್‌ಹೌಸ್ ಬ್ಯಾಕ್‌ಚಾನಲ್ ನಲ್ಲಿ ಮೆಸೇಜ್‌ ಮಾಡುವುದು ಹೇಗೆ ?

ಹಂತ: 1 ಆಯಾ ಅಪ್ಲಿಕೇಶನ್ ಸ್ಟೋರ್‌ನಿಂದ ಕ್ಲಬ್‌ಹೌಸ್ ಅಪ್ಲಿಕೇಶನ್ ಅನ್ನು ಅಪ್ಡೇಟ್‌ ಮಾಡಿ

ಹಂತ: 2 ಅಪ್ಡೇಟ್‌ ಮಾಡಿದ ನಂತರ, ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ, ಅಪ್ಲಿಕೇಶನ್ ಹೋಮ್ ಪರದೆಯ ಕೆಳಗಿನ ಬಲಭಾಗದಲ್ಲಿ ಮತ್ತು ಕೊಠಡಿಗಳ ಒಳಗೆ ನೀವು ಕಾಣುವ ಏರೋಪ್ಲೇನ್ ಐಕಾನ್ ಅನ್ನು ಟ್ಯಾಪ್ ಮಾಡಿ.

ಹಂತ:3 ಅಲ್ಲಿಂದ ನಿಮ್ಮ ಸಂದೇಶಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.

ಹಂತ:4 ನಂತರ ಮೇಲಿನ ಬಲ ಮೂಲೆಯಲ್ಲಿರುವ ಪೆನ್ ಮತ್ತು ಪೇಪರ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ನೀವು ಹೊಸ ಖಾಸಗಿ ಅಥವಾ ಗುಂಪು ಸಂದೇಶಗಳನ್ನು ರಚಿಸಬಹುದು.

ಈ ಸಮಯದಲ್ಲಿ, ಬ್ಯಾಕ್‌ಚಾನಲ್ ವೈಶಿಷ್ಟ್ಯವು ಚಾಟ್‌ಗಳನ್ನು ಅಳಿಸುವ ಆಯ್ಕೆಯನ್ನು ನೀಡುವುದಿಲ್ಲ, ಆದಾಗ್ಯೂ, ಇದು ಭವಿಷ್ಯದಲ್ಲಿ ಆಯ್ಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಕ್ಲಬ್‌ಹೌಸ್ ಹೇಳುತ್ತದೆ.

(Kannada Copy of Gizbot Kannada)