ಬ್ರೇಕಿಂಗ್ ನ್ಯೂಸ್
01-03-26 04:56 pm HK News Desk ಕರ್ನಾಟಕ
ಹುಬ್ಬಳ್ಳಿ, ಮಾರ್ಚ್ 1: ರಾಜ್ಯದಲ್ಲಿ ಹಿಂದೂ ಸಮಾಜ ಅನಾಥವಾಗಿದೆ. ಮುಸಲ್ಮಾನರಿಗೆ ಕರ್ನಾಟಕ ರಾಜ್ಯ ಸ್ವರ್ಗ, ಹಿಂದುಗಳಿಗೆ ನರಕವಾಗಿದೆ. ಮುಂದಿನ ಚುನಾವಣೆ ಹಿಂದುತ್ವದ ಮೇಲೆ ಆಗುತ್ತೆ, ಕೇಸರಿ ಪಡೆ ಗೆಲ್ಲುತ್ತೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ, ಡಿಸಿಎಂ ಕುವೆಂಪು ಮಾತನ್ನ ಪ್ರಸ್ತಾಪ ಮಾಡ್ತಾರೆ. ಸರ್ವಜನಾಂಗ ಶಾಂತಿಯ ತೋಟ ಅಂತಾರೆ. ಆದರೆ ಮದ್ದೂರು, ನಾಗಮಂಗಲ, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗಗಳಲ್ಲಿ ಗಲಾಟೆಗಳಾದವು. ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆಯಲ್ಲಿ ಕಲ್ಲು, ಚಪ್ಪಲಿಯಿಂದ ಹೊಡೀತಾರೆ. ಸಿಎಂ, ಡಿಸಿಎಂ ಹಾಗೂ ಗೃಹಮಂತ್ರಿಗಳು ಕಠಿಣ ಕ್ರಮ ಕೈಗೊಳ್ತೇವೆ ಅಂತ ಹೇಳ್ತಾರೆ. ಎಸ್ಪಿಗೆ ಮಸೀದಿಯಿಂದ ಬಂದ ಕಲ್ಲು ಬಿದ್ದು ರಕ್ತ ಬಂದಿದೆ. ಅವರನ್ನ ಕೂಡಲೇ ಬಂಧನ ಮಾಡಬಹುದಿತ್ತು. ಆದರೆ ಇವರಿಗೆ ಐಪಿಎಸ್ ಕಲಿತಿದ್ದೇನೆಂಬ ಸ್ವಾಭಿಮಾನ ಇರುತ್ತಿದ್ದರೆ ಅವರನ್ನು ಬಂಧಿಸಬೇಕಿತ್ತು. ಕಾಂಗ್ರೆಸ್ ಕಾರಣದಿಂದ ಮಾಡಿಲ್ಲ.
ಮಸೀದಿ ಇರೋದು ನಮಾಜ್ ಮಾಡೋಕೆ, ಅಲ್ಲಿ ಕಲ್ಲು-ಚಪ್ಪಲಿ ಹೇಗೆ ಬಂತು? ಅವತ್ತೇ ಮಸೀದಿಯನ್ನ ಸೀಜ್ ಮಾಡಿ ಮುಲ್ಲಾನನ್ನ ಅರೆಸ್ಟ್ ಮಾಡಬೇಕಿತ್ತು. ಮಸೀದಿಯಲ್ಲಿ ಆಯುಧಗಳಿರೋದು ಗೊತ್ತಿದ್ದೂ ಪೊಲೀಸರು ಸುಮ್ಮನಿದ್ರಾ.. ರಾಷ್ಟ್ರ ದ್ರೋಹಿ ಚಟುವಟಿಕೆ ಮಾಡುವ ಕೆಲವು ಮುಸಲ್ಮಾನರ ಮೇಲೆ ಕ್ರಮ ಕೈಗೊಂಡ್ರೆ ಇಂತಹ ಕೆಲಸ ಆಗೋದಿಲ್ಲ. ನಾವೇನೆ ಮಾಡಿದ್ರು ಕಾಂಗ್ರೆಸ್ ಸರ್ಕಾರದಿಂದ ರಕ್ಷಣೆ ಸಿಗುತ್ತದೆ ಎಂದು ಇಂತಹ ಘಟನೆಗಳು ನಡೀತಿವೆ. ಘಟನೆ ನಡೆದಾಗ 7-8 ಜನರನ್ನ ಅರೆಸ್ಟ್ ಮಾಡಿದ್ದಾರೆ. ಅವರು ಮತ್ತೆ ಜಾಮೀನು ಪಡೆದು ಹೊರಬಂದು ಅದನ್ನೇ ಮಾಡ್ತಾರೆ.
ಪಾಕಿಸ್ತಾನ್ ಜಿಂದಾಬಾದ್ ಅಂತ ಎಷ್ಟು ಜನ ಕೂಗಿದ್ದಾರೆ. ಒಬ್ಬರಾದ್ರೂ ಜೈಲಲ್ಲಿದ್ದಾರಾ...ಮುಂದಿನ ಚುನಾವಣೆ ಹಿಂದುತ್ವ, ರಾಷ್ಟ್ರೀಯತೆ ಮೇಲೆ ಆಗುತ್ತೆ. ಹಿಂದುತ್ವವನ್ನು ಉಳಿಸಿದವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಹಿಂದುಗಳು ಏನು ತಪ್ಪು ಮಾಡಿದ್ದಾರೆ? ಶಾಂತಿಯಿಂದ ಇರೋದೆ ತಪ್ಪಾ? ರಾಜ್ಯ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ರಾಷ್ಟ್ರದ್ರೋಹಿ, ಗೂಂಡಾಗಳನ್ನು ಬಿಗಿ ಮಾಡಬೇಕು. ಪೊಲೀಸ್ ಇಲಾಖೆಯ ಮನಸ್ಥಿತಿಯೂ ಬದಲಾವಣೆ ಆಗಬೇಕು.
ಬಾಗಲಕೋಟೆಯಲ್ಲಿ ಎಸ್ಪಿ ಭಯಪಟ್ಟು ಮೇಲಿಂದ ಸಣ್ಣ ಎರಡು ಕಲ್ಲು ಬಿಸಾಕಿದ್ರು ಅಂತ ಹೇಳ್ತಾರೆ. ರಾಜ್ಯ ಸರ್ಕಾರದ ಮನಸ್ಥಿತಿಯೇ, ಪೊಲೀಸರದ್ದೂ ಮನಸ್ಥಿತಿಯಾಗಿದೆ. ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ, ಮುಸ್ಲಿಮರ ಮನಸ್ಥಿತಿ ಬದಲಾವಣೆ ಆಗಬೇಕು. ರಾಜ್ಯದಲ್ಲಿ ಕಾಂಗ್ರೆಸಿನ ಕೊನೆಯ ಸರ್ಕಾರ ಆಗುವಂತೆ ಅವರೇ ಮಾಡಿಕೊಳ್ಳುತ್ತಿದ್ದಾರೆ. ಮುಸಲ್ಮಾನರು ನೆಮ್ಮದಿಯಿಂದ ಇರಬೇಕು, ಹಿಂದುಗಳು ದುಃಖದಲ್ಲಿರಬೇಕು. ಇದು ನಿಮ್ಮ ಪಾಲಿಸಿನಾ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm