ವಾಟ್ಸ್ಆ್ಯಪ್ ವೆಬ್ " ಮೆಸೆಂಜರ್ ರೂಮ್ಸ್ "ಆಯ್ಕೆ ಬಳಸಿದ್ದೀರಾ?

02-08-20 09:21 am       Headline Karnataka News Network   ಡಿಜಿಟಲ್ ಟೆಕ್

ವಾಟ್ಸ್ಆ್ಯಪ್ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ಸ್​​​ಗಳನ್ನು ಪರಿಚಯಿಸುತ್ತಾ ಇರುತ್ತದೆ. ಇದೀಗ ವಾಟ್ಸ್ಆ್ಯಪ್ ವೆಬ್​​ನಲ್ಲಿ ಫೇಸ್​ನುಕ್​ ಮೆಸೆಂಜರ್ ರೂಮ್ಸ್ ಎಂಬ ಹೊಸ ಫೀಚರ್ ಪರಿಚಯಿಸಿದೆ.

Headline Karnataka Digital: ವಾಟ್ಸ್ಆ್ಯಪ್ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ಸ್​​​ಗಳನ್ನು ಪರಿಚಯಿಸುತ್ತಾ ಇರುತ್ತದೆ. ಇದೀಗ ವಾಟ್ಸ್ಆ್ಯಪ್ ವೆಬ್​​ನಲ್ಲಿ ಫೇಸ್​ನುಕ್​ ಮೆಸೆಂಜರ್ ರೂಮ್ಸ್ ಎಂಬ ಹೊಸ ಫೀಚರ್ ಪರಿಚಯಿಸಿದೆ. 

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಆ್ಯಪ್​ಗಳಲ್ಲಿ ವಾಟ್ಸ್​ಆ್ಯಪ್​ ಕೂಡ ಒಂದು. ಪ್ರಪಂಚದಾದ್ಯಂತ ಬಿಲಿಯನ್​ಗಟ್ಟಲೆ ಜನರು ವಾಟ್ಸ್​ಆ್ಯಪ್​ ಬಳಕೆ ಮಾಡುತ್ತಿದ್ದಾರೆ. ತಮ್ಮ ದೈನಂದಿನ ವ್ಯವಹಾರದಿಂದ ಹಿಡಿದು, ಸಂದೇಶ ರವಾನೆ, ಕರೆ, ಧ್ವನಿ, ವಿಡಿಯೋ ಮೂಲಕ ಸಂದೇಶವನ್ನು ಕಳುಹಿಸಲು ವಾಟ್ಸ್​ಆ್ಯಪ್​ ಬಳಕೆ ಮಾಡುತ್ತಿದ್ದಾರೆ.

ಇಷ್ಟೆಲ್ಲಾ ಜನಪ್ರಿಯತೆ ಪಡೆದ ವಾಟ್ಸ್ಆ್ಯಪ್ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ಸ್​​​ಗಳನ್ನು ಪರಿಚಯಿಸುತ್ತಾ ಇರುತ್ತದೆ. ಇದೀಗ ವಾಟ್ಸ್ಆ್ಯಪ್ ವೆಬ್​​ನಲ್ಲಿ ಫೇಸ್​ನುಕ್​ ಮೆಸೆಂಜರ್ ರೂಮ್ಸ್ ಎಂಬ ಹೊಸ ಫೀಚರ್ ಪರಿಚಯಿಸಿದೆ.

ಫೇಸ್​ಬುಕ್​​ ಕೆಲವು ತಿಂಗಳು ಹಿಂದೆ ವಾಟ್ಸ್ಆ್ಯಪ್ ವೆಬ್​​ನಲ್ಲಿ ಫೇಸ್​ಬುಕ್​ ಮೆಸೆಂಜರ್ ರೂಮ್ಸ್ ಫೀಚರ್ ನೀಡುವುದರ ಬಗ್ಗೆ ಹೇಳಿಕೊಂಡಿತ್ತು. ನೂತನ ಫೀಚರ್ ಬೀಟಾ ವರ್ಷನ್ ಮೂಲಕ ಸಿಗಲಿದೆ ಎಂದು ಸ್ಪಷ್ಟಣೆ ನೀಡಿತ್ತು. ಇದೀಗ ಹೊಸ ಮೆಸೆಂಜರ್​ ರೂಮ್ಸ್​ ಫೀಚರ್​ ಬಳಕೆದಾರ ಬಳಕೆಗೆ ಸಿಗುತ್ತಿದೆ.

ಮೆಸೆಂಜರ್ ರೂಮ್ಸ್ ವಿಡಿಯೋ ಗ್ರೂಪ್ ಚಾಟ್ ಫೀಚರ್ ಅನ್ನು ಹೊಂದಿದ್ದು, ವಾಟ್ಸ್ಆ್ಯಪ್ ವೆಬ್​​ ಬಳಕೆದಾರರಿಗೆ ಬಳಕೆಗೆ ಯೋಗ್ಯವಾಗಿದೆ.

ಇನ್ನು ಪರ್ಸನಲ್ ಲ್ಯಾಪ್ ಟಾಪ್ ಮತ್ತು ಡೆಸ್ಕ್​​ಟಾಪ್ ಬಳಕೆದಾರರು ಮೆಸೆಂಜರ್ ರೂಮ್ಸ್ ಫೀಚರ್ ಅನ್ನು ತಮ್ಮ ವಾಟ್ಸ್ಆ್ಯಪ್ ವೆಬ್ ಮೂಲಕ ಬಳಕೆ ಮಾಡಬಹುದು.

ವಾಟ್ಸ್ಆ್ಯಪ್ ವೆಬ್ ಅಪ್ಡೇಟ್​​​​ ಮಾಡುವ ಮೂಲಕ ಮೆಸೆಂಜರ್​ ರೂಮನ್ಸ್​ ಫೀಚರ್​ ಬಳಸಬಹುದಾಗಿದೆ. ವಾಟ್ಸ್​ಆ್ಯಪ್​ 2.2031.4. ವರ್ಷನ್​ನಲ್ಲಿ ಸಿಗಲಿದೆ .

ವಾಟ್ಸ್​​ಆ್ಯಪ್​​ ಮೆಸೆಂಜರ್​ ರೂಮ್ಸ್​ ಬಳಸೋದು ಹೇಗೆ?

ವಾಟ್ಸ್​ಆ್ಯಪ್​ ವೆಬ್​ ತೆರೆದಂತೆ ಬಳಬಾಗದಲ್ಲಿ ಮೂರು ಚುಕ್ಕೆಗಳು ಕಾಣಸಿಗುತ್ತವೆ. ಅದರ ಮೇಲೆ ಕ್ಲಿಕ್​ ಮಾಡಿದಂತೆ ಮೆಸೆಂಜರ್​ ರೂಮ್ಸ್​ ಆಯ್ಕೆ ಸಿಗುತ್ತದೆ.

ಮೆಸೆಂಜರ್​ ರೂಮ್ಸ್​ ಕ್ಲಿಕ್​ ಮಾಡಿದಂತೆ ಫೇಸ್​ಬುಕ್​ ಮೆಸೆಂಜರ್​ ಆಯ್ಕೆ ಕಾಣಿಸುತ್ತದೆ. ನಂತರ ಫೇಸ್​ಬುಕ್​ ಮೆಸೆಂಜರ್​ನಲ್ಲಿ ರೂಮ್ಸ್​ ಕ್ರಿಯೇಟ್​ ಮಡಿ ಬಳಸಬಹುದಾಗಿದೆ.