ಬ್ರೇಕಿಂಗ್ ನ್ಯೂಸ್
23-05-22 10:38 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 23 : ದಲಿತ ಸ್ವಾಮೀಜಿಯೊಬ್ಬರಿಗೆ ಕೈತುತ್ತು ತಿನ್ನಿಸಿ ಬಳಿಕ ಸ್ವಾಮೀಜಿ ಬಾಯಿಯಿಂದ ಎಂಜಲು ಅನ್ನವನ್ನು ತೆಗೆಸಿ ತಮ್ಮ ಬಾಯಿಗೆ ಹಾಕಿಸಿಕೊಂಡು ಶಾಸಕ ಜಮೀರ್ ಅಹ್ಮದ್ ಖಾನ್ ದಲಿತೋದ್ಧಾರದ ನೆಪದಲ್ಲಿ ಅತಿರೇಕದ ವರ್ತನೆ ತೋರಿದ ಘಟನೆಯ ವಿಡಿಯೋ ವೈರಲ್ ಆಗಿದೆ.
ಚಾಮರಾಜಪೇಟೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಾಗೂ ಈದ್ ಮಿಲನ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ., ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ದಲಿತ ವರ್ಗದ ಅಡುಗೆಯವರು ಮಾಡಿದ ಊಟ ಮಾಡಲು ಶಾಲಾ ಮಕ್ಕಳು ವಿರೋಧ ಮಾಡಿದ್ದರು. ಈ ರೀತಿಯ ಭೇದ ನಮ್ಮಲ್ಲಿ ಇರಬಾರದು ಎನ್ನುತ್ತಾ ಶಾಸಕ ಜಮೀರ್ ಬಳಿಯಿದ್ದ ಸ್ವಾಮೀಜಿಗೆ ಕೈತುತ್ತು ತಿನ್ನಿಸಿದ್ದಾರೆ.
ದಲಿತ ಸಮುದಾಯದ ನಾಗರಾಜ ಸ್ವಾಮೀಜಿಯನ್ನು ಕರೆಸಿ ಜಮೀರ್ ಕೈತುತ್ತು ತಿನ್ನಿಸಿದ್ದು ನಂತರ ಸ್ವಾಮೀಜಿಯೇ ತನ್ನಲ್ಲಿ ತುತ್ತು ತಿನ್ನಿಸಲು ಮುಂದಾದಾಗ ಕೈ ತುತ್ತು ಬೇಡ, ನಿಮ್ಮ ಬಾಯಿಯ ಎಂಜಲಿನಿಂದಲೇ ಕೊಡಿ ಎಂದು ಅವರ ಬಾಯಿಯಿಂದ ಎಂಜಲು ಅನ್ನ ತೆಗೆಸಿ ಬಹಿರಂಗವಾಗಿ ಎಂಜಲು ಅನ್ನ ತಿಂದಿದ್ದಾರೆ. ಈ ವೀಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ವಿಡಿಯೋದಲ್ಲಿ ಶಾಸಕ ಜಮೀರ್ ವರ್ತನೆ, ಅವರಾಡುವ ಮಾತುಗಳಿವೆ. ಯುಪಿನಲ್ಲಿ ಒಂದು ಸ್ಕೂಲ್ ಇತ್ತು ಸರ್, ಸರ್ಕಾರಿ ಸ್ಕೂಲ್, ಬಹಳ ವರ್ಷಗಳಿಂದ ಅಲ್ಲಿ ದಲಿತರು ಅಡುಗೆ ಮಾಡುತ್ತಿದ್ದರು, ದಲಿತರು ಅಡುಗೆ ಮಾಡುತ್ತಿದ್ದಾರೆ ಅಂತಾ ಅಲ್ಲಿನ ಮಕ್ಕಳನ್ನು ಎತ್ತಿ ಕಟ್ಟಿ, ಇಲ್ಲಿ ಊಟ ಮಾಡಬಾರದು ಅಂತಾ ಕೆಲವರು ಗಲಾಟೆ ಮಾಡಿಸಿದ್ದರು. ಆ ಮಕ್ಕಳನ್ನು ರಾಜಕೀಯ ಮಾಡಿ ಮಕ್ಕಳು ಊಟ ಬಿಟ್ಟಿದ್ದಾರೆ. ಏನ್ರಿ ಇದು ದೇಶ? ಏನ್ ಮಾಡೋಕೆ ಹೊರಟ್ಟಿದ್ದಾರೆ? ಏನ್ ಆಗ್ತಾ ಇದೆ. ದಲಿತ ಸ್ವಾಮೀಜಿಗೆ ನಾನು ತಿನ್ನಿಸುತ್ತೇನೆ. ಒಂದ್ ನಿಮಿಷ. ನಿಮ್ಮ ಬಾಯಲ್ಲಿ ಇರೋದನ್ನು ತೆಗೆದು ತಿನ್ನಿಸಿ. ಸ್ವಲ್ಪ ಅನ್ನ ತೆಗೆದು ನನಗೆ ಹಾಕಿ. ಇದು ರೀ… ಇದು ರೀ… ಇವ್ರ ಬಾಯಿಂದ ಅನ್ನ ತೆಗೆದು ತಿಂದಿದ್ದೀನಿ. ತಿಂದಿದ್ದೀನಿ ಅಲ್ವಾ? ಇದು ನಮ್ಮ ದೇಶ, ನಾವೆಲ್ಲಾರು ಒಂದೇ. ನಾವೆಲ್ಲಾರು ಒಂದೇ ಎಂದು ಶಾಸಕ ಜಮೀರ್ ಅಹ್ಮದ್ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಜಮೀರ್ ಈ ರೀತಿಯ ನಡೆ ಟೀಕೆಗೂ ಕಾರಣವಾಗಿದೆ.
A video of Karnataka Congress MLA Zameer Ahmed Khan has gone viral on the internet in which he was seen sharing food with Dalit Swamiji.#congress #bjp #dalit #brotherhood #hindumuslimunity #drbrambedkar #zameerahmedkhan #karnataka #viral #trending #gyanvapimosque #islamophobia pic.twitter.com/j74LiabO4J
— NewsHamster (@NewsHamster1) May 23, 2022
Trying to send a message of brotherhood, a Muslim MLA from Karnataka fed a morsel of food to a Dalit priest, asked him to spit it out and then ate it. The video of the gesture has now gone viral. Zameer Ahmed Khan, Congress legislator from Bengaluru's Chamrajpet, was at an event to mark Ambedkar Jayanti and Eid Milan on Sunday. Targeting radical elements, he said they were trying to create a rift between communities.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm