ಬ್ರೇಕಿಂಗ್ ನ್ಯೂಸ್
27-05-22 10:53 pm HK News Desk ಕರ್ನಾಟಕ
ಬೀದರ್, ಮೇ 27 : ಮಂಡ್ಯದ ಜಾಮಿಯಾ ಮಸೀದಿ, ಮಂಗಳೂರಿನ ಮಳಲಿ ಜುಮ್ಮಾ ಮಸೀದಿಯ ಬಳಿಕ ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಅದೇ ರೀತಿಯ ವಿವಾದ ಕೇಳಿಬಂದಿದ್ದು ಪ್ರಸಿದ್ಧ ಪೀರ್ ಪಾಶಾ ದರ್ಗಾ ಈ ಹಿಂದೆ ಬಸವಣ್ಣನ ಅನುಭವ ಮಂಟಪ ಆಗಿತ್ತು ಎನ್ನುವ ಮಾತು ಕೇಳಿಬಂದಿದೆ.
ಬಸವಕಲ್ಯಾಣ ನಗರದ ಪೀರ್ ಪಾಶಾ ದರ್ಗಾ ಆವರಣದಲ್ಲಿ ಬಸವಣ್ಣನ ಅನುಭವ ಮಂಟಪದ ಕುರುಹುಗಳಿದ್ದು ಗೋಡೆಯ ಚಿತ್ರಣಗಳು, ಕೆರೆ, ಪುಷ್ಕರಣಿಗಳು ವಾಸ್ತವ ಕಟ್ಟಿಕೊಡುತ್ತವೆ ಎಂದು ಹಿಂದು ಸಂಘಟನೆಗಳ ನಾಯಕರು ಹೇಳತೊಡಗಿದ್ದಾರೆ. 12 ನೇ ಶತಮಾನದಲ್ಲಿ ನಿರ್ಮಾಣ ಆಗಿದ್ದ ಅನುಭವ ಮಂಟಪವನ್ನು ನಿಜಾಮರ ಕಾಲದಲ್ಲಿ ವಶಕ್ಕೆ ಪಡೆದು ಪೀರ್ ಪಾಶಾ ದರ್ಗಾ ಎಂದು ಹೆಸರಿಸಲಾಗಿತ್ತು ಎನ್ನಲಾಗುತ್ತಿದೆ.
ಅಂದಿನ ಅನುಭವ ಮಂಟಪದ ಅಡುಗೆ ಕೋಣೆಗಳು, 771 ಶರಣರು ಕುಳಿತುಕೊಂಡು ಧರ್ಮೋಪದೇಶ ಮಾಡುತ್ತಿದ್ದ ಸ್ಥಳ ಯಥಾವತ್ತಾಗಿ ಈಗಲೂ ಇದೆ. ಅಂದಿನ ಕಾಲದಲ್ಲಿ ಈ ಜಾಗ ಲಿಂಗಾಯತ ಧರ್ಮದ ಪ್ರಮುಖ ತಾಣವಾಗಿತ್ತು ಎನ್ನುವ ಮಾಹಿತಿಗಳಿವೆ.
ವಿಶ್ವ ಹಿಂದು ಪರಿಷತ್ ಬೀದರ್ ಜಿಲ್ಲಾಧ್ಯಕ್ಷ ರಾಮಕೃಷ್ಣ , ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಬಸವಣ್ಣ ಅನುಯಾಯಿಗಳಿಗೆ ನ್ಯಾಯ ಕೊಡಬೇಕು. ಅಲ್ಲಿ ಹಿಂದೆ ದೇವಸ್ಥಾನ ಆಗಿತ್ತು ಎಂಬ ಬಗ್ಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಅಲ್ಲಿ ಈಗಲೂ ದೇವಸ್ಥಾನದ ಕೆರೆ, ಕಲಶಗಳು, ಕಂಬಗಳಲ್ಲಿ ಕೆತ್ತನೆಗಳಿವೆ. ಅದು ಹಿಂದಿನ ಕಾಲದಲ್ಲಿ ದೇಗುಲ ಆಗಿತ್ತು ಎನ್ನುವುದಕ್ಕೆ ಬಹಳಷ್ಟು ಸಾಕ್ಷ್ಯಗಳು ಕಾಣಸಿಗುತ್ತಿವೆ ಎಂದಿದ್ದಾರೆ.
ವೀರಶೈವ, ಲಿಂಗಾಯತರು ಬಾಯಿ ಬಿಡಬೇಕು !
ಧಾರವಾಡದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಿಜಾಮನ ಕಾಲದಲ್ಲಿ ಮುಸ್ಲಿಂ ಆಚರಣೆಗಾಗಿ ಒಡೆದು ಹಾಕಿದ್ದಾರೆ. ಅದಕ್ಕೆ ಸಾಕಷ್ಟು ದಾಖಲೆ ಇವೆ. ಈಗ ಅದು ಪೀರ ಪಾಶಾ ಬಂಗ್ಲೆ ಆಗಿದೆ. ಇದು ಹಿಂದೂ ಧರ್ಮದ ನಿರ್ಲಕ್ಷ್ಯದಿಂದ ಆಗಿದೆ. ಸರ್ಕಾರ ಅದನ್ನ ವಾಪಸ್ ಪಡೆದುಕೊಳ್ಳಬೇಕು. ಮುಸ್ಲಿಂ ಸಮಾಜ ಹಠಕ್ಕೆ ಬಿಳದೇ ಅನುಭವ ಮಂಟಪ ಬಿಟ್ಟು ಕೊಡಬೇಕು. ಯಾರು ವೀರಶೈವ, ಲಿಂಗಾಯತ ಪ್ರತಿನಿಧಿಗಳು ಇದ್ದಾರೆ, ಅವರು ಬಾಯಿ ಬಿಡಬೇಕು. ಬಸವಕಲ್ಯಾಣಕ್ಕಾಗಿ ಒಟ್ಟಾಗಬೇಕು ಎಂದು ಹೇಳಿದ್ದಾರೆ.
A fresh mandir-masjid row has cropped up in Karnataka’s Bidar district, as the Vishva Hindu Parishad (VHP) claimed that a dargah in Basavakalyan was actually a Basavanna temple.The VHP has demanded that the government intervene in the dispute and grant justice to the followers of Basavanna. The Hindu outfit claimed there was clear evidence that the dargah was historically a temple.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm