ಬ್ರೇಕಿಂಗ್ ನ್ಯೂಸ್
29-05-22 08:52 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 29 : ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದ್ದು, ನಿರೀಕ್ಷೆಯಂತೆ ನಿರ್ಮಲಾ ಸೀತಾರಾಮನ್ ಸ್ಥಾನ ಗಿಟ್ಟಿಸಿದ್ದರೆ, ಅವರೊಂದಿಗೆ ಅಚ್ಚರಿ ಎಂಬಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ಜಗ್ಗೇಶ್ ಅವರಿಗೂ ಮಣೆ ಹಾಕಿದೆ.
ಬಿಜೆಪಿ ಹೊರಡಿಸಿರುವ ಪಟ್ಟಿಯಲ್ಲಿ ನಿರ್ಮಲಾ ಹೆಸರು ನಿರೀಕ್ಷಿತ ಎನಿಸಿಕೊಂಡಿದ್ದರೆ, ಜಗ್ಗೇಶ್ ಹೆಸರು ರಾಜ್ಯ ಬಿಜೆಪಿ ನಾಯಕರೇ ಅಚ್ಚರಿ ಪಡುವಂತಾಗಿದೆ. ನಿರ್ಮಲಾ ಸೀತಾರಾಮನ್ ಆಯ್ಕೆಯನ್ನು ಊಹಿಸಿದ್ದ ಕಾಂಗ್ರೆಸ್, ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಕಾಣಿಕೆ ಏನು ಎಂದು ಪ್ರಶ್ನಿಸಿದ್ದು, ವೈರಲ್ ಆಗಿತ್ತು. ಹೀಗಾಗಿ ಈ ಬಾರಿ ನಿರ್ಮಲಾ ಬದಲಿಗೆ ಬೇರೊಬ್ಬರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಮಾತು ಕೇಳಿಬಂದಿತ್ತು.
ಒಂದು ಹಂತದಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಉತ್ತರ ಪ್ರದೇಶದಿಂದ ಕಣಕ್ಕಿಳಿಸುವ ಸೂಚನೆಗಳೂ ಇದ್ದವು. ಆದರೆ ಈಗ ರಾಜ್ಯಸಭೆಗೆ ದಿಢೀರ್ ಆಗಿ ಇಬ್ಬರನ್ನು ಆಯ್ಕೆ ಮಾಡಿದ್ದು ನಿರ್ಮಲಾ ಅವರನ್ನೇ ಆಯ್ಕೆ ಮಾಡಿದೆ. ವಿಶೇಷ ಅಂದ್ರೆ, ಕನ್ನಡ ಚಿತ್ರರಂಗಕ್ಕೂ ಅಪರೂಪದಲ್ಲಿ ಎಂಬಂತೆ ರಾಜ್ಯಸಭೆಗೆ ಸ್ಥಾನ ಕೊಟ್ಟಿದೆ. ಜಗ್ಗೇಶ್ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಲ್ಲದೆ, ಎಂಎಲ್ಸಿ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ದೊಡ್ಡ ಸ್ಥಾನವನ್ನೇ ನೀಡಲಾಗಿದೆ.
ಸದ್ಯಕ್ಕೆ ಇಬ್ಬರ ಹೆಸರು ಮಾತ್ರ ಘೋಷಣೆ ಮಾಡಿರುವ ಬಿಜೆಪಿ, ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಾ ಅನ್ನುವ ಕುತೂಹಲ ಉಳಿಸಿಬಿಟ್ಟಿದೆ. ಇಬ್ಬರನ್ನು ಮಾತ್ರ ಕಣಕ್ಕಿಳಿಸಿರುವುದರಿಂದ ಮೂರನೇ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ಮಾತೂ ಕೇಳಿಬರುತ್ತಿದೆ.
Finance Minister Nirmala Sitharaman is selected again for the Raya Sabha from the State. She got renominated from the party on Sunday May 29. BJP decided to field Actor Jaggesh also in the Rajya Sabha election. His nomination comes as a surprise for the party insiders too as he was not in the race.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
06-02-25 12:00 pm
HK News Desk
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm