ಬ್ರೇಕಿಂಗ್ ನ್ಯೂಸ್
30-05-22 05:17 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 30: ಇವತ್ತು ಕೇವಲ ಮತ ಬ್ಯಾಂಕಿಗಾಗಿ ಭಯೋತ್ಪಾದಕರ ಕಾಲು ನೆಕ್ಕುವ ಸ್ಥಿತಿಗೆ ಸಿದ್ದರಾಮಯ್ಯ ಹೋಗಿದ್ದಾರೆ. ಕಾಲು ನೆಕ್ಕುವ ಭಿಕ್ಷಾಟನೆಗೆ ಹೋಗಿದ್ದಾರೆ. ಅವರ ಚಿಂತನೆ ರಾವಣನದ್ದು, ಮುಖ ಮಾತ್ರ ಸಿದ್ದರಾಮನದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನಳಿನ್ ಕುಮಾರ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರು ಸಿದ್ದರಾಮಯ್ಯ ಅವರನ್ನು ಕರ್ನಾಟಕದಿಂದಲೇ ಓಡಿಸಲಿದ್ದಾರೆ ವರುಣಾ ಕ್ಷೇತ್ರದಿಂದ ಓಡಿಸಿದ್ದಾರೆ. ಮುಂದೆ ಬಾದಾಮಿ ಜಿಲ್ಲೆಯಿಂದಲೂ ಓಡಿಸಲಿದ್ದಾರೆ ಎಂದು ಹೇಳಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಯಾಕೆ ಬೇಲ್ ನಲ್ಲಿದ್ದಾರೆ ಅನ್ನುವುದು ತಿಳಿದಿರಬೇಕಲ್ಲ. ನಿಮ್ಮ ಯುವ ಕಾಂಗ್ರೆಸ್ ಅಧ್ಯಕ್ಷನ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಇದೆ ಹೇಳಿ. ಇವತ್ತು ಯಾರಾದ್ರೂ ಕಾಂಗ್ರೆಸ್ ಸೇರಬೇಕಿದ್ದರೆ ಕನಿಷ್ಠ ಐವತ್ತು ಕ್ರಿಮಿನಲ್ ಕೇಸ್ ಇರಬೇಕು ಎನ್ನುವಂಥ ಸ್ಥಿತಿ ಇದೆ. ಕಾಂಗ್ರೆಸ್ ಇವತ್ತು ಭ್ರಷ್ಟರ ಪಕ್ಷ, ಉಗ್ರರ ಪಕ್ಷ ಅನ್ನುವಂತಾಗಿದೆ.
ಇಷ್ಟಕ್ಕೂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಕೊಟ್ಟಿದ್ದೀರಿ. ಅಲ್ಪಸಂಖ್ಯಾತರಿಗೆ ಶಾದಿಭಾಗ್ಯ, ಪತ್ರಕರ್ತರಿಗೆ ಲ್ಯಾಪ್ಟಾಪ್ ಕೊಟ್ಟು ಅದರಲ್ಲೂ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಕೊಟ್ಟಿದ್ದಿರಿ. ಆನಂತರ ವೀರಶೈವ- ಲಿಂಗಾಯತ ಸಮುದಾಯವನ್ನೂ ಒಡೆಯಲು ಮುಂದಾಗಿದ್ರಿ. ಇದರಿಂದ ಕೈಸುಟ್ಟು ಕೊಂಡಿದ್ದೀರಿ. ಹೀಗಾಗಿ ಸಿದ್ದರಾಮಯ್ಯ ಅಂದರೆ ಬ್ರಿಟಿಷರ ರೀತಿ ಒಡೆದಾಳುವ ಮನುಷ್ಯ ಅನ್ನೋದು ಸಾಬೀತಾಗಿದೆ. ಮುಂದಿನ ಬಾರಿ ಕಾಂಗ್ರೆಸ್ ಪೂರ್ತಿ ನೆಲಕಚ್ಚಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ.
Siddaramaiah licks boots of terrorist, controversial statement by Bjp Nalin Kumar Kateel. 9: “Former CM Siddaramaiah, who rose to power by begging with Nehru family, has gone mad with the dream of becoming CM again. That is why he is talking nonsense and spreading hatred in Karnataka. Siddaramaiah does not have the moral right to speak about RSS, which is building the nation,” said MP and state BJP president Nalin Kumar Kateel.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm