ಬ್ರೇಕಿಂಗ್ ನ್ಯೂಸ್
04-06-22 10:29 pm HK News Desk ಕರ್ನಾಟಕ
ಮಂಡ್ಯ, ಜೂನ್ 4: ಶ್ರೀರಂಗಪಟ್ಟಣದ ವಿವಾದಿತ ಜಾಮಿಯಾ ಮಸೀದಿ ಚಲೋ ಹಮ್ಮಿಕೊಂಡಿದ್ದ ಹಿಂದು ಸಂಘಟನೆಗಳ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಇವತ್ತು ಇಡೀ ದಿನ ಹೈಡ್ರಾಮಾ ನಡೆದಿದೆ. 144 ಸೆಕ್ಷನ್ ವಿಧಿಸಿ ಶ್ರೀರಂಗಪಟ್ಟಣ ಪ್ರವೇಶಕ್ಕೆ ಬಿಡಲ್ಲ ಎಂದು ಪೊಲೀಸರು ಬಿಗಿ ಕಾವಲು ಹಾಕಿದ್ದರೆ, ಅದನ್ನು ವಿಫಲಗೊಳಿಸಿ ನುಗ್ಗುತ್ತೇವೆ ಎಂದು ಬಂದಿದ್ದ ಕೇಸರಿ ಹೊತ್ತ ಕಾರ್ಯಕರ್ತರನ್ನು ಬನ್ನಿಮಂಟಪದ ಬಳಿಯಲ್ಲೇ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಹೀಗಾಗಿ ಹೆದ್ದಾರಿಯಲ್ಲೇ ಕುಳಿತು ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸೆಕ್ಷನ್ ಹೊರತಾಗಿಯೂ ಬೆಳಗ್ಗೆ ಹತ್ತು ಗಂಟೆ ವೇಳೆಗೆ ಏಕಕಾಲದಲ್ಲಿ ನಾಲ್ಕೂ ಕಡೆಯಿಂದ ಕಾರ್ಯಕರ್ತರು ನುಗ್ಗಿ ಬಂದಿದ್ದು, ಕೇಸರಿ ಧ್ವಜ ಹಿಡಿದು ಬನ್ನಿಮಂಟಪದ ಬಳಿ ಸೇರಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಆಟೋ, ಬೈಕ್, ಕಾರುಗಳಲ್ಲಿ ಬಂದ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಬಳಿಕ ಹಿಂದು ಸಂಘಟನೆ ಕಾರ್ಯಕರ್ತರು ಕಿರಂಗೂರು ಬಳಿಯ ದಸರಾ ಬನ್ನಿಮಂಟಪದಲ್ಲಿ ಕುಳಿತು ಹನುಮನ ಮೂರ್ತಿ ಇಟ್ಟು ಭಜನೆ ಮಾಡಿದ್ದಾರೆ.
ಇದೇ ವೇಳೆ, ಸೇರಿದ ಜನರನ್ನು ಉದ್ದೇಶಿಸಿ ಮಾತನಾಡಿದ ವಿಎಚ್ ಪಿ ಜಿಲ್ಲಾ ಸಂಯೋಜಕ ಬಸವರಾಜು, ಮಂಡ್ಯ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಏನ್ರೀ ಜಿಲ್ಲಾಧಿಕಾರಿಗಳೇ, ನೀವು ರಿಯಲ್ ಎಸ್ಟೇಟ್ ಮಾಫಿಯಾದವರ ಜೊತೆ ಮಾತುಕತೆ ಮಾಡ್ತಿದ್ದೀರಾ? ನಿಮಗೆ ಮೊದಲೇ ಲಿಖಿತ ಮನವಿ ಕೊಟ್ಟು ಪ್ರತಿಭಟನೆ ಮಾಡುತ್ತಿದ್ದರೂ, ಕನಿಷ್ಠ ಇಲ್ಲಿ ಬಂದು ಮನವಿ ಪಡೆಯೋದಕ್ಕೂ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಆನಂತರ, ಅಧಿಕಾರಿಗಳು ಇಲ್ಲಿ ಬರೋ ವರೆಗೂ ಪ್ರತಿಭಟನೆ ಮುಂದುವರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇಂದಿನ ಹೋರಾಟ ಕೇವಲ ಸಾಂಕೇತಿಕ, ಇದು ನಿಲ್ಲೋದಿಲ್ಲ. ಮಸೀದಿ ಇರುವ ಜಾಗದಲ್ಲಿ ಹಿಂದೆ ದೇಗುಲ ಇದ್ದದ್ದು ನಿಮಗೆ ಗೊತ್ತಿಲ್ವಾ? ಈ ಬಗ್ಗೆ ಕ್ರಮ ಜರುಗಿಸಲು ಆಗದಿದ್ದರೆ, ರಾಜಿನಾಮೆ ಕೊಟ್ಟು ಹೋಗಿ. ನಾವೇ ನಮ್ಮ ಮಂದಿರ ವಾಪಸ್ ಪಡೆದುಕೊಳ್ಳುವ ಕೆಲಸ ಮಾಡುತ್ತೇವೆ. ಮನವಿ ಕೊಟ್ಟು 20 ದಿನಗಳು ಕಳೆದರೂ ಪ್ರತಿಕ್ರಿಯೆ ನೀಡಿಲ್ಲ. ಈಗ ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಮಿಯಾ ಮಸೀದಿ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಕಟ್ಟಡವಾಗಿದ್ದು ಕಾಯ್ದೆ ಪ್ರಕಾರ ಅಲ್ಲಿಗೆ ಯಾರಿಗೂ ಪ್ರವೇಶ ಇರುವುದಿಲ್ಲ. ಯಾರು ಕೂಡ ವಾಸ್ತವ್ಯ ನಡೆಸುವಂತೆಯೂ ಇಲ್ಲ. ಹೀಗಿದ್ದರೂ ಮಸೀದಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಮದರಸ ಶಿಕ್ಷಣ ಕೊಡಲಾಗುತ್ತಿದೆ. ಮಸೀದಿಯ ಒಳಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ವಾಸ್ತವ್ಯ ಇದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸಂಘಟನೆಯ ಪ್ರಮುಖರು, ಅವರನ್ನು ಹೊರಕ್ಕೆ ಕಳಿಸಬೇಕು, ಇಲ್ಲದಿದ್ದರೆ ನಾವು ಒಳಗೆ ಬಂದು ಹನುಮನ ಪೂಜೆ ನಡೆಸ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ಶ್ವೇತಾ ಅವರು ಹಿಂದು ಸಂಘಟನೆ ಪ್ರಮುಖರಿಂದ ಮನವಿ ಪತ್ರವನ್ನು ಸ್ವೀಕರಿಸಿದರು. ಈ ವೇಳೆಯೂ, ಮಸೀದಿ ಕಟ್ಟಡ ಯಾರಿಗೆ ಸೇರಿದ್ದು ಹೇಳಿ ಎಂದು ಪಟ್ಟು ಹಿಡಿದು ಘೆರಾವ್ ಹಾಕಿದ ಘಟನೆ ನಡೆಯಿತು. ಆದರೆ ಅದನ್ನು ನಾವು ಹೇಳುವಂತಿಲ್ಲ. ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳೇ ಹೇಳಬೇಕು ಎಂದು ಹೇಳಿ ತಹಸೀಲ್ದಾರ್ ನುಣುಚಿಕೊಂಡಿದ್ದಾರೆ. ಶ್ರೀರಂಗಪಟ್ಟಣ ಚಲೋ ಹಿನ್ನೆಲೆ ಜಾಮಿಯಾ ಮಸೀದಿ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು.
The ‘Srirangapatna Chalo’ programme of the Vishwa Hindu Parishad (VHP) and other Hindutva groups to lay siege to the 18 th century mosque in the island town and perform puja was thwarted by the Mandya district authorities on May 4.While a prohibitory order under Section 144 was in force since June 3 evening, the police had posted personnel in Srirangapatna, and the road leading to the mosque was out of bounds for the general public, forcing the activists to stage an agitation on the outskirts of the town.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm