ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ದೇಶದೆಲ್ಲೆಡೆ ಹಿಂಸಾಚಾರ ; ಬೆಂಗಳೂರು ಪೊಲೀಸರಿಂದ "ಹೈ"ಮೀಟಿಂಗ್ , ಮುಸ್ಲಿಂ ಮುಖಂಡರಿಗೆ ಖಡಕ್ ವಾರ್ನಿಂಗ್ ! 

11-06-22 07:25 pm       Bengalore Correspondent   ಕರ್ನಾಟಕ

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಧರ್ಮಗುರುಗಳ ಸಭೆಯನ್ನು ಕರೆಯಲಾಗಿದ್ದು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿಯವರ ನೇತೃತ್ವದಲ್ಲಿ ಧರ್ಮಗುರುಗಳ ಸಭೆ ನಡೆದಿದೆ. ನಗರ ಎಲ್ಲಾ ಮುಸ್ಲಿಂ ಧರ್ಮಗುರುಗಳನ್ನು ಸಭೆಗೆ ಆಹ್ವಾನವನ್ನು ನೀಡಲಾಗಿದೆ.

ಬೆಂಗಳೂರು, ಜೂ 11: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಧರ್ಮಗುರುಗಳ ಸಭೆಯನ್ನು ಕರೆಯಲಾಗಿದ್ದು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿಯವರ ನೇತೃತ್ವದಲ್ಲಿ ಧರ್ಮಗುರುಗಳ ಸಭೆ ನಡೆದಿದೆ. ನಗರ ಎಲ್ಲಾ ಮುಸ್ಲಿಂ ಧರ್ಮಗುರುಗಳನ್ನು ಸಭೆಗೆ ಆಹ್ವಾನವನ್ನು ನೀಡಲಾಗಿದೆ.

ನೂಪುರ್ ಶರ್ಮಾ ಪ್ರವಾದಿ ಮಹಮದ್ ಪೈಗಂಬರ್ ಬಗ್ಗೆ ಅವಹೇಳನ ಕಾರಿ ಹೇಳಿಯನ್ನು ಖಂಡಿಸಿ ಮುಸ್ಲಿಂ ಸಮುದಾಯ ಬೀದಿಗಿಳಿದು ಪ್ರತಿಭಟನೆಗಳನ್ನು ಮಾಡುತ್ತಿದೆ. ಮುಸ್ಲಿಂ ಧರ್ಮಗುರುಗಳ ಮುಖಾಂತರವಾಗಿ ಶಾಂತಿಯನ್ನು ಕಾಪಾಡಲು ಸಭೆಯನ್ನು ಕರೆಯಲಾಗಿದೆ.

ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಗಾಬಾರದು ಎಂಬ ದೃಷ್ಟಿಯಿಂದ ಧರ್ಮಗುರುಗಳ ಸಭೆಯನ್ನು ಕರೆಯಲಾಗಿದೆ. ಮಸ್ಜೀದ್‌ಗಳಲ್ಲಿ ಶಾಂತಿಯನ್ನು ಕಾಪಾಡುವಂತ ತಮ್ಮ ಸಮುದಾಯಗಳಿಗೆ ತಿಳಿಯನ್ನು ಹೇಳಬೇಕು. ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನು ಸುವ್ಯವಸ್ಥೆಗೆ ಭಂಗತರುವ ಕೆಲವನ್ನು ಮಾಡಿದರೇ ಪೊಲೀಸರು ತೆಗೆದುಕೊಳ್ಳುವ ಕ್ರಮಗಳೇನು ಎಂಬದನ್ನು ಧರ್ಮಗುರುಗಳು, ಮೌಲ್ವಿಗಳ ಮುಖಾಂತರವಾಗಿ ಮುಸ್ಲಿಂ ಸಮಾಜಕ್ಕೆ ಸಂದೇಶವನ್ನು ಕಳುಹಿಸುವ ಸಲುವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಮ್ಮ ಕಚೇರಿಯಲ್ಲೇ ಮುಸ್ಲಿಂ ಧರ್ಮಗುರುಗಳ ಸಭೆಯನ್ನು ಕರೆಯಲಾಗಿದೆ.

Nupur Sharma Prophet remarks row Delhi Police files FIR in connection with  protests outside Jama Masjid | India News – India TV

Google News

ಮುಸ್ಲಿಂ ಸಮುದಾಯದವರು ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ವಿರುದ್ದ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಮೀರಿ ಸಾರ್ವಜನಿಕರ ಆಸ್ತಿ ಪಾಸ್ತಿಯನ್ನು ನಷ್ಟ ಮಾಡುತ್ತಿದ್ದಾರೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡುವಂತೆ ಸೂಚನೆಯನ್ನು ನೀಡಿದ್ದರು.

sugata bose | The Indian Express

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಭೆ;

Contractor suicide case: CM Bommai refutes alleged interference in  investigation- The New Indian Express

ಮುಖ್ಯಮಂತ್ರಿಗಳ ಸೂಚನೆಯಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ನಗರ ಪೊಲೀಸ್ ಆಯುಕ್ತರು ಮೌಲ್ವಿಗಳು, ಕೆಲ ಮುಸ್ಲಿಂ ಸಮುದಾಯದ ಪ್ರಭಾವಿಗಳನ್ನು ಕಚೇರಿಗೆ ಕರೆಸಿ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಸೂಚಿಸಿದ್ದಾರೆ. ಇದರೊಂದಿಗೆ ಮುಸ್ಲಿಂ ಸಮುದಾಯದ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಆದರೆ ಕಾನೂನಿನ ಎಲ್ಲೆಯನ್ನು ಮೀರಬಾರದು ಎಂದಿದ್ದಾರೆ.

ಸ್ಥಳೀಯ ಪೊಲೀಸರ ಅನುಮತಿ ಕಡ್ಡಾಯ;

Saudi Arabia becomes latest country to condemn Nupur Sharma's remarks on  Prophet Muhammad

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆಯನ್ನು ಮಾಡಬೇಕಾದಲ್ಲಿ ಸ್ಥಳೀಯ ಪೊಲೀಸರ ಅನುಮತಿ ಕಡ್ಡಾಯವಾಗಿ ಪಡೆಯಲೇಬೇಕು. ಪ್ರತಿಭಟನೆಗೆ ಅನುಮತಿ ಪಡೆಯದೇ ಬೀದಿಗಿಳಿದರೇ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಪ್ರತಾಪ್ ರೆಡ್ಡಿಯವರು ಸಭೆಯಲ್ಲಿ ನೀಡಿದ್ದಾರೆ. ಒಂದಾಗಿರು ಸಮಾಜದಲ್ಲಿ ಒಗ್ಗಟ್ಟಾಗಿ ಬಾಳಬೇಕೆಂದರೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಮಸೀದಿಗಳಲ್ಲಿ ಧರ್ಮ ಪ್ರವಚನ ಮಾಡುವ ಸಂದರ್ಭದಲಲ್ಲಿ ಮುಸ್ಲಿಂ ಸಮುದಾಯದ ಜನರಿಗೆ ತಿಳಿಹೇಳಿ. ಈ ನೆಲದ ಕಾನೂನನ್ನು ಗೌರವಿಸುವಂತೆ ತಿಳಿಸಿ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮುಸ್ಲಿಂ ಧರ್ಮಗುರಗಳ ಸಭೆಯಲ್ಲಿ ತಿಳಿಸಿದ್ದಾರೆ.

Nupur Sharma prophet row, Bangalore police commissioner calls for meeting with Muslim leaders to maintain peace and not indulge with protest and destroy government priorities. Islamists have continued to hound and threaten the ex-BJP spokesperson Nupur Sharma and her family since the time Alt News co-founder Mohammed Zubair shared her video with a commentary on Prophet Mohammad to encourage trolls to attack her. In the last week of May 2022, during a news debate, Nupur Sharma asked what if she makes offensive remarks about Islam the way people were making offensive remarks about Shivling and Hinduism.