ಬ್ರೇಕಿಂಗ್ ನ್ಯೂಸ್
15-06-22 11:52 am Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 15 : ಹಾಸ್ಟೆಲ್ ನಲ್ಲಿದ್ದು ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿಯನ್ನು ವ್ಯಾನ್ ಚಾಲಕ ಪ್ರೀತಿಸಿ ಮದುವೆಯಾದ ಪ್ರಕರಣದಲ್ಲಿ ಹೈಕೋರ್ಟ್, ಹುಡುಗ - ಹುಡುಗಿ ಪ್ರಾಪ್ತ ವಯಸ್ಕರಾಗಿದ್ದರಿಂದ ಸ್ವ ಇಚ್ಚೆಯಿಂದಲೇ ಮದುವೆಯಾಗಿದ್ದೇವೆ ಎಂಬ ಹುಡುಗಿ ಹೇಳಿಕೆ ಮೇರೆಗೆ ಹೆತ್ತವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿದ ಪ್ರಕರಣ ನಡೆದಿದೆ.
ಮಗಳನ್ನು ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿದ್ದಾನೆ ಎಂದು ಹೇಳಿ ಆಕೆಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವೀರಪ್ಪ ಅವರಿದ್ದ ವಿಭಾಗೀಯ ಪೀಠ ಹುಡುಗ- ಹುಡುಗಿಗೆ ಜೀವನದ ಪಾಠವನ್ನು ತಿಳಿಸಿಕೊಟ್ಟು ಅರ್ಜಿ ವಜಾಗೊಳಿಸಿದೆ.
ವಿದ್ಯಾರ್ಥಿನಿ, ತನಗೆ 19 ವರ್ಷವಾಗಿದ್ದು, ವಯಸ್ಕಳಾಗಿದ್ದೇನೆ. ಕಾನೂನು ಪ್ರಕಾರ ತನಗೆ ಒಪ್ಪಿತ ಗಂಡಿನೊಂದಿಗೆ ಮದುವೆಯಾಗಲು ಅವಕಾಶ ಇದೆ. ಆತ ತನ್ನನ್ನು ಅಕ್ರಮ ಬಂಧನದಲ್ಲಿ ಇಟ್ಟಿಲ್ಲ. ಸ್ವಂತ ಇಚ್ಛೆಯಿಂದಲೇ ಆತನ ಜೊತೆಗೆ ತೆರಳಿದ್ದು ಮದುವೆಯಾಗಿದ್ದೇವೆ. ನಮ್ಮನ್ನು ಜೀವಿಸಲು ಬಿಡಿ ಎಂದು ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಳು. ಅಲ್ಲದೆ, ಹುಡುಗ ಕೂಡ ತಾನು ಆಕೆಯನ್ನು ಇಂಜಿನಿಯರಿಂಗ್ ಓದಿಸುತ್ತೇನೆ. ಜೀವಿತ ಕಾಲದ ವರೆಗೂ ಆಕೆಯನ್ನು ಜೋಪಾನ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ.
ಹೆತ್ತವರಿಗಿಂತ ದೊಡ್ಡ ದೇವರಿಲ್ಲ!
ಹುಡುಗ- ಹುಡುಗಿಯ ಮಾತು ಮತ್ತು ಹುಡುಗಿ ಹೆತ್ತವರ ಅಳಲು ಕೇಳಿದ ನ್ಯಾಯಾಧೀಶರು ಜೀವನ ಪಾಠ ಹೇಳಿಕೊಟ್ಟಿದ್ದಾರೆ. ಹೆತ್ತವರಿಗಿಂತ ದೊಡ್ಡ ದೇವರಿಲ್ಲ. ಸಹಾನುಭೂತಿಗಿಂತ ದೊಡ್ಡ ಧರ್ಮವಿಲ್ಲ. ಜನ್ಮ ನೀಡಿ ಬೆಳೆಸಿದ ತಂದೆ-ತಾಯಿಯ ಋಣ ತೀರಿಸಲು ಅಸಾಧ್ಯ. ಪ್ರೌಢಾವಸ್ಥೆಗೆ ಬಂದ ಕೂಡಲೇ ತಾವು ಸ್ವತಂತ್ರರು ಎಂದು ಹೇಳಿ ಬಯಸಿದ ಸಂಗಾತಿಯನ್ನು ಪ್ರೇಮ ವಿವಾಹವಾಗುವ ಮುನ್ನ ಪೋಷಕರು ತಮಗಾಗಿ ಮಾಡಿದ ತ್ಯಾಗವನ್ನು ಮಕ್ಕಳು ಒಮ್ಮೆ ನೆನಪಿಸಿಕೊಳ್ಳಬೇಕು. ಮಕ್ಕಳು ಪೋಷಕರಿಗೆ ನೋವು ನೀಡಬಾರದು ಎಂದು ಹೇಳಿ ಹುಡುಗ - ಹುಡುಗಿಗೆ ಹೆತ್ತವರ ಅಳಲನ್ನು ಮನದಟ್ಟು ಮಾಡಿದ್ದಾರೆ.
ಹುಡುಗಿ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿವಾಸಿಯಾಗಿದ್ದು ಮಂಡ್ಯದ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದಳು. ಹಾಸ್ಟೆಲ್‌ನಲ್ಲಿ ತಂಗಿದ್ದ ಆಕೆ ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೀತಿಸಿದ್ದು ಕೆಲವು ದಿನಗಳ ಹಿಂದೆ ಪೋಷಕರಿಗೆ ತಿಳಿಯದಂತೆ ಓಡಿ ಹೋಗಿ ಮದುವೆಯಾಗಿದ್ದರು.
ತಂದೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಮಗಳನ್ನು ಪುಸಲಾಯಿಸಿ ವ್ಯಾನ್ ಚಾಲಕ ಮದುವೆಯಾಗಿದ್ದು ಮಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೇಳಿಕೊಂಡಿದ್ದರು. ಊರು ಬಿಟ್ಟು ಹೋಗಿದ್ದ ಯುವ ಜೋಡಿಯನ್ನು ಪೊಲೀಸರು ಪತ್ತೆಹಚ್ಚಿ ಕೋರ್ಟಿಗೆ ಹಾಜರು ಪಡಿಸಿದ್ದರು.
The High Court of Karnataka observed that “love is blind and a more powerful weapon than the love and affection of the parents...” in the case of a 19-year-old engineering student who had eloped with a 32-year-old driver of her college bus, married him, and started staying with him without informing her parents.A Division Bench comprising Justice B. Veerappa and Justice K.S. Hemalekha made these observations in its recent order while dismissing a habeas corpus petition filed by girl’s father accusing that daughter is in illegal detention of college bus driver.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm