ಬ್ರೇಕಿಂಗ್ ನ್ಯೂಸ್
18-06-22 01:01 pm Bengalore Correspondent ಕರ್ನಾಟಕ
ಬೆಂಗಳೂರು, ಜೂ 18: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸುದ್ದಿಗೋಷ್ಠಿ ನಡೆಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಗಳಿಸಿದೆ.
6,83,563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತೀರ್ಣ ಪ್ರಮಾಣ: ಬಾಲಕಿಯರು: ಶೇ.68.72 ಮತ್ತು ಬಾಲಕರು: ಶೇ.55.22 ಇದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.88.02 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಉಡುಪಿ (ಶೇ. 86.38) ಇದ್ದರೆ, ಶೇ.49.31 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ.
ರಾಜ್ಯಕ್ಕೆ ಟಾಪರ್ ಇವರು:
ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗು ತಾಲ್ಲೂಕು ಕೊಟ್ಟೂರು ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು ವಿದ್ಯಾರ್ಥಿನಿಯರಾದ ಶ್ವೇತಾ ಭೀಮಶಂಕರ್ ಬೈರಗೊಂಡ ಮತ್ತು ಮಡಿವಾಳರ ಸಹನಾ 600ಕ್ಕೆ 594 ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ದಾಸನಪುರದಲ್ಲಿರುವ ಬಿಜಿಎಸ್ ಪಿಯು ಕಾಲೇಜಿನ ನೀಲು ಸಿಂಗ್, ಜಾಲಹಳ್ಳಿಯಲ್ಲಿರುವ ಸೇಂಟ್ ಕ್ಲಾರೆಟ್ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿ ಆಕಾಶ್ ದಾಸ್, ಚಿಕ್ಕಬಳ್ಳಾಪುರ ಅಗಲಗುರ್ಕಿ ಎಸ್‌ಬಿಜಿಎನ್‌ಎಸ್ ರೂರಲ್ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿನಿ ನೇಹಾ ಬಿ.ಆರ್. ಮತ್ತು ಜಯನಗರ ಪಿಯು ಕಾಲೇಜಿನ ವಿದ್ಯಾರ್ಥಿ ಮಾನವ್ ವಿಜಯ್ ಕೇಜರಿವಾಲ್ 600ಕ್ಕೆ 596 ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ.
ಇನ್ನು ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ಜಯನಗರ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಸಿಮ್ರಾನ್ ಶೀಷಾ ರಾವ್ 600ಕ್ಕೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದಾರೆ.
ಕಾಲೇಜುವಾರು ಫಲಿತಾಂಶವನ್ನು ಗಮನಿಸಿದಾಗ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 52.84, ಅನುದಾನಿತ ಪದವಿ ಪೂರ್ವ ಕಾಲೇಜು ಶೇ. 62.05, ಅನುದಾನ ರಹಿತ ಪದವಿ ಪೂರ್ವ ಕಾಲೇಜು 76.50, ಕಾರ್ಪೊರೇಷನ್ ಪದವಿ ಪೂರ್ವ ಕಾಲೇಜು 55.72, ವಿಭಜಿತ ಪದವಿ ಪೂರ್ವ ಕಾಲೇಜು 72.96 ಬಂದಿದೆ.
For Results visit:
http://karresult.nic.in/
The Department of Pre-University Education (DPUE) has announced the results for the Pre-university course (PUC) II 2022. The +2 result was announced today at 11 am via a press conference.The Karnataka PUC II examinations were successfully conducted from April 16 to May 4, 2022, in a centre based mode. The examination began at 10:15 am and was continued till 1:30 pm.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm