ಬ್ರೇಕಿಂಗ್ ನ್ಯೂಸ್
20-06-22 08:58 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 20: ಸರಕಾರದ ಕೆಲವು ನಿರ್ಧಾರಗಳು ಈಗ ಕಹಿಯಾಗಿ ಕಾಣಬಹುದು. ಆದರೆ, ಅವು ಭವಿಷ್ಯದಲ್ಲಿ ಉತ್ತಮ ಫಲ ಕೊಡಲಿವೆ ಎನ್ನುವ ಮೂಲಕ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯನ್ನು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಸಮರ್ಥನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ರೈಲು ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ಕೊಮ್ಮಘಟ್ಟದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮೋದಿ, ನಮ್ಮ ಸರಕಾರದ ಕೆಲವು ಯೋಜನೆಗಳು ಈಗ ಕಹಿಯಾಗಿ ಕಂಡರೂ, ನಾಳೆ ಅದರ ಫಲ ದಕ್ಕಲಿವೆ ಎಂದು ಹೇಳಿದರು. ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಮೋದಿ ಈ ಹೇಳಿಕೆ ಮಹತ್ವ ಪಡೆದಿದೆ.
ಸಾರ್ವಜನಿಕ ವಲಯದಷ್ಟೇ ಖಾಸಗಿ ವಲಯಕ್ಕೂ ಆದ್ಯತೆ ನೀಡಬೇಕಿದೆ. ಎರಡೂ ಕಡೆ ಸಮಾನ ಅವಕಾಶಗಳಿವೆ. ಆದರೆ ಜನರ ಮನಸ್ಥಿತಿ ಬದಲಾಗಿಲ್ಲ. ಖಾಸಗಿ ಕಂಪನಿಗಳ ಬಗ್ಗೆ ಜನರು ಉತ್ತಮ ಅಭಿರುಚಿ ಹೊಂದಿಲ್ಲ ಎಂದು ಮೋದಿ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲೂ ಬೆಂಗಳೂರಿನ ಯುವಜನರು ವಿಶ್ವದಾದ್ಯಂತ ಸುಗಮ ವಹಿವಾಟಿಗೆ ಶ್ರಮಿಸಿದ್ದಾರೆ. ಸರ್ಕಾರದ ಮಧ್ಯಪ್ರವೇಶ ಇಲ್ಲದಿದ್ದರೂ ದೇಶವನ್ನು ಸುಗಮ ಸ್ಥಿತಿಗೆ ಒಯ್ಯಬಹುದು ಎಂಬುದನ್ನು ತೋರಿಸಿದ್ದಾರೆ ಎಂದರು.
ಬೆಂಗಳೂರಿನ ಜನರ ಎಲ್ಲ ಆಶಯಗಳನ್ನು ಈಡೇರಿಸಲು ನಮ್ಮ ಸರಕಾರ ಬದ್ಧ ಇದೆ. ನಲವತ್ತು ವರ್ಷ ಕನಸಾಗಿದ್ದ ಸಬ್ ಅರ್ಬನ್ ರೈಲನ್ನು ಈಗ ಆರಂಭಿಸುವ ಸುಯೋಗ ನಮಗೆ ಲಭಿಸಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಸಬ್ ಅರ್ಬನ್ ರೈಲು ಯೋಜನೆ ಮಾದರಿಯಲ್ಲೇ ರಿಂಗ್ ರಸ್ತೆಯನ್ನು ಅಗಲೀಕರಣ ಮಾಡುತ್ತೇವೆ. ಆಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನೀಗಿಸಲು ಶ್ರಮಿಸುತ್ತೇವೆ ಎಂದು ಹೇಳಿದರು.
40 ವರ್ಷಗಳ ಕಾಲ ಕೇವಲ ಚರ್ಚೆಯಲ್ಲಿ ಮಾತ್ರ ಇದ್ದ ಸಬ್ ಅರ್ಬನ್ ರೈಲನ್ನು ಕೇವಲ 40 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಇನ್ನು ಕೆಲವೇ ತಿಂಗಳಲ್ಲಿ ನಗರ ರೈಲು ಯೋಜನೆಯನ್ನು ಪೂರ್ತಿಗೊಳಿಸಲು ಬದ್ಧತೆ ಹೊಂದಿದ್ದೇವೆ ಎಂದರು ಮೋದಿ.
In the last 8 years, railway infrastructure across Karnataka has been significantly enhanced. This is helping crores of citizens. pic.twitter.com/Z5JDX3tCat
— Narendra Modi (@narendramodi) June 20, 2022
Karnataka Bengaluru News Live, Prime Minister Narendra Modi on Monday inaugurated and laid foundation stones for rail and road infrastructure projects worth over Rs 28,000 crores in Karnataka. The prime minister said that “Bengaluru is a reflection of the spirit of Ek Bharat – Shreshtha Bharat. The development of Bengaluru is the development of millions of dreams. Therefore, in the last 8 years, it has been a continuous effort of the Central government to develop Bengaluru further.”
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm