ಬ್ರೇಕಿಂಗ್ ನ್ಯೂಸ್
21-06-22 07:54 pm HK News Desk ಕರ್ನಾಟಕ
ಮಂಡ್ಯ, ಜೂ 21 : ಮಂಡ್ಯ ನಗರದ ಸರಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಮಂಡ್ಯ ಶಾಸಕ, ಜೆಡಿಎಸ್ ನಾಯಕ ಎಂ. ಶ್ರೀನಿವಾಸ್ ಕಪಾಳಮೋಕ್ಷ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಮಂಡ್ಯದ ಉನ್ನತೀಕರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಐಟಿಐ ಕಾಲೇಜು ಉದ್ಘಾಟನೆ ವೇಳೆ ಶಾಸಕ ಎಂ. ಶ್ರೀನಿವಾಸ್ ಕೇಂದ್ರದ ಪ್ರಾಂಶುಪಾಲ ನಾಗಾನಂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಐಟಿಐ ಕೇಂದ್ರಕ್ಕೆ ಆಗಮಿಸಿದ ಶಾಸಕ ಕೇಂದ್ರವನ್ನು ಉದ್ಘಾಟಿಸಿದರು. ನಂತರ ನಗರಸಭಾಧ್ಯಕ್ಷ ಎಚ್.ಎಸ್. ಮಂಜು ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಮತ್ತು ನಗರಸಭಾಧ್ಯಕ್ಷ ಪ್ರಯೋಗಾಲಯದ ಒಳಗೆ ತೆರಳಿದದರು, ಆದರೆ ಕಿರಿದಾದ ಜಾಗವಾಗಿದ್ದರಿಂದ ಪ್ರಾಂಶುಪಾಲರು ಮುಂದೆ ಬರಲು ಸಾಧ್ಯವಾಗಲಿಲ್ಲ. ಈ ವೇಳೆ ಕಂಪ್ಯೂಟರ್ ಕೊಠಡಿ ವೀಕ್ಷಣೆ ವೇಳೆ ಮಾಹಿತಿಗಾಗಿ ಪ್ರಾಂಶುಪಾಲರನ್ನು ಹುಡುಕಾಡಿದ್ದಾರೆ.
ತಡವಾಗಿ ಮುಂದೆ ಬಂದಿದ್ದರಿಂದ ಕುಪಿತಗೊಂಡ ಶ್ರೀನಿವಾಸ್ ಪ್ರಾಂಶುಪಾಲರಾದ ನಾಗಾನಂದ್ ಮುಂದೆ ಬರುತ್ತಿದ್ದಂತೆ ಅವರಿಗೆ ಮೂರ್ನಾಲ್ಕು ಏಟುಕೊಟ್ಟಿದ್ದಾರೆ. ಬಂದ ಅತಿಥಿಗಳಿಗೆ ಇಲ್ಲಿನ ಕಾರ್ಯಕ್ಷೇತ್ರ ಮತ್ತು ಕಾರ್ಯಕ್ಷಮತೆ ಬಗ್ಗೆ ವಿವರಿಸದ ಪ್ರಾಂಶುಪಾಲರ ಕ್ರಮಕ್ಕೆ ಶಾಸಕ ಕೋಪಗೊಂಡಿಡು ಕೈ ಮಾಡಿದ್ದಾರೆ.
ಶಾಸಕರ ದಿಢೀರ್ ಕೋಪದಿಂದ ಒಂದು ಕ್ಷಣ ಗಲಿಬಿಲಿಗೊಂಡ ಪ್ರಾಂಶುಪಾಲರು ನಗುತ್ತಲೇ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಶಾಸಕರು ಮತ್ತು ಅತಿಥಿಗಳು ಕೇಂದ್ರದಲ್ಲಿರುವ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿ ಪ್ರಾಂಶುಪಾಲರು, ಅಧ್ಯಾಪಕರದಿಂದ ವಿವರಣೆ ಪಡೆದು ತೃಪ್ತರಾಗಿ ಹೊರನಡೆದರು.
A JD(S) MLA in Karnataka slapped a college principal who was not able to provide clear answer about the ongoing development work for a computer lab. The incident, which happened on Monday, has created a huge outrage among the public.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm