ಬ್ರೇಕಿಂಗ್ ನ್ಯೂಸ್
22-06-22 01:13 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 22 : ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಇದ್ದುದು ಕೇವಲ ನಾಲ್ಕೂವರೆ ಗಂಟೆ. ಆದರೆ ಇಷ್ಟಕ್ಕೇ ಮೋದಿ ಭದ್ರತೆ, ಮೂಲಸೌಕರ್ಯ, ಪ್ರಧಾನಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿ ಬರೋಬ್ಬರಿ 23 ಕೋಟಿ ರೂಪಾಯಿ ಖರ್ಚು ಮಾಡಿದೆ.
ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಸೋಮವಾರ ಬೆಳಗ್ಗೆ 11.30 ಕ್ಕೆ ಯಲಹಂಕ ವಾಯುನೆಲೆಗೆ ಮೋದಿ ಆಗಮಿಸಿದ್ದರು. ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ದರು.
ಮೋದಿ ಸಾಗುವ ರಸ್ತೆ, ಅಲ್ಲಿನ ಮೂಲ ಸೌಕರ್ಯ, ಇನ್ನಿತರ ಭದ್ರತಾ ವ್ಯವಸ್ಥೆಗಾಗಿ ಬಿಬಿಎಂಪಿ ಖರ್ಚು ನಿಭಾಯಿಸಿದೆ. ಅಂದಾಜು ಪ್ರಕಾರ, ಪ್ರತಿ ನಿಮಿಷಕ್ಕೆ 5,18,518 ರೂಪಾಯಿ ಖರ್ಚು ಮಾಡಿದೆ. ಅದರಂತೆ, ಪ್ರತಿ ಗಂಟೆಗೆ 3.11 ಕೋಟಿ ರೂ. ಖರ್ಚು ಮಾಡಲಾಗಿದ್ದು ನಾಲ್ಕೂವರೆ ಗಂಟೆಯ ಕಾರ್ಯಕ್ರಮ, ಇನ್ನಿತರ ಕೆಲಸಕ್ಕಾಗಿ ಒಟ್ಟು 14 ಕೋಟಿ ವ್ಯಯ ಮಾಡಲಾಗಿದ್ಯಂತೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ ರವೀಂದ್ರ ಮಾಹಿತಿ ನೀಡಿದ್ದು ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ 14 ಕಿಮೀ ರಸ್ತೆಯನ್ನು ಡಾಮರೀಕರಣ ಸೇರಿದಂತೆ ರೀ ಡೆವಲಪ್ ಮಾಡಲಾಗಿದೆ. ಬಳ್ಳಾರಿ ರಸ್ತೆ, ಬೆಂಗಳೂರು ಯುನಿವರ್ಸಿಟಿ ರಸ್ತೆ, ಕೊಮ್ಮಘಟ್ಟ ರಸ್ತೆ ಸೇರಿ 15 ದಿನಗಳಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಪಡಿಸಲಾಗಿದ್ದು ಇದಕ್ಕಾಗಿ 23 ಕೋಟಿ ರೂಪಾಯಿ ಮೊತ್ತವನ್ನು ತುರ್ತು ನಿಧಿಯಿಂದ ವ್ಯಯಿಸಲಾಗಿದೆ ಎಂದು ಹೇಳಿದರು.
ಮೋದಿ ಬೆಂಗಳೂರಿನಲ್ಲಿ ರೈಲು ಯೋಜನೆ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 28 ಸಾವಿರ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಐಐಎಸ್ಸಿಯಲ್ಲಿ ಮಿದುಳು ಸಂಶೋಧನಾಲಯ ಉದ್ಘಾಟಿಸಿದ್ದರು. ಆ ಕಡೆ ಈ ಕಡೆ ಹತ್ತು ಕಿಮೀ ಪ್ರಯಾಣಿಸಿದ್ದರು. ಪ್ರಧಾನಿ ಆಗಮನ ಸಂದರ್ಭದಲ್ಲಿ ರಸ್ತೆ ಹದಗೆಟ್ಟ ಸ್ಥಿತಿಯಲ್ಲಿರಬಾರದು ಎನ್ನುವ ಕಾರಣಕ್ಕೆ ಆ ಭಾಗದಲ್ಲಿ ತುರ್ತಾಗಿ ಕಾಮಗಾರಿ ನಿರ್ವಹಿಸಲಾಗಿತ್ತು.
Heavy showers have always made Bengaluru roads difficult to manoeuvre, for both vehicle users and pedestrians. This is especially true as people complain of the threat of potholes, open drains and manholes inundated with water which have led to fatalities in the past.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm