ಬ್ರೇಕಿಂಗ್ ನ್ಯೂಸ್
23-06-22 02:02 pm HK News Desk ಕರ್ನಾಟಕ
ಬೆಳಗಾವಿ, ಜೂನ್ 23: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಸಾಕು ನಾಯಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬರೋಬ್ಬರಿ 5000 ಮಂದಿಗೆ ಊಟ ಹಾಕಿಸಿ ಪ್ರೀತಿ ಮರೆದಿದ್ದು ಚಾರ್ಲಿ ಸಿನಿಮಾ ಹಿನ್ನೆಲೆಯಲ್ಲಿ ಸುದ್ದಿಗೆ ಗ್ರಾಸವಾಗಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿಯಲ್ಲಿ ಈ ಪ್ರಸಂಗ ನಡೆದಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ 20 ವರ್ಷಗಳಿಂದ ಸದಸ್ಯರಾಗಿರುವ ಶಿವಪ್ಪ ಮರ್ದಿ ಎಂಬವರು, ತಮ್ಮ ಸಾಕು ನಾಯಿ 'ಕ್ರಿಶ್' ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ನಾಯಿಯ ಜನ್ಮದಿನಕ್ಕೆ 1 ಕ್ವಿಂಟಲ್ ತೂಕದ ಕೇಕ್ ಕತ್ತರಿಸಿದ್ದಲ್ಲದೇ ಗ್ರಾಮದ 5 ಸಾವಿರ ಮಂದಿಗೆ ಊಟ ಹಾಕಿಸಿದ್ದಾರೆ. 3 ಕ್ವಿಂಟಾಲ್ ಚಿಕನ್, 1 ಕ್ವಿಂಟಾಲ್ ಮೊಟ್ಟೆ, ಸಸ್ಯಾಹಾರಿಗಳಿಗೆ 50 ಕೆಜಿ ಕಾಜೂ ಕರಿ ಊಟ ಹಾಕಿಸಿದ್ದಾರೆ. ಕೇಕ್ ಕತ್ತರಿಸಿದ ನಂತರ ನಾಯಿಗೆ ಗ್ರಾಮದಲ್ಲಿ ವಾದ್ಯಗಳ ಮೂಲಕ ಅದ್ಧೂರಿಯಾಗಿ ಮೆರವಣಿಗೆಯನ್ನು ಸಹ ಮಾಡಿಸಲಾಗಿದೆ. ಈ ವೇಳೆ ಊರಿನ ಜನರೆಲ್ಲ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.
ನಾಯಿ ಮಾಲೀಕ ಶಿವಪ್ಪ ಮರ್ದಿ ಕಳೆದ 20 ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ. ಈ ವೇಳೆ ನೂತನ ಸದಸ್ಯರೊಬ್ಬರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಹಳೆ ಸದಸ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹಿಂದಿನ ಸದಸ್ಯರು ನಾಯಿಯಂತೆ ತಿಂದು ಹೋಗಿದ್ದಾರೆಂದು ಅವಮಾನ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಅವರಿಗೆ ಪ್ರತ್ಯುತ್ತರ ಕೊಡುವ ಸಲುವಾಗಿ ಶಿವಪ್ಪ ಮರ್ದಿ ನಾಯಿಯ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಲ್ಲದೇ ಐದು ಸಾವಿರ ಜನರಿಗೆ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
A man threw an extravagant #birthdayparty for his #petdog by cutting a 100 kg cake and feeding 4000 people with veg & non veg food in Mudalagi taluk #Belagavi #Karnataka. Later, Shivappa Mardi along with his dog Krish went on a procession with a music band. pic.twitter.com/NPX1M5iKk8
— Imran Khan (@KeypadGuerilla) June 23, 2022
A man threw an extravagant birthday party for his petdog by cutting a 100 kg cake and feeding 5000 people with veg & non veg food in Mudalagi taluk Belagavi Karnataka. Later, Shivappa Mardi along with his dog Krish went on a procession with a music band.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm