ರಾಜ್ಯದಲ್ಲಿ 16 ಐಪಿಎಸ್ ವರ್ಗಾವಣೆ ; ದಕ್ಷ ಅಧಿಕಾರಿ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್ ಹಾಸನಕ್ಕೆ ಎಸ್ಪಿ ! 

27-06-22 04:04 pm       bangalore Correspondent   ಕರ್ನಾಟಕ

ರಾಜ್ಯದಲ್ಲಿ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಂಗಳೂರು ನಗರ ಡಿಸಿಪಿ ಆಗಿದ್ದ ಹರಿರಾಮ್ ಶಂಕರ್ ಅವರನ್ನು ಹಾಸನ ಎಸ್ಪಿ ಆಗಿ ಪದೋನ್ನತಿಗೊಳಿಸಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು, ಜೂನ್ 27 : ರಾಜ್ಯದಲ್ಲಿ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಂಗಳೂರು ನಗರ ಡಿಸಿಪಿ ಆಗಿದ್ದ ಹರಿರಾಮ್ ಶಂಕರ್ ಅವರನ್ನು ಹಾಸನ ಎಸ್ಪಿ ಆಗಿ ಪದೋನ್ನತಿಗೊಳಿಸಿ ವರ್ಗಾವಣೆ ಮಾಡಲಾಗಿದೆ. ಒಂದೂವರೆ ವರ್ಷಗಳಿಂದ ಮಂಗಳೂರು ಡಿಸಿಪಿ ಆಗಿದ್ದ ಹರಿರಾಮ್ ಶಂಕರ್, ದಕ್ಷ, ಪ್ರಾಮಾಣಿಕ ಅಧಿಕಾರಿಯೆಂದು ಹೆಸರು ಮಾಡಿದ್ದರು. 

ಉಳಿದಂತೆ ಶ್ರೀನಾಥ್ ಮಹದೇವ ಜೋಶಿ- ಲೋಕಾಯುಕ್ತಾ SP, ಸಿ.ಕೆ ಬಾಬಾ- ಆಗ್ನೇಯ ವಿಭಾಗ ಡಿಸಿಪಿ, ಬೆಂಗಳೂರು ಪಶ್ಚಿಮ ಡಿಸಿಪಿ ಆಗಿದ್ದ ಸಂಜೀವ್ ಪಾಟೀಲ್- ಬೆಳಗಾವಿ ಎಸ್ಪಿ, ಕಲಾ ಕೃಷ್ಣಸ್ವಾಮಿ- ಪೂರ್ವ ಸಂಚಾರಿ ವಿಭಾಗ ಡಿಸಿಪಿ, ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ನಾಗೇಶ್ ಡಿ.ಎಲ್.- ಚಿಕ್ಕಬಳ್ಳಾಪುರ SP, ಶ್ರೀನಿವಾಸ್ ಗೌಡ - ಕೇಂದ್ರ ವಿಭಾಗ ಡಿಸಿಪಿ, ಸಿ.ಕೆ. ಮಿಥುನ್ ಕುಮಾರ್ - ಸಿಐಡಿ ಎಸ್ಪಿ, ಪಿ. ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ, ಜೈಪ್ರಕಾಶ್- ಬಾಗಲಕೋಟೆ SP, ಶೋಭಾರಾಣಿ - ಎಸಿಬಿ SP, ಶಿವಾಂಶು ರಾಜಪೂತ್ - ASP ಹುಮ್ನಾಬಾದ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. 

Mangalore Today | Latest main news of mangalore, udupi - Page  Sanjeev-M-Patil-is-new-SP-of-Udupi-district

Speech by Sri Laxman Nimbargi IPS, SP Udupi in Vidyaposhak Function at  Rajangana, Udupi. - YouTube

ckbaba - YouTube

ಬೆಂಗಳೂರು ನಗರದಲ್ಲಿ ನಾಲ್ವರು ಡಿಸಿಪಿಗಳು ವರ್ಗಾವಣೆ ಆಗಿದ್ದಾರೆ. ಈ ಪೈಕಿ ಮೂವರು ಬೆಂಗಳೂರಿಗೆ ಹೊಸ ಐಪಿಎಸ್ ಅಧಿಕಾರಿಗಳು. ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಸಂಜೀವ್ ಪಾಟೀಲ್ ಬದಲಿಗೆ ಲಕ್ಷ್ಮಣ್ ಹಿಬರಗಿ , ಬೆಂಗಳೂರು ದಕ್ಷಿಣ ವಿಭಾಗಕ್ಕೆ ಹರೀಶ್ ಪಾಂಡೆ ಬದಲಾಗಿ ಪಿ. ಕೃಷ್ಣಕಾಂತ್ ರನ್ನು, ಬೆಂಗಳೂರು ಆಗ್ನೇಯ ವಿಭಾಗಕ್ಕೆ ಶ್ರೀನಾಥ್ ಮಹದೇವ್ ಜೋಶಿ ಬದಲಾಗಿ ಸಿ.ಕೆ ಬಾಬರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಸಿ.ಕೆ ಬಾಬರವರು ಈ ಹಿಂದೆ ಈಶಾನ್ಯ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.

The Karnataka government transferred 16 senior police IPS officers on Monday, June 27. City police commissionerate deputy commissioner of police (DCP) Hariram Shankar has been transferred as the superintendent of police of Hassan. He took charge as DCP of Mangaluru on November 20, 2020. Before taking charge as DCP, Hariram was Karkala sub-division ASP.