ಪಿಎಸ್ಐ ಬಿಗ್ ಡೀಲ್ ; ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ! ಕಡೆಗೂ ಸಿಐಡಿ ಖೆಡ್ಡಾಕ್ಕೆ ಬಿದ್ದ ಅಭ್ಯರ್ಥಿಗಳಿಂದ 30 ಲಕ್ಷ ಪಡೆದಿದ್ದ ಡೀಲ್ ರಾಜ ! 

04-07-22 03:48 pm       Bangalore Correspondent   ಕರ್ನಾಟಕ

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಮಹತ್ವದ ಹೆಜ್ಜೆ ಇಟ್ಟಿದ್ದು ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರನ್ನು ಬಂಧಿಸಿದ್ದಾರೆ. 

ಬೆಂಗಳೂರು, ಜುಲೈ 4: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಮಹತ್ವದ ಹೆಜ್ಜೆ ಇಟ್ಟಿದ್ದು ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರನ್ನು ಬಂಧಿಸಿದ್ದಾರೆ. 

ಸಿಐಡಿ ಅಧಿಕಾರಿಗಳು ಪಿಎಸ್ಐ ಅಕ್ರಮ ಸಂಬಂಧ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಅವರನ್ನು ನಾಲ್ಕೈದು ಬಾರಿ ವಿಚಾರಣೆ ನಡೆಸಿದ್ದರು. ನಾಲ್ಕನೇ ಬಾರಿ ವಿಚಾರಣೆ ನಡೆಸಿ ಎಡಿಜಿಪಿ ಅಧಿಕಾರಿಯನ್ನೇ ಖೆಡ್ಡಾಗೆ ಕೆಡವಿದ್ದಾರೆ. 

PSI recruitment scam: Got Bluetooth device at exam centre, says accused |  udayavani

File:High Court of Karnataka, Bangalore MMK.jpg - Wikipedia

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಹೈಕೋರ್ಟ್ ಇತ್ತೀಚೆಗೆ ಚಾಟಿ ಬೀಸಿತ್ತು. ಮೇಲಿನ ಹಂತದ ಅಧಿಕಾರಿಗಳನ್ನು ವಿಚಾರಣೆ ನಡೆಸದ ಬಗ್ಗೆ ಪ್ರಶ್ನೆ ಮಾಡಿತ್ತು. ಇದರ ಬೆನ್ನಲ್ಲೇ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ. 

PSI exam scam: CID summons toppers for questioning | udayavani

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಿಎಸ್ಐ ಅಭ್ಯರ್ಥಿಗಳಿಂದ ತಲಾ 30 ಲಕ್ಷ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದ ಅಮೃತ್ ಪೌಲ್ ಬಗ್ಗೆ ಸೂಕ್ತ ಸಾಕ್ಷ್ಯ ಕಲೆಹಾಕಿದ್ದ ಸಿಐಡಿ ತಂಡ ಎಡಿಜಿಪಿ ಅಧಿಕಾರಿಯನ್ನೇ ಖೆಡ್ಡಾಕ್ಕೆ ಹಾಕಿದೆ. ಪೌಲ್ ಬಂಧನ ಬೆನ್ನಲ್ಲೇ ರಾಜ್ಯದ ಇತರೇ ಪ್ರಭಾವಿಗಳಿಗೂ ನಡುಕ ಉಂಟಾಗಿದೆ. ರಾಜಕೀಯ ನಾಯಕರಿಗೂ ತಮ್ಮ ಹೆಸರು ಬರುತ್ತಾ ಅನ್ನುವ ಆತಂಕ ಶುರುವಾಗಿದೆ.

Karnataka ADGP Amrit Paul is arrested in PSI recruitment scam. Paul was in charge of police recruitment wing when the scam came to light.  Amrit Paul was transferred from the police recruitment wing in the last week of April after the scam snowballed into a political controversy.